ಅನಂತಕುಮಾರವರ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ

 ಹಾವೇರಿ :

         ರಾಜಕೀಯ ಜೀವನದಲ್ಲಿ ಎಲ್ಲರೊಂದಿಗೆ ತಾರತಮ್ಯ ರಹಿತ ಬದುಕಿದ ಅನಂತಕುಮಾರವರ ಸಾವು ಪಕ್ಷಕ್ಕೆ ತುಂಬಲಾರದ ನಷ್ಟವನ್ನು ಉಂಟು ಮಾಡಿದೆ ಜಿಲ್ಲಾ ಅಧ್ಯಕ್ಷರಾದ ಶಿವರಾಜ ಸಜ್ಜನವರ ಹೇಳಿದರು. ನಗರದ ಸೀತಾರಾಮ ಕಲ್ಯಾಣ ಮಂಟಪದಲ್ಲಿ ನಡೆದ ದಿ. ಅನಂತಕುಮಾರ ರವರ ಶ್ರದ್ದಾಂಜಲಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

         ಅನ್ಯ ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಅನಂತಕುಮಾರವರು ಯಾವುದೇ ಫಲಾಪೇಕ್ಷೆಯಿಲ್ಲದೆ,ಅತ್ಯಂತ ಶ್ರೇದ್ದೆಯಿಂದ ನಿರ್ವಹಿಸುತ್ತಿದ್ದರು. ಹಸಿದ ಹೊಟ್ಟಿಯಲ್ಲಿ ಸೈಕಲ್ ಮೇಲೆ ತಿರುಗಿ ಪಕ್ಷವನ್ನು ಕಟ್ಟಿ ರಾಷ್ಟ್ರದಲ್ಲಿ ಏಕೈಕ ಪಕ್ಷ ಸರ್ಕಾರ ರಚಿಸುವಲ್ಲಿ ಅನಂತಕುಮಾರವರ ಪಾತ್ರ ಬಹುಮುಖ್ಯವಾಗಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮೋದಿಜೀಯವರ ಜೊತೆ ಅನಂತಕುಮಾರವರು 24X7 ರೂಪದಲ್ಲಿ ಕಾರ್ಯನಿರ್ವಹಿಸಿದರು. ಚಲನಚಿತ್ರ ನಟ ಅಂಬರೀಶ ಮತ್ತು ಜಾಫರ ಶರೀಫ್ ಅವರಿಗೂ ಕೂಡಾ ಶ್ರದ್ದಾಂಜಲಿ ಅರ್ಪಿಸಿದರು.

         ಜಿಲ್ಲಾ ಪ್ರಧಾನಕಾರ್ಯಾದರ್ಶಿ ಸಿದ್ದರಾಜ ಕಲಕೋಟಿ ಮಾತನಾಡಿ ಅನಂತಕುಮಾರವರು ವಿಧ್ಯಾರ್ಥಿ ದೆಸೆಯಿಂದಲೆ ನಾಯಕರಾಗಿ ಹೊರಹೊಮ್ಮಿದವರು. ಎಬಿವಿಪಿಯ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಜನರೀಕ್ ಔಷಧಿ ಮಾಳಿಗೆ ದೇಶಾದ್ಯಾಂತ ಪರಿಚಯಿಸಿ ಅತ್ಯಂತ ಕಡೆಮೆ ದರದಲ್ಲಿ ಬಡವರಿಗೆ, ರೈತರಿಗೆ, ಜನಸಾಮನ್ಯರಿಗೆ ಆರೋಗ್ಯ ಸೌಲಭ್ಯ ಒದಗಿಸಿದರು. ಅವರ ಅಕಾಲಿಕ ಮರಣ ಅವರ ಕುಟುಂಬಕ್ಕೆ ಹಾಗೂ ಪಕ್ಷಕ್ಕೆ ಅಪಾರ ನೂವುನ್ನು ಉಂಟುಮಾಡಿದೆ ಎಂದರು.
ಬ್ಯಾಡಗಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ,ಮಾಜಿ ಸಂಸದರಾದ ಮಂಜುನಾಥ ಕುನ್ನೂರ ಅವರ ಹೋರಾಟದ ಜೀವನದ ಶೈಲಿ ಇಂದಿನ ಯುವ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿದೆ ಎಂದು ಹೇಳಿದರು.

          ಈ ಸಂದರ್ಭದಲ್ಲಿ ಭಾರತಿ ಮಲ್ಲಿಕಾರ್ಜುನ, ಮುತ್ತಣ್ಣ ಯಲಿಗಾರ, ಶೋಭಾ ನಿಸ್ಸಮಗೌಡರ, ಡಾ. ಸಂತೋಷ ಆಲದಕಟ್ಟಿ, ಎಂ.ಎನ್. ಈಟೇರ, ಲಿಂಗರಾಜ ಚಪ್ಪರದಹಳ್ಳಿ, ಮುರಗೆಪ್ಪ ಶೆಟ್ಟರ, ಶಿವಾನಂದ ಮ್ಯಾಗೇರಿ.ಶಂಕ್ರಣ್ಣ ಮಾತನವರ, ಎಂ.ಬಿ. ಪಾಟೀಲ, ಮಾಲತೇಶ ಸೋಪ್ಪಿನ, ನಿಂಗಪ್ಪ ಗೊಬ್ಬೇರ, ಚೋಳಪ್ಪ ಕಸವಾಳ, ವಿರುಪಾಕ್ಷಪ್ಪ ಕಡ್ಲಿ, ಸಿಡಿ ಹಾವೇರಿ, ಮಂಡಲಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link