ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಪಠಾಣ..!!!

ಹಾವೇರಿ

     ಕಾಂಗ್ರೇಸ್ ಪಕ್ಷದಲ್ಲಿ ಸುಮಾರು 30 ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ,ಹಾವೇರಿ ಲೋಕಸಭಾ ಕ್ಷೇತ್ರದ ಟಿಕೇಟ್ ನೀಡುವಲ್ಲಿ ನನಗೆ ಅನ್ಯಾಯವಾಗಿದ್ದು, ಕಾಂಗ್ರೇಸ್ ಪಕ್ಷಕ್ಕೆ ಅಸಮಾಧಾನದಿಂದ ಗುಡ್ ಬೈ ಹೇಳುತ್ತಿದ್ದು, ಅಧಿಕೃತವಾಗಿ ಬಹುಜನ ಸಮಾಜ ಪಕ್ಷವನ್ನು ಸೇರಲಿದ್ದೇನೆ ಎಂದು ವಕೀಲರಾದ ಎ,ಎ ಪಠಾಣ ಹೇಳಿದರು. ನಗರದ ಖಾಸಗಿ ಹೊಟೇಲಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ತಿಳಿಸಿದರು.

      ಕಾಂಗ್ರೇಸ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಈ ಲೋಕಸಭಾ ಚುನಾವಣೆಯಲ್ಲಿ 2 ಸೀಟುಗಳನ್ನು ನೀಡಲು ಹಿಂದೆ ಮುಂದೆ ನೋಡುತ್ತಿದೆ. ಹಾವೇರಿ ಲೋಕಸಭಾ ಚುನಾವಣೆ ಹಿಂದಿನ ಕಾಲದಿಂದಲೂ ಅಲ್ಪಸಂಖ್ಯಾತರ ಕ್ಷೇತ್ರ ಎಂದೆ ಬಿಂಬಿತವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮುಸ್ಲಿಂ ವರ್ಗಕ್ಕೆ ಈ ಬಾರಿ ಅಸಮಾಧಾನ ಹೆಚ್ಚಾಗಿದೆ.ನಾನು ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದು,್ದ ಸ್ಥಳೀಯರಿಗೆ ಅವಕಾಶ ನೀಡಿಲ್ಲ.

      ಮಾಜಿ ಸಚಿವ ಬಸವರಾಜ ಶಿವಣ್ಣನವರ, ಸಲೀಂ ಅಹ್ಮದ್ ಹಾಗೂ ವೀರಶೈವ ಲಿಂಗಾಯತರಿಗೆ ಟಿಕೇಟ್ ದೊರೆಯದೇ ಇರುವುದು ಕ್ಷೇತ್ರದ ಮತದಾರಿಗೆ ಅಸಮಾಧಾನ ಹೆಚ್ಚಾಗಿದ್ದು, ಮತದಾರರು ಯಾರಿಗೆ ಮತ ಹಾಕಬೇಕು ಎಂಬ ಕುತೂಹಲದಲ್ಲಿ ಇದ್ದರು. ಪರೋಕ್ಷವಾಗಿ ಎಲ್ಲ ವರ್ಗದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ನಮ್ಮ ಬೆಂಬಲಿಗೆ ಬರಲಿದ್ದಾರೆ. ಬಿಎಸ್ಪಿ ಪಕ್ಷದ ಮುಖಂಡರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ.

       ಆದರೆ ಯಾವುದೇ ಷರತ್ತು ಇಲ್ಲದೇ ಬಿಎಸ್ಪಿ ಪಕ್ಷ ಸೇರಲಿದ್ದೇನೆ. ಪಕ್ಷದ ನಾಯಕರು ನಮ್ಮ ಬಗ್ಗೆ ಎಲ್ಲ ಮಾಹಿತಿಯನ್ನು ಕೇಳಿ ಮಾಯಾವತಿಯವರ ಬಳಿ ಕಳುಹಿಸಿಕೊಟ್ಟಿದ್ದಾರೆ ಕಾದು ನೋಡುತ್ತೇನೆ. ಟಿಕೇಟ್ ನೀಡಿದರೆ ಎಲ್ಲ ವರ್ಗದ ಜನರ ಆರ್ಶಿವಾದ ಪಡೆಯುವ ಮೂಲಕ ಸ್ಪರ್ಧೆ ಮಾಡುತ್ತೇನೆ ಎಲ್ಲರ ಸಹಕಾರ ಮುಖ್ಯ ಎಂದು ಎ,ಎ ಪಠಾಣ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಶಶಿಧರ ಹಳ್ಳಿಕೇರಿ,ಡಿ,ಎಚ್ ಕಾಗಿನೆಲೆ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link