ಸಂಪೂರ್ಣ ಮಧ್ಯ ನಿಷೇಧಕ್ಕಾಗಿ ಆಗ್ರಹಿಸಿ ಮಹಿಳೆಯರಿಂದ ಪತ್ರ ಚಳುವಳಿ

ಹಗರಿಬೊಮ್ಮನಹಳ್ಳಿ

      ಕರ್ನಾಟಕ ರಾಜ್ಯಾದ್ಯಂತ ಸಂಪೂರ್ಣ ಮಧ್ಯ ನಿಷೇಧ ಮಾಡದಿದ್ದರೆ, ನಮ್ಮ ಸಂಘಟನೆಯ ಮತಗಳು ಯಾರಿಗೂ ನೀಡುವುದಿಲ್ಲ ಎಂದು ಗ್ರಾಮೀಣ ಮಹಿಳಾ ಒಕ್ಕೂಟದ ತಾಲೂಕು ಸಂಚಾಲಕಿ ಅಕ್ಕಮಹಾದೇವಿ ಎಚ್ಚರಿಸಿದರು.

      ತಾಲೂಕಿನ ಮರಬ್ಬಿಹಾಳು ಹಾಗೂ ಸೊನ್ನ ಗ್ರಾಮದ ಅಂಚೆ ಕಚೇರಿ ಬಳಿ ಗ್ರಾಮೀಣ ಮಹಿಳೆಯರ ಒಕ್ಕೂಟ ಹಮ್ಮಿಕೊಂಡಿದ್ದ ರಾಜ್ಯದಲ್ಲಿ ಸಂಪೂರ್ಣ ಮಧ್ಯ ನಿಷೇಧ ಪತ್ರ ಚಳುವಳಿ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿದರು. ನಾವು ಸುಮಾರು ಮೂರ್ನಾಲ್ಕು ವರ್ಷಗಳಿಂದ ಸತತವಾಗಿ ರಾಜ್ಯದಲ್ಲಿ ಸಂಪೂರ್ಣ ಮಧ್ಯ ನಿಷೇದಕ್ಕಾಗಿ ಹೋರಾಟಮಾಡಿಕೊಂಡು ಬಂದಿದ್ದೇವೆ.

      ಆದರೆ ನಮ್ಮ ಗ್ರಾಮೀಣ ಮಹಿಳೆಯರ ಅಳಲನ್ನು ಕೇಳಲು ಯಾವ ಸರ್ಕಾರಗಳಿಗೂ ಕಿವಿಗಳೇ ಇದ್ದಂತಿಲ್ಲ. ಸರ್ಕಾರವೇ ನಿಂತಿದ್ದು ಎಮ್‍ಎಸ್‍ಐಎಲ್ ಹೆಸರಲ್ಲಿ ಮಧ್ಯದಂಗಡಿಗಳನ್ನು ತೆರೆದಿರುವಾಗ ನಮ್ಮ ಗೋಳನ್ನು ಕೇಳುವವರು ಯಾರು? ದಿನಗೂಲಿ ಮಾಡಿ ಬದುಕುವ ನಮ್ಮಂತಹ ಬಡವರ ಮನೆಯಲ್ಲಿ ಗಂಡಸರು ಬಂದ ಕೂಲಿಯನ್ನೆಲ್ಲ ಮಧ್ಯದಂಗಡಿಗೆ ಇಟ್ಟು ಬರಿಗೈಯಲ್ಲಿ ಮನೆಗೆ ಬಂದು ಹೆಂಡತಿ ಮಕ್ಕಳನ್ನು ಹಿಂಸಿಸುವುದು ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತಿದೆ. ಹಾಗಾಗಿ ಈ ಕೂಡಲೇ ಸರ್ಕಾರಗಳು ಸಂಪೂರ್ಣ ಮಧ್ಯ ನಿಷೇದಕ್ಕೆ ಮನಸ್ಸು ಮಾಡಿ ಮಹಿಳೆಯರ ಸಂಕಷ್ಟವನ್ನು ಪರಿಹರಿಸಬೇಕಿದೆ ಎಂದರು.

       ಮುಂದುವರೆದು ಮಾತನಾಡಿ, ಇತ್ತೀಚೆಗೆ ಜ.19ರಿಂದ 30ರವರೆಗೆ 12ದಿನಗಳ ಕಾಲ ಮೂರು ಸಾವಿರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು, ಚಿತ್ರದುರ್ಗದಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಮಾಡುವ ಮೂಲಕ ರಾಜ್ಯದಲ್ಲಿ ಮಧ್ಯ ನಿಷೇಧÀ ಮಾಡಬೇಕೆಂದು ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿದ್ದರು, ಆದರೆ, ಸರ್ಕಾರ ಯಾವುದೇ ರೀತಿ ಸ್ಪಂದಿಸಲಿಲ್ಲ.

       ಆದ್ದರಿಂದ ಏ.23ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರೂ ಪಕ್ಷಗಳಿಗೂ ನಮ್ಮ ಮತ ಬೇಕೆಂದಿದ್ದರೆ ಈ ಕೂಡಲೇ ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸಂಪೂರ್ಣ ಮಧ್ಯ ನಿಷೇದ ಮಾಡುತ್ತೇವೆ ಎಂದು ಘೋಷಿಸಬೇಕು. ಇಲ್ಲದಿದ್ದರೆ ನಮ್ಮ ಮತ ನಿಮಗೆ ಸಿಗುವುದಿಲ್ಲ ಎಂದರು.ಮಹಿಳೆಯರು ಪತ್ರಗಳನ್ನು ಬರೆದು ಆಯಾ ಗ್ರಾಮದ ಅಂಚೆ ಕಚೇರಿಯ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಮದ್ಯ ನಿಷೇಧಿ ಪತ್ರ ಚಳುವಳಿ ಮಾಡಿದರು.

          ಸಂಘಟನೆಯ ಕೊಟ್ರಮ್ಮ, ದುರುಗಮ್ಮ, ಶಾರದಮ್ಮ, ಮರಿಯಮ್ಮ, ಉಮಾದೇವಿ, ಶಶಿಕಲಾ, ಜಯಮಾಲಾ, ಸುಜಾತಾ, ನಾಗರತ್ನ, ರುದ್ರಮ್ಮ, ಚೌಡಮ್ಮ, ಅನ್ನಪೂರ್ಣಮ್ಮ, ನೀಲಪ್ಪ, ಎಂ.ಮಾಳಮ್ಮ, ಕೆ.ಮುದುಕಮ್ಮ, ಎಂ.ಶ್ಯಾಮಲ, ಹೆಚ್.ಗೀತಾ, ಟಿ.ಷಣ್ಮುಕಪ್ಪ, ಡಿ.ಎಲ್ಲಪ್ಪ ಮತ್ತು ಗ್ರಾಮದ ಹಲವಾರು ಮಹಿಳೆಯರು ಈ ಪತ್ರ ಚಳುವಳಿಯಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link