ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಸನ್ಮಾನ..!!

ಹಾವೇರಿ :

          ನಾಡಿನ ಸಾಕ್ಷಿ ಪ್ರಜ್ಞೆಯಾದ ನೂರು ತುಂಬಿದ ನಾಡೋಜ ಪಾಟೀಲ ಪುಟ್ಟಪ್ಪನವರನ್ನು ಜಿಲ್ಲಾ ಆಡಳಿತ ಭವನದಲ್ಲಿ ಡಾ. ವಿ ಕೃ . ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನ ವತಿಯಿಂದ ಸನ್ಮಾನಿಸಲಾಯಿತು.

           ಟ್ರಸ್ಟ್‍ನ ತ್ರೈಮಾಸಿಕ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ವೆಂಕಟೇಶ ಎಂ ವ್ಹಿ ಅವರು ಸುಂದರ ಫಲಕ ಫಲ – ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು. ನಂತನ ಮಾತನಾಡಿದ ಜಿಲ್ಲಾಧಿಕಾರಿಗಳು ನಾವೆಲ್ಲ ಗರ್ವ ಪಡುವ ಅಭಿಮಾನದ ಕನ್ನಡಿಗ ನಾಡೋಜ ಪಾಟೀಲ ಪುಟ್ಟಪ್ಪನವರು. ಕನ್ನಡಕ್ಕೆ ಕುತ್ತು ಬಂದಾಗಲೆಲ್ಲ ಯಾರ ಹಂಗೂ ಇಲ್ಲದೆ ನಿರ್ಭಯ ನಿಷ್ಟುರ ನುಡಿಯ ಪಾಟೀಲ ಪುಟ್ಟಪ್ಪನವರು ನಮಂತ ಅಧಿಕಾರಿಗಳಿಗೆ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶಿಗಳಾಗಿದ್ದಾರೆ ಎಂದರು.

       ಗೋಕಾಕ್ ರ ಪುತ್ರ ಹಿರಿಯ ಐ ಎ ಎಸ್ ಅಧಿಕಾರಿ ಅನಿಲ ಗೋಕಾಕ್ ಅವರು ನನ್ನ ತಂದೆ ಮತ್ತು ಪಾಪು ಅವರು ಆರೇಳು ದಶಕಗಳ ಕಾಲ ತುಂಬ ಆಪ್ತವಾಗಿ ಕುಟುಂಬ ಸ್ನೇಹಿತರಂತೆ ಬದುಕಿದವರು. ಪುಟದ್ಟಪ್ಪನವರದು ಚಲನಶೀಲ ನಾಯಕತ್ವ. ಜೀವನದ ಕ್ರಿಕೇಟ್ ನಲ್ಲಿ ಶತಕ ಬಾರಿಸಿದ ಅಪ್ಪಟ ಕನ್ನಡಿಗ ಎಂದರು.

       ಡಾ. ವಿ ಕೃ . ಗೋಕಾಕ್ ರ ಅಳಿಯ ಎನ್ ಪಿ ಭಟ್ಟ ರವರು ಮಾತನಾಡಿ ನಾವೆಲ್ಲ ಪಾಟೀಲ ಪುಟ್ಟಪ್ಪ ನವರ ಕಾಲದಲ್ಲಿ ಬದುಕಿರುವುದೇ ಹೆಮ್ಮೆ ಎಂದರೆ,ಹಿರಿಯ ಲೇಖಕಿ ಡಾ. ಕಮಲಾ ಹಂಪನಾ ಅವರು ಪಾಟೀಲ ಪುಟ್ಟಪ್ಪನವರು ಶತಾಯಿಷಿಗಳಾಗಿ ಹೊಸ ಇತಿಹಾಸ ಬರೆದಿದ್ದಾರೆ. ಸರಕಾರ ಮಣಿಯುವ ಮಾತುಗಳನ್ನು ಆಡುವ ಶಕ್ತಿ ಹೊಂದಿದವರು. ಯಾರ ಹಂಗಿನಲ್ಲಿ ಬದುಕದ ಗಟ್ಟಿ ಜೀವ ಎಂದರು.

       ವಿಮರ್ಶಕ ಡಾ. ಜಿ ಎಂ ಹೆಗಡ ಕನ್ನಡಕ್ಕೆ ಇಬ್ಬರು ಪುಟ್ಟಪ್ಪರು, ಒಬ್ಬರು ಕುವೆಂಪುವಾದರೆ, ಇನ್ನೊಬ್ಬರು ಪಾಟೀಲ ಪುಟ್ಟಪ್ಪ. ಕನ್ನಡ ದೇಶದಲ್ಲಿ ಅರ್ಹ ಪಟ್ಟ ಪಡೆಯಬೇಕು ಹೊರತು ಅನಾತ ಪಟ್ಟಿ ಸೇರಬಾರದು ಎಂಬುದೇ ಅವರ ಬದುಕಿನ ಉದ್ದೇಶವಾಗಿ ನಡೆದು ಕೊಂಡವರು.

       ವೇದಿಕೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಪರುಶುರಾಮ, ಹೆಚ್ಚುವರಿ ಜಿಎ ಜಗದೀಶ ಹಾಗೂ ಸದಸ್ಯೆರುಗಳಾದ ಸರ್ವಶ್ರೀ ಡಾ. ರಮಾಕಾಂತ ಜೋಶಿ, ಡಾ. ಪಿ ಟಿ ಲಕ್ಕಣ್ಣನವರ, ಮೈಲಾರಪ್ಪ ತಳ್ಳಳ್ಳಿ, ಶ್ರೀಮತಿ ಮಂಜುಳಾ ರಾಸಿನಕರ, ಪ್ರಭೂ ಅರಗೋಳ, ಸತೀಶ ಕುಲಕರ್ಣಿ ಇದ್ದರು.

        ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್ ವ್ಹಿ ಚಿನ್ನೀಕಟ್ಟಿ ಪ್ರಾಸ್ತಾಚವಿಕ ನುಡಿಗಳನ್ನಾಡಿ ಕೊನೆಯಲ್ಲಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link