ಬಸವಮಾಚಿದೇವ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ

0
14

ಚಿತ್ರದುರ್ಗ

         ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರ ಪಟ್ಟಾಧಿಕಾರ ಮಹೋತ್ಸವ ಮತ್ತುಮಡಿವಾಳ ಜನಾಂಗದಜಾಗೃತಿ ಮಹಾ ಸಮ್ಮೇಳನವೂ ಜ 6 ರಂದು ರಾ, ಹೆ.4ರ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಆವರಣದಲ್ಲಿ ನಡೆಯಲಿದೆ ಎಂದು ಮಡಿವಾಳರ ಸಂಘದ ಜಿಲ್ಲಾಧ್ಯಕ್ಷರಾದ ಟಿ.ರಮೇಶ್ ತಿಳಿಸಿದ್ದಾರೆ.

        ನಗರದ ಮಠದ ಆವರಣದಲ್ಲಿ ಶುಕ್ರವಾರ ಜ. 6 ರಂದು ನಡೆಯುವ ಶ್ರೀಗಳ ಪಟ್ಟಾಭಿಷೇಕ ಕಾರ್ಯಕ್ರಮದ ಮಾಹಿತಿಯನ್ನು ಸುದ್ದಿಗೋಷ್ಟಿಯಲ್ಲಿ ನೀಡಿದ ಅವರು, ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರ ಕಳೆದ 3 ತಿಂಗಳಿಂದ ರಾಜ್ಯಾದ್ಯಂತ ಸಂಚರಿಸಿ ಜನರಲ್ಲಿಜಾಗೃತಿ ಮೂಡಿಸಿದ್ದಾರೆ. ಈ ಸಮ್ಮೇಳನಕ್ಕೆ ನಾಡಿನ ಪ್ರಮುಖ ಮಠಾಧೀಶರು, ಮುಖ್ಯಮಂತ್ರಿಗಳು, ಮಂತ್ರಿಗಳು, ಅನುಭಾವಿಗಳು, ಸಾಹಿತಿಗಳು ಮತ್ತು ಹೊರರಾಜ್ಯಗಳ ನಮ್ಮ ಸಮಾಜದ ಮುಖಂಡರು ಬಂಧುಗಳು ಬರಲಿದ್ದಾರೆ 2.5 ರಿಂದ 3 ಲಕ್ಷಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

        ಸಮಾಜಸೇವಾ ದೀಕ್ಷಾಧಾರ್ಮಿಕ ವಿಧಾನದ ದಿವ್ಯ ನೇತೃತ್ವ ಹಾಗೂ ಸಮಾರಂಭಗಳ  ಸಾನಿಧ್ಯವನ್ನುಡಾ. ಶಿವಮೂರ್ತಿ ಮುರುಘಾ ಶರಣರು ವಹಿಸಲಿದ್ದಾರೆ. ಬೆಳಿಗ್ಗೆ 6.00 ಘಂಟೆಗೆ ಶ್ರೀ ಬಸವಮಾಚಿದೇವ ಮಹಾಸ್ವಾಮಿಗಳವರಿಗೆ ಸಮಾಜಸೇವಾ ದೀಕ್ಷಾದಧಾರ್ಮಿಕ ವಿಧಾನಗಳು ನಡೆಯಲಿದ್ದು, ಬೆಳಿಗ್ಗೆ 9.00 ಘಂಟೆಗೆಧಾರ್ಮಿಕ ಮಹಾಸಭೆಯನ್ನು ವಿರೋಧ ಪಕ್ಷದ ನಾಯಕರಾದ ಬಿ. ಎಸ್. ಯಡಿಯೂರಪ್ಪನವರು ಉದ್ಘಾಟಿಸುತ್ತಾರೆ. ನಾಡಿನ ಪ್ರಮುಖ ಹಿರಿಯ ಮಹಾಸ್ವಾಮೀಜಿಗಳವರು ದಿವ್ಯ ಸನ್ನಿಧಿಯನ್ನು ವಹಿಸಲಿದ್ದಾರೆ ಎಂದರು.

          ಅದೇ ದಿನ ಬೆಳಿಗ್ಗೆ 11.00 ಘಂಟೆಗೆಮಡಿವಾಳ ಜನಾಂಗದಜಾಗೃತಿ ಮಹಾ ಸಮ್ಮೇಳನವ ಮುಖ್ಯ ಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರುಉದ್ಘಾಟಿಸುತ್ತಾರೆ.ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು, ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಸಚಿವರು, ಸಂಸದರುಮತ್ತು ಶಾಸಕರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕಾಗಿ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠ, ದಆವರಣದಲ್ಲಿ ಬೃಹತ್ ಪ್ರಮಾಣದ ಸಭಾಂಗಣದಲ್ಲಿ ಸಮಾರಂಭಗಳು ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಮೇಶ್ ತಿಳಿಸಿದರು.

           ಗೋಷ್ಟಿಯಲ್ಲಿ ಉಪಸ್ಥಿತರಿದ್ದ ಶ್ರೀ ಮಾಚಿದೇವ ಶ್ರೀಗಳು ಮಾತನಾಡಿ, ನಮ್ಮ ಈ ಕಾರ್ಯಕ್ರಮದಲ್ಲಿ ನಮ್ಮ ಬಹುದಿನದ ಬೇಡಿಕೆಯಾದ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು ಮತ್ತು ಮಡಿವಾಳರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಬೇಕು ಎಂದು ಸರ್ಕಾರವನ್ನು ಮತ್ತು ಬರುವ ಜನ ಪ್ರತಿನಿಧಿಗಳನ್ನು ಒತ್ತಾಯಿಸಲಾಗುವುದು.

           ನಮ್ಮ ಕುಲಕಸುಬಾದ ಬಟ್ಟೆ ತೊಳೆಯುವ ಹಾಗೂ ಇಸ್ತ್ರಿ ಮಾಡುತ್ತ ಜೀವನ ಸಾಗಿಸುವ ಮಡಿವಾಳ ಬಂಧುಗಳಿಗೆ ಸರ್ಕಾರದಿಂದ ಉಚಿತವಾಗಿ ಕುಟಿರ ಹಾಗೂ ವಿದ್ಯುತ್ತನ್ನು ನೀಡಬೇಕು. ಶ್ರೀ ಮಡಿವಾಳ ಮಾಚಿದೇವ ಮೂಲಸ್ಥಾನ ದೇವರಹಿಪ್ಪರಗಿಯಲ್ಲಿನ ಮಾಚಿದೇವರದೇವಸ್ಥಾನ, ಕಾರಿಮನೆಯಲ್ಲಿನ ಮಾಚಿದೇವರ ಸ್ಮಾರಕ, ಗೊಡಚಿಯಲ್ಲಿನ ಮಾಚಿದೇವರ ಕುರುಹುಗಳು ಮತ್ತುರಾಜ್ಯದಇನ್ನಿತರ ಕಡೆಗಳಲ್ಲಿನ ಎಲ್ಲ ಮಾಚಿದೇವರ ಸ್ಮಾರಕಗಳನ್ನು ಸರ್ಕಾರತನ್ನ ಸ್ವಾಧೀನಕ್ಕೆ ಪಡೆದು ; ಅವುಗಳ ಸಂರಕ್ಷಣೆ, ಅಭಿವೃದ್ಧಿಗಾಗಿಶ್ರೀ ಮಡಿವಾಳ ಮಾಚಿದೇವರ ಸ್ಮಾರಕಗಳ ಅಭಿವೃದ್ಧಿ ಪ್ರಾಧೀಕಾರ ರಚಿಸಬೇಕು.ಹಾಗೂ ವಿಧಾನ ಪರಿಷತ್ತಿನಲ್ಲಿ ಮಡಿವಾಳ ಸಮುದಾಯದವರನ್ನುಎಂ. ಎಲ್. ಸಿ. ಸ್ಥಾನಕ್ಕೆ ನಾಮಕರಣ ಮಾಡಬೇಕು ಎಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here