ಬೆಂಗಳೂರು
ಸರ್ಕಾರಿ ಶಾಲಾ ಶಿಕ್ಷಕರಿಗಿಂತ ಗುಮಾಸ್ತ, ಐಷಾರಾಮಿ ಜೀವನ ನಡೆಯುತ್ತಿದ್ದಾನೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.ನಗರದಲ್ಲಿಂದು ಕೆಜಿ ರಸ್ತೆಯ ಶಿಕ್ಷಕರ ಸದನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವತಿಯಿಂದ ಆಯೋಜಿಸಿದ್ದ, ಶೈಕ್ಷಣಿಕ ಸಮಾವೇಶ, ಉತ್ತಮ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ಶಿಕ್ಷಕರಿಗೆ ಒತ್ತಡವಿದೆ. ಪಾಠ ಮಾಡುವುದು ಬಿಟ್ಟು ಎಲ್ಲವೂ ಮಾಡಿಸುತ್ತಾರೆ ಅಧಿಕಾರಿಗಳು ಎಂದ ಅವರು,ಶಿಕ್ಷಕರಿಗೆ ಒತ್ತಡ ಇರಬಾರದು.ಅಲ್ಲದೆ, ಶಿಕ್ಷಕರಿಗಿಂತ ಶಾಲೆಯ ಗುಮಾಸ್ತನೇ ಐಶಾರಾಮಿ ಜೀವನ ಮಾಡುತ್ತಾನೆ ಎಂದು ನುಡಿದರು.ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಬೇಕೆಂದರೆ, ಮಕ್ಕಳನ್ನು ಹುಡುಕಿ ತರಬೇಕಾದ ಸ್ಥಿತಿ ಇದೆ.ಜೊತೆಗೆ,ನಾವು ನಿವೃತ್ತಿ ಆದರೆ ಸಾಕು ಎಂಬ ಭಯ, ಭಾವನೆ ಶಿಕ್ಷಕರ ಲ್ಲಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ, ತಾಲೂಕು ಪಂಚಾಯತ್ ಅಡಿಯಲ್ಲಿ ತರದೇ, ರಾಜ್ಯ ಮಟ್ಟದಲ್ಲಿಯೇ ವೇತನ ಮಾಡುವಂತೆ ಆಗಬೇಕು.ಅದೇರೀತಿ ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಬೇಕು.ಇತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಟಿ.ರವಿಕುಮಾರ್, ಗೌರವ ಅಧ್ಯಕ್ಷೆ ಚಿತ್ರಕಲಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ