ಸಾಮಾನ್ಯರಿಗೆ ಗಗನ ಕುಸುಮವಾದ ಕಬ್ಬು, ಗೆಣಸು, ಕಡ್ಲೆಕಾಯಿ, ಅವರೆಕಾಯಿ

ಚಿಕ್ಕನಾಯಕನಹಳ್ಳಿ

    ಸಂಕ್ರಾಂತಿಯ ಹಬ್ಬದ ವಿಶೇಷವೆಂದರೆ ಅವರೆಕಾಯಿ, ಕಡ್ಲೆಕಾಯಿ, ಕಬ್ಬು. ಆದರೆ ಈ ಬಾರಿ ಅವುಗಳ ಬೆಲೆ ಗಗನಕ್ಕೇರಿದ್ದು, ಜನರು ಎಷ್ಟೇ ದುಡ್ಡಾದರೂ ಸರಿಯೇ ಈ ಹಬ್ಬದಲ್ಲಿ ಅವುಗಳನ್ನು ತಿನ್ನಲೇಬೇಕೆಂದು ಮಾರುಕಟ್ಟೆಯಲ್ಲಿ ಕೊಂಡುಕೊಂಡರು.

    ತಾಲ್ಲೂಕಿನ ಕೆಲವು ಕಡೆ ಸಂಕ್ರಾಂತಿ ಹಬ್ಬಕ್ಕೆ ರೈತರು ತಮ್ಮ ರಾಗಿ ಬೆಳೆಯ ತೆನೆಭರಿತ ಬವಣೆಗಳಿಗೆ ಪೂಜೆಗಳನ್ನು ನಡೆಸಿದರು. ಪಟ್ಟಣದಲ್ಲಿ ಸಂಕ್ರಾಂತಿಯ ಹಬ್ಬಕ್ಕಾಗಿ ಕಬ್ಬು, ಗೆಣಸು, ಕಡ್ಲೆಕಾಯಿ, ಅವರೆಕಾಯಿ ಮಾರಾಟ ಧಾರಣೆ ಹೆಚ್ಚಾಗಿತ್ತು. ಮಾರುಕಟ್ಟೆಯಲ್ಲಿ ಹೂವು ಹಣ್ಣಿನ ಬೆಲೆ ಗಗನವನ್ನು ಮುಟ್ಟಿದ್ದರಿಂದ ಗ್ರಾಹಕರು ಕಂಗಾಲಾಗಿದ್ದರು.

     ಕಬ್ಬಿನ ಬೆಲೆ ಒಂದಕ್ಕೆ ಮೂವತ್ತರಿಂದ ನಲವತ್ತು ರೂಪಾಯಿಗಳಾದರೆ ಕಡ್ಲೆಕಾಯಿ ಲೀಟರ್‍ಗೆ ನಲವತ್ತು ರೂಪಾಯಿ, ಅದೇ ರೀತಿ ಗೆಣಸು ಕೆ.ಜಿ.ಗೆ ಮೂವತ್ತು ರೂಪಾಯಿ, ಅವರೆಕಾಯಿ ಕೆ.ಜಿ.ಗೆ ಎಂಬತ್ತರಿಂದ ತೊಂಬತ್ತು ರೂಪಾಯಿಗಳವರೆಗೆ ಮುಟ್ಟಿತ್ತು.

    ಈ ಸಂದರ್ಭದಲ್ಲಿ ಭಾವನಹಳ್ಳಿಯ ಜಯರಾಮರಾಜು ಮಾತನಾಡಿ, ಹಬ್ಬವನ್ನು ಆಚರಿಸಲೇಬೇಕಾಗಿದೆ. ವಸ್ತುಗಳ ಬೆಲೆಗಳು ಗಗನ ಮುಟ್ಟಿವೆ. ಆದರೆ ಮಾಡುವ ಹಬ್ಬವನ್ನು ಬಿಡಲು ಸಾಧ್ಯವಿಲ್ಲ. ಸಾಂಪ್ರದಾಯಿಕವಾಗಿ ಹಬ್ಬದ ಆಚರಣೆ ಮಾಡುತ್ತೇವೆ, ನಾವು ಗ್ರಾಮೀಣ ಭಾಗದವರಾದರು ಪಟ್ಟಣಕ್ಕೆ ಬಂದು ಗೆಣಸು, ಕಬ್ಬು, ಕಡ್ಲೆಕಾಯಿ ಸೇರಿದಂತೆ ಹಬ್ಬದ ವಸ್ತುಗಳನ್ನು ಕೊಳ್ಳಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap