ಹೊಸದುರ್ಗ:
ದಿನೇ ದಿನೇ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಸೂರ್ಯನ ತಾಪಕ್ಕೆ ಬೆವರಿ ಬೇಸತ್ತಾ ಹೊಸದುರ್ಗ ಜನರು ಕೆಮಿಕಲ್‍ಗಳಿಂದ ಮಾಡಿದ ಕೂಲ್ ಡ್ರಿಂಗ್ಸ್ ಕೊಳ್ಳದೇ ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ. ಎಳನೀರು, ಮಜ್ಜಿಗೆ, ಐಸ್‍ಕ್ರೀಮ್ ಮತ್ತು ಕಲ್ಲಂಗಡಿ ಅಂಗಡಿಗಳಲ್ಲಿ ಜನರು ಕೊಂಡು ತಮ್ಮ ದಾಹವನ್ನು ನೀಗಿಸಲು ಮುಗಿಬೀಳುತ್ತಿದ್ದಾರೆ.
ದಿನ ನಿತ್ಯ ಬೆಳಿಗ್ಗೆ 8.30ಕ್ಕೆ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ, ಇನ್ನು ಮದ್ಯಾಹ್ನ ವೇಳೆಗೆ ಸುಮಾರು 38 ಡಿಗ್ರಿ ಉಷ್ಣಾಂಶವಿದ್ದು ಇನ್ನೇರಡು ತಿಂಗಳೊಳಗೆ 40-42 ಡಿಗ್ರಿ ಸೆಂಟ್ರಿಗ್ರೇಡ್ ವರೆಗೂ ಹೋಗಲಿದೆ ಹಾಗೂ ಬಿಸಿಲಿನ ಬೇಗೆ ಇನ್ನು ಹೇಚ್ಚಾಗುವ ಸಾಧ್ಯತೆ ಹೆಚ್ಚಿದೆ.
ಫ್ಯಾನ್‍ಗಳಿಗೆ ಮೊರೆ ಹೋಗುತ್ತಿದ್ದವರು ಇದೀಗ ಏರ್‍ಕೂಲರ್‍ಗಳನ್ನು ಕೊಳ್ಳುವತ್ತ ಮನಸ್ಸು ಮಾಡುತ್ತಿದ್ದಾರೆ.
ಏಕೆಂದರೆ ಫ್ಯಾನ್‍ಗಳಿಂದ ಬೀಸುವ ಗಾಳಿಯೂ ಬಿಸಿಯಿಂದ ಕೂಡಿರುವುದರಿಂದ ಅದನ್ನು ಕೂಡ ಸಹಿಸಲು ಆಗುತ್ತಿಲ್ಲ ಎಂಬ ಅಭಿಪ್ರಾಯ ಜನಗಳಿಂದ ವ್ಯಕ್ತವಾಗುತ್ತಿದೆ.ಜೀವಜಲವಾದ ಕೆಲ್ಲೋಡು ವೇದಾವತಿ ಒಡಲು ಬತ್ತಿಹೋಗಿರುವುದರಿಂದ ತಾಲ್ಲೂಕಿನ ಜನತೆ ನೀರಿಗಾಗಿ ಸಹ ಪರದಾಡುವುದನ್ನು ನೋಡಬಹುದು. ಬಿಸಿಲಿನ ಪ್ರಖರತೆ ಹೆಚ್ಚಾದಂತೆ ಆಗಾಗ ವಿದ್ಯುತ್ತಿನ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಹಳ್ಳಿಯ ರೈತರ ದನಕರುಗಳಿಗೆ ನೀರು ದೊರೆಯದೇ ತೊಂದರೆ ಅನುಭವಿಸುವಂತಾಗಿದೆ.