ತುರುವೇಕೆರೆ
ಪಟ್ಟಣ ಪಂಚಾಯಿತಿಯಿಂದ ಮಾಸ್ಕ್ ಧರಿಸದೇ ಓಡಾಡುವರಿಗೆ ದಂಡ ವಿಧಿಸುತ್ತಿರುವುದಾಗಿ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಅಪ್ಸಿಯಾ ಬಾನು ತಿಳಿಸಿದರು.
ಪಟ್ಟಣದ ದಬ್ಬೇಘಟ್ಟ ರಸ್ತೆ ಮತ್ತು ತಾಲ್ಲೂಕು ಕಛೇರಿ ಮುಂಬಾಗ ರಸ್ತೆ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ಜೊತೆಗೂಡಿ ವಾಹನ ಸಂಚಾರರು ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸದೇ ಓಡಾಡುತ್ತಿರುವವರಿಗೆ ತಲಾ 100 ರೂ. ದಂಡ ವಿಧಿಸಿ ಮಾತನಾಡುತ್ತಾ ದೇಶವೇ ಕೊರೊನಾದಿಂದ ಕಂಗೆಟ್ಟಿದೆ.
ದಿನೇ ದಿನೇ ಕರೊನಾ ಪಾಸಿಟಿವ್ ರಾಜ್ಯದಲ್ಲಿ ಹೆಚ್ಚಿಗೆ ಆಗುತ್ತಿದ್ದು, ಈಗಾಗಲೇ ಹಲವಾರು ಬಾರಿ ಸಾರ್ವಜನಕರಿಗೆ ಕರೊನಾ ಬಗ್ಗೆ ಮಾಹಿತಿ ನೀಡಿ ದಿನವಿಡಿ ಪಟ್ಟಣ ಪಂಚಾಯಿತಿ ಮೈಕ್‍ನಲ್ಲಿ ಇದರ ಬಗ್ಗೆ ಪ್ರಚಾರ ಮಾಡುತ್ತಿದ್ದರೂ ಸಹ ಕೆಲವರು ಇನ್ನು ಜಾಗೃತಿಗೊಂಡಿಲ್ಲ. ಆದ್ದರಿಂದ ನಾವು ಇಂತವರಿಗೆ ದಂಡ ವಿಧಿಸಿದರೆ ಅವರಿಗೆ ಜವಾಬ್ದಾರಿ ಮೂಡಿಸುವ ದೃಷ್ಟಿಯಿಂದ ದಂಡ ವಿಧಿಸಿ ಅವರಿಗೆ ಕರೊನಾದ ಅರಿವು ಮೂಡಿಸುತ್ತಿರುವುದಾಗಿ ತಿಳಿಸಿದ್ದು ಈಗಾಗಲೇ ಸುಮಾರು 15 ಸಾವಿರಕ್ಕೂ ಹೆಚ್ಚು ಹಣವನ್ನು ದಂಡದ ರೂಪದಲ್ಲಿ ಮಾಸ್ಕ್ ಧರಿಸದವರಿಂದ ಹಣ ವಸೂಲಿ ಮಾಡಲಾಗಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
