ಹುಳಿಯಾರು
ಹುಳಿಯಾರಿನ ಬ್ಯಾಂಕ್‍ಗಳಿಗೆ ಜನಧನ್ ಖಾತೆದಾರರು, ಪಿಂಚಣಿದಾರರು ಹಣ ಪಡೆಯಲು ಮುಗಿಬೀಳುತ್ತಿದ್ದು, ಜನರನ್ನು ನಿಯಂತ್ರಿಸಲು ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುವಂತಾಗಿದೆ.
ಬ್ಯಾಂಕ್‍ಗಳಿಗೆ ಬಂದವರಲ್ಲಿ ಜನಧನ್ ಖಾತೆದಾರರೆ ಹೆಚ್ಚಾಗಿದ್ದರು. ಸರ್ಕಾರ ಜಮಾ ಮಾಡಿರುವ 500 ರೂ. ಪಡೆದುಕೊಳ್ಳಲು ಮುಗಿಬಿದ್ದಿದ್ದರು. ಕೆಲ ನಿವೃತ್ತ ನೌಕರರು ಮಾಸಿಕ ಪಿಂಚಣಿ ಬಿಡಿಸಿಕೊಳ್ಳಲು, ಇನ್ನೂ ಕೆಲವರು ಹಣ ಜಮಾ ಮಾಡಲು ಬಂದಿದ್ದರು.ಬ್ಯಾಂಕ್‍ನವರು ಭದ್ರತಾ ಸಿಬ್ಬಂದಿಯನ್ನು ಬಾಗಿಲ ಬಳಿಯೇ ಕಾವಲು ಹಾಕಿ ಒಬ್ಬರಿಗೆ ಮಾತ್ರ ಪ್ರವೇಶ ನೀಡುತ್ತಿದ್ದರು.
ಆದರೆ ಬ್ಯಾಂಕ್ ಮುಂಭಾಗ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಗುಂಪುಗುಂಪಾಗಿ ನಿಂತು ಒಳ ಹೋಗಲು ಪೈಪೋಟಿಗೆ ಬಿದ್ದಿದ್ದರು.ಈ ವೇಳೆ ತುರ್ತು ಇರುವ ಕೆಲವರು ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ಕೂಡ ನಡೆಸಿದರು. ಸರತಿಯಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದ ವೃದ್ಧರು, ಅಂಗವಿಕಲರು ಸರತಿ ಸಾಲಿನಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
