ಬೆಂಗಳೂರು:
ಬೆಂಗಳೂರಿನ ನಮ್ಮ ಮೆಟ್ರೋ ಆರಂಭವಾದಾಗಿನಿಂದ ಇಲ್ಲಿಯವರೆಗೂ ಮಹಿಳೆಯರು ಪೆಪ್ಪರ್ ಸ್ಪ್ರೇ ಹಾಗು ಇನ್ನು ಮುಂತಾದ ರಕ್ಷಣೆಗೆ ಬೇಕಾದ ಸಲಕರಣೆಗಳನ್ನು ಸಾಗಿಸುವಂತಿರಲಿಲ್ಲ ಆದರೆ ಕಳೆದ ವಾರ ನಡೆದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ಇಡೀ ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ಬಗೆಗಿನ ಚರ್ಚೆಗಳು ನಡೆಯುತ್ತಿವೆ, ಮಹಿಳೆಯರು ಸ್ವಯಂ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ನಮ್ಮ ಮೆಟ್ರೋ ಮಂಡಳಿ ಅನುಮತಿ ನೀಡಲು ಮುಂದಾಗಿದೆ.
ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚಾವ್ಹಾಣ್, ಮಹಿಳೆಯರು ಪೆಪ್ಪರ್ ಸ್ಪ್ರೈ ಕೊಂಡೊಯ್ಯಲು ಅವಕಾಶ ನೀಡುವಂತೆ ಎಲ್ಲಾ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ . ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಮಹಿಳೆಯರು ಪೆಪ್ಪರ್ ಸ್ಪ್ರೈ ತೆಗೆದುಕೊಂಡು ಹೋಗಲು ಅವಕಾಶ ನೀಡುವಂತೆ ಸಿಬ್ಬಂದಿಗಳಿಗೆ ತಿಳಿಸಲಾಗಿದೆ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ನಾವು ನಮ್ಮ ಮೆಟ್ರೋ ರೈಲಿನಲ್ಲಿ ಪೆಪ್ಪರ್ ಸ್ಪ್ರೈ ನಿರ್ಬಂಧಿಸಿಲ್ಲ. ಆದರೆ, ಇದು ಇರುವುದು ಕಂಡುಬಂದಲ್ಲಿ ವಿಚಾರಣೆ ನಡೆಸಲಾಗುವುದು, ಬ್ಯಾಗ್ ಗಳ ಸ್ಕಾನರ್ ವೇಳೆಯಲ್ಲಿ ಏರ್ ಸೊಲ್ ಸ್ಪ್ರೈ ಕಂಡುಬಂದಾಗ ಭದ್ರತೆಯ ದೃಷ್ಟಿಯಿಂದ ಏಕೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂಬುದನ್ನು ಭದ್ರತಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸ್ಪಷ್ಟೀಕರಣ ಪಡೆಯಬೇಕಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
