ನಾಯಕನಹಟ್ಟಿ :
ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಎಸ್.ಎಸ್.ಎಲ್. ಸಿ. ಪರೀಕ್ಷೆಯ ಮೊದಲ ದಿನದಂದು
ಪರೀಕ್ಷಾರ್ಥಿ ವಿದ್ಯಾರ್ಥಿಗಳನ್ನು ಉರಿದುಂಬಿಸುವ ಸಲುವಾಗಿ ಶುಭಾಶಯಗಳನ್ನು ಕೋರುತ್ತಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ನಾಯಕನಹಟ್ಟಿ ಹೋಬಳಿ ಘಟಕದ ಅಧ್ಯಕ್ಷರಾದಂತಹ ಡಾ ನಾಗರಾಜ್ ಮೀಸೆರವರ ನೇತೃತ್ವದಲ್ಲಿ ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ಶುಕ್ರವಾರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಗುಲಾಬಿಗಳನ್ನು ಕೊಡುವ ಮೂಲಕ ಧೈರ್ಯ ತುಂಬುವ ಕೆಲಸವನ್ನು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ನಾಗರಾಜ್ ಮೀಸೆ ಅವರು ವಿದ್ಯಾರ್ಥಿಗಳು ಯಾವುದೇ ಒತ್ತಡ ಹಾಗೂ ಆತಂಕಕ್ಕೆ ಒಳಪಡದೆ ಮನಸ್ಸನ್ನು ಶಾಂತ ಚಿತ್ತದಿಂದ ಇರಿಸಿಕೊಂಡು ಗಾಬರಿಗೆ ಒಳಪಡದೆ ನೀವು ಓದಿದ ವಿಷಯಗಳ ಬಗ್ಗೆ ಗಮನ ಆರಿಸಿ ಪರೀಕ್ಷೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು.
ಅದರಂತೆ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿ. ಎಸ್.ಐ. ದೇವರಾಜ್ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ಗೊಂದಲ ಇಲ್ಲದೆ ಮೊದಲು ಪ್ರಶ್ನೆಗಳನ್ನೇಲ್ಲ ಓದಿಕೊಂಡು ನಿಮಗೆ ತೋಚಿದ್ದನ್ನು ಬರೆಯುವಂತೆ ಕಿವಿಮಾತು ಹೇಳಿದರು.
ಅದರಂತೆ ಮಯೂರ ಇಂಟರ್ನ್ಯಾಷನಲ್ ಸ್ಕೂಲ್ ಕಾರ್ಯದರ್ಶಿಯಾದಂತಹ ಡಿ ಮೈಲಾರ ಸ್ವಾಮಿ ಅವರು ಮಾತನಾಡಿ ನಮ್ಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾನ್ ಬಾಸ್ಕ್ ಶಾಲೆಯ ಕಾರ್ಯದರ್ಶಿಯಾದಂತಹ ಕಾರ್ಯದರ್ಶಿಯ ಬೋರ ಸ್ವಾಮಿ ದಲಿತ ಮುಖಂಡರಾದ ಎನ್ ನಿರಂಜನ್ ನಾಯಕನಹಟ್ಟಿ ಪಟ್ಟಣ ದ ಘಟಕದ ಉಪಾಧ್ಯಕ್ಷ ಎಸ್ ರಾಘವೇಂದ್ರ. ಶಿಕ್ಷಕರಾದ ಜಯಣ್ಣ .ಹಾಗೂ ಪೊಲೀಸ್ ಸಿಬ್ಬಂದಿಯವರು ಇದ್ದರು.
