ಕಾಳು ಮೆಣಸು ಬೆಳೆಯಿಂದ ರೈತರಿಗೆ ಹೆಚ್ಚು ಲಾಭ

ಚೇಳೂರು

       ರೈತರು ತಮ್ಮ ತೋಟಗಳಲ್ಲಿ ತೆಂಗು, ಅಡಿಕೆ ಹಾಗೂ ಕಾಡು ಮರಗಳ ಜೊತೆಯಲ್ಲಿ ಕಾಳು ಮೆಣಸು ಬೆಳೆಯನ್ನು ಬೆಳೆಯುವುದರಿಂದ ರೈತರಿಗೆ ಹೆಚ್ಚು ಲಾಭದಯಕವಾಗುತ್ತದೆ ಎಂದು ಗುಬ್ಬಿ ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕ ರಾಜಪ್ಪ ತಿಳಿಸಿದರು.

        ಚೇಳೂರು ಹೋಬಳಿಯ ಕೊಡಿಯಾಲ ಗ್ರಾಮದಲ್ಲಿ ಆಯೋಜಿಸಿದ್ದ ಕಾಳುಮೆಣಸು ಪ್ರಾತ್ಯಕ್ಷತೆಯ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಈಗಾಗಲೇ ಕೆಲವು ಪ್ರಗತಿ ಪರ ರೈತರು ತಮ್ಮ ಅಡಿಕೆ ತೋಟದಲ್ಲಿ ಸುಮಾರು ವರ್ಷಗಳಿಂದ ಕಾಳು ಮೆಣಸು ಬೆಳೆಯುತ್ತಿದ್ದು ಅದರಿಂದ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ರೈತರು ನಮ್ಮ ಇಲಾಖೆಗೆ ಬಂದು ಇದರ ಮಾಹಿತಿಯೊಂದಿಗೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಪಡೆಯಬಹುದು ಎಂದರು.

          ಬೆಂಗಳೂರಿನ ಕೃಷಿ ವಿಜ್ಞಾನಿ ಡಾ||ಶಶಿಕಾಂತ್ ಮಾತನಾಡುತ್ತಾ, ಕಾಳು ಮೆಣಸನ್ನು ನಾವುಗಳು ಬಳಸುವುದರಿಂದ ಹಲವು ರೋಗಗಳು ಹರಡದಂತೆ ತಡೆಯಬಹುದು. ಜೊತೆಗೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

      ಕಾಳು ಮೆಣಸು ಬೆಳೆಯಲು ರೈತರು ಅಡಿಕೆ ತೋಟದಲ್ಲಿ ಸಸಿ ನಾಟಿ ಮಾಡಿದ ಮೇಲೆ ಬೆಳೆದ ಬಳ್ಳಿಗಳನ್ನು ಅಡಿಕೆ ಮರಕ್ಕೆ ಕಟ್ಟಿ ಬುಡದಲ್ಲಿ ಸತ್ತೆ ಬೀಳದಂತೆ ನೋಡಿಕೊಂಡು ಮೂರು ತಿಂಗಳಿಗೊಮ್ಮೆ ಲಘು ಪೋಷಕಾಂಶ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಬೆಳೆದರೆ ಮೂರು ವರ್ಷಗಳಲ್ಲಿ ಬೆಳೆ ಸಿಗುತ್ತದೆ. ಒಂದು ಗಿಡಕ್ಕೆ ಒಂದು ಕೆಜಿ ಕಾಳುಮೆಣಸು ಇಳುವರಿ ದೊರೆಯುತ್ತದೆ. ಇದಕ್ಕೆ ರೋಗಗಳು ಹರಡುವುದು ಕಡಿಮೆ. ಅಂತಹ ಸಂದರ್ಭದಲ್ಲಿ ಇಲಾಖೆಯವರನ್ನು ಸಂಪರ್ಕಿಸಿ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ ಎಂದು ಹೇಳುವುದರ ಜೊತೆಗೆ ಕಾಳು ಮೆಣಸು ಬೆಳೆದ ಮೇಲೆ ಅದನ್ನು ಹೇಗೆ ಕಟಾವು ಮಾಡುವುದು. ಒಣಗಿಸುವುದೊಂದಿಗೆ ಇನ್ನು ಹಲವಾರು ವಿಷಯಗಳನ್ನು ರೈತರಿಗೆ ತಿಳಿಸಿದರು.

       ಈ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಶಿವಣ್ಣ, ತೋಟಾಗಾರಿಕಾ ಸಹಾಯಕ ನಿರ್ದೇಶಕ ಹೊನ್ನೇಗೌಡ, ಮುಖಂಡರಾದ ಕೆ.ಬಿ.ಸಿದ್ದಪ್ಪ, ಕೆ.ಎಸ್.ರಮೇಶ್, ಕೆ.ಎಸ್.ನಾಗಪ್ಪ, ಮೇಲೆಗೌಡ, ಹೇಮಂತ್‍ಕುಮಾರ್, ಕೆ.ಇ.ಕುಮಾರ್, ಕೆ.ಕೆ.ಬಸವರಾಜು, ಶಂಕರಲಿಂಗಪ್ಪ ಹಾಗೂ ಪ್ರಗತಿ ಪರ ರೈತರುಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link