ಬೆಂಗಳೂರು
ಟ್ರಾನ್ಸ್‌ಪೋರ್ಟ್ ಕಂಪನಿಯ ವಲಯ ವ್ಯವಸ್ಥಾಪಕನ ಸಹಿ ನಕಲು ಮಾಡಿ ೪.೩೦ ಲಕ್ಷ ರೂ. ದೋಚಿದ್ದ ನೌಕರನನ್ನು ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಒಡಿ ಶಾ ಮೂಲದ ಪಿತಾಭಾಸ್ ಮಿಶ್ರಾ (೨೮) ಬಂಧಿತ ಆರೋಪಿಯಾಗಿದ್ದಾನೆ,ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮನಾರ್ ತಿಳಿಸಿದ್ದಾರೆ. ಸುಗಮ್ ಪರಿವಹನ್ ಟ್ರಾನ್ಸ್ ಪೋರ್ಟ್ ಕಂಪನಿಯ ಶಾಖೆ ಯಶವಂತಪುರದ ಕಂಠೀರವ ಸ್ಟುಡಿಯೋ ಮುಖ್ಯರಸ್ತೆ ಯಲ್ಲಿದೆ. ಕಚೇರಿಯಲ್ಲಿ ಪಿತಾಭಾಸ್ ಮಿಶ್ರಾ ಕ್ಯಾಷಿಯರ್ ಮತ್ತು ಯೋಗೀಶ್ ತಿವಾರಿ ವ್ಯವಸ್ಥಾಪಕರಾಗಿದ್ದರು.
ಕಂಪನಿಯು ಹಣಕಾಸು ವ್ಯವಹಾರಕ್ಕಾಗಿ ಚೆಕ್?ಗಳಿಗೆ ಸಹಿ ಮಾಡುವ ಅಧಿಕಾರವನ್ನು ವಲಯ ವ್ಯವಸ್ಥಾಪಕ ಗೋವಿಂದರಾಜು ಮತ್ತು ಶಾಖೆ ವ್ಯವಸ್ಥಾಪಕ ಯೋಗೀಶ್ ತಿವಾರಿಗೆ ನೀಡಿತ್ತು. ಸೆ.೯ರಂದು ಲೆಕ್ಕ ಪರಿಶೋಧನೆ ವೇಳೆ ಯಶವಂತಪುರ ಶಾಖೆಯಿಂದ ೪.೩ ಲಕ್ಷ ರೂ. ವ್ಯತ್ಯಾಸ ಕಂಡುಬಂದಿದೆ. ಪರಿಶೀಲಿಸಿದಾಗ ಐಸಿಐಸಿಐ ಬ್ಯಾಂಕ್‌ನ ೨ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಜು.೩೦ರಂದು ೨.೬೫ ಲಕ್ಷ ಹಾಗೂ ಆ.೧೪ಕ್ಕೆ ೧.೬೫ ಲಕ್ಷ ರೂ. ಡ್ರಾ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೇಗವಾಗಿ ಹೋಗುತ್ತಿರುವ ಬೈಕ್ ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟರೆ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಪೀಣ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಆರ್.ಎಸ್. ರಸ್ತೆಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.
ಮೃತಪಟ್ಟವರನ್ನು ಪೀಣ್ಯದ ಪ್ರದೀಪ್ ಉಜ್ಜಯಿನಿ (೩೪)ಎಂದು ಗುರುತಿಸಲಾಗಿದೆ.ಗಾಯಗೊಂಡಿರುವ ಬೈಕ್ ಸವಾರ ರಾಜಗೋಪಾಲ ನಗರದ ಭೀಮ (೧೯) ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ.
ಸ್ನೇಹಿತರೊಂದಿಗೆ ಊಟ ಮುಗಿಸಿಕೊಂಡು ಮಧ್ಯರಾತ್ರಿ ೧೨.೧೫ ರ ವೇಳೆ ಮನೆಗೆ ಎಸ್.ಆರ್.ರಸ್ತೆಯ ಬಯೋಟ್ರೀ ಮುಂಭಾಗ ನಡೆದುಕೊಂಡು ಬರುವಾಗ ಸಿನಿಮಾ ಚಿತ್ರಮಂದಿರವೊಂದರಲ್ಲಿ ಕೆಲಸ ಮಾಡಿಕೊಂಡು ಬರುವಾಗ ಭೀಮ ವೇಗವಾಗಿ ಬೈಕ್‌ನಲ್ಲಿ ಹೋಗುತ್ತ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.ಡಿಕ್ಕಿ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಅವರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








