ಬೆಂಗಳೂರು
ಹಿಂದಿನಿಂದ ಬಂದ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಮಗಳು ಮೃತಪಟ್ಟರೆ, ತಾಯಿ ಹಾಗೂ ಮಗ ಗಾಯಗೊಂಡಿರುವ ದುರ್ಘಟನೆ ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುರುಬರ ಹಳ್ಳಿಯ ತೇಜಸ್ವಿನಿ (11)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ, ತಾಯಿ ರೇಖಾ (32), ತಮ್ಮ ಚರಣ್ (7) ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ
ಮಲ್ಲೇಶ್ವರಂನ ಕ್ವೀನಿ ಕಾರ್ಮೆಂಟ್ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ತೇಜಸ್ವಿನಿ ಹಾಗೂ 1ನೇ ತರಗತಿ ಓದುತ್ತಿದ್ದ ಚರಣ್‍ನನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ರೇಖಾ ಅವರು ಸ್ಕೂಟರ್‍ನಲ್ಲಿ ಮನೆಗೆ ಬುಧವಾರ ಸಂಜೆ 4.30ರ ವೇಳೆ ಮನೆಗೆ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಸೋಪ್ ಫ್ಯಾಕ್ಟರಿಯ ಪಾರಿಜಾತ ಹೋಟೆಲ್ ಬಳಿ ಹಿಂದಿನಿಂದ ಟ್ಯಾಂಕರ್ ಡಿಕ್ಕಿ ಹೊಡೆದು ಬಲಗಡೆ ಬಿದ್ದ ರೇಖಾ ಹಾಗೂ ಚರಣ್ ಗಾಯಗೊಂಡರೆ, ಎಡಗಡೆ ಬಿದ್ದ ತೇಜಸ್ವಿನಿ ಲಾರಿ ಚಕ್ರಕ್ಕೆ ಸಿಕ್ಕಿ ಮೃತಪಟ್ಟಿದ್ದಾಳೆ. ಕಳೆದ 4 ವರ್ಷಗಳಿಂದ ರೇಖಾ ಅವರು ಮಕ್ಕಳನ್ನು ಶಾಲೆಗೆ ಬಿಟ್ಟು ಮನೆಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದರು. ಪ್ರಕರಣ ದಾಖಲಿಸಿರುವ ಮಲ್ಲೇಶ್ವರಂ ಸಂಚಾರ ಪೆÇಲೀಸರು ಕ್ಯಾಂಟರ್ ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
