ಶ್ರೀದೇವಿ ಆಸ್ಪತ್ರೆಯಲ್ಲಿ ವ್ಯಕ್ತಿತ್ವ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ

ತುಮಕೂರು:

        ಇತ್ತೀಚಿನ ದಿನಗಳಲ್ಲಿ ಸಂವಹನ ಎಂಬುದು ಅತ್ಯವಶ್ಯಕವಾಗಿದೆ. ಸಂವಹನವಿಲ್ಲದೆ ಯಾವುದೇ ಕ್ರಿಯೆ ನಡೆಯುವುದಿಲ್ಲ, ಪ್ರತಿಯೊಬ್ಬರೂ ಜೀವನದಲ್ಲಿ ಏನಾದರೂ ಸಾಕಾರಾತ್ಮಕ ಬೆಳವಣಿಗೆ ಬೆಳೆಸಿಕೊಳ್ಳಿಸಿಬೇಕು, ಆತ್ಮ ಸಂವಹನವನ್ನು ಮಾಡಿಕೊಳ್ಳುವವುದರಿಂದ ತಮ್ಮಗೆ ತಾವೇ ಕೌಶಲ್ಯ ಜ್ಞಾನವನ್ನು ಪಡೆಯಲು ಅನುಕೂಲವಾಗುತ್ತದೆ.

     ಪ್ರತಿಯೊಬ್ಬರು ತಮ್ಮ ಭಾವನೆ, ವಿಚಾರ, ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಸಂವಹನ ಪ್ರಾರಂಭವಾಗುತ್ತದೆ. ಸಂವಹನದಲ್ಲಿ ಮೂರು ರೀತಿಯಲ್ಲಿ ಹೊಂದಿರುತ್ತದೆ ಅವುಗಳೆಂದರೆ ಪರಸ್ಪರ ಸಂವಹನ, ಆತ್ಮಸಂವಹನ, ಸಾರ್ವಜನಿಕ ಸಂವಹನ, ಹೀಗೆ ಸಂವಹನ ಕ್ರಿಯೆ ನಡೆಯುತ್ತದೆ ಎಂದು ಬೆಂಗಳೂರಿನ ವಿಬು ಅಕಾಡೆಮಿಯ ವ್ಯಕ್ತಿತ್ವ ಮತ್ತು ಕೌಶಲ್ಯ ಅಭಿವೃದ್ಧಿಯ ಅಧಿಕಾರಿಯಾದ ಡಾ.ಆರತಿ. ವಿ.ಬಿ.ರವರು ತಿಳಿಸಿದರು.

     ನಗರದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ವತಿಯಿಂದ ಅ.10 ರಂದು ಬೆಳಿಗ್ಗೆ 10 ಗಂಟೆಗೆ ವ್ಯಕ್ತಿತ್ವ ಮತ್ತು ಕೌಶಲ್ಯ ಅಭಿವೃದ್ಧಿಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

       ಈ ಕಾರ್ಯಾಗಾರದಲ್ಲಿ ಜ್ಞಾನ, ಕೌಶಲ್ಯ, ಶಿಸ್ತು, ಯಾವ ರೀತಿಯ ಉತ್ತೇಜನ ಪಡೆಯುವುದು ಹೀಗೆ, ಪ್ರಾಮಾಣಿಕತೆ, ನೈಪುಣ್ಯತೆ, ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಜೀವನದಲ್ಲಿ ದೊಡ್ಡ ದೊಡ್ಡ ಗುರಿ ಮತ್ತು ಕನಸ್ಸುಗಳನ್ನು ಇಟ್ಟುಕೊಂಡು ಮುಂದೆ ನಡೆಯಬೇಕು ಎಂದು ಅರ್ಥಪೂರ್ಣವಾಗಿ ವಿವರಿಸಿದರು.

     ಕಾರ್ಯಕ್ರಮದಲ್ಲಿ ಶ್ರೀದೇವಿ ಛಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ಎಂ.ಎಸ್.ಪಾಟೀಲ್‍ರವರು ಕಾರ್ಯಾಗಾರಕ್ಕೆ ಶುಭ ಹಾರೈಸಿದ್ದರು.

     ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಉಪಪ್ರಾಂಶುಪಾಲರು ಮತ್ತು ಪ್ರಸ್ತೂತಿ ಮತ್ತು ಸ್ತ್ರೀರೋಗ ವೈದ್ಯರಾದ ಡಾ.ರೇಖಾ ಗುರುಮೂರ್ತಿ, ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಟಿ.ಹೇಮಾದ್ರಿನಾಯ್ಡು, ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಎನ್.ಚಂದ್ರಶೇಖರ್ ಶ್ರೀದೇವಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ. ಚೆನ್ನಮಲ್ಲಯ್ಯ, ನರ್ಸಿಂಗ್ ಡೈರಕ್ಟರ್ ಡಾ. ಜ್ಯೋತ್ಸನ, ಮೀನಾಕ್ಷಿ, ನರ್ಸಿಂಗ್ ವಿದ್ಯಾರ್ಥಿ, ತಂತ್ರಜ್ಞರು ಹಾಗೂ ವಿವಿಧ ವಿಭಾಗದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link