ರಟ್ಟಿಹಳ್ಳಿ
ತಾಲೂಕಿನಾದ್ಯಂತ ಬರುವ ಎಲ್ಲಾ ಪೆಟ್ರೋಲ್ ಬಂಕ್ ನವರು ಕಡ್ಡಾಯವಾಗಿ ಸರ್ಕಾರದ ಸೂಚನೆಗಳನ್ನು ಪಾಲಿಸಬೇಕು ಎಂದು ತಹಶೀಲ್ದಾರ್ ಕೆ. ಗುರುಬಸವರಾಜ ಹೇಳಿದರು.
ರಟ್ಟಿಹಳ್ಳಿ ತಾಲೂಕಿನ ಪೆಟ್ರೋಲ್ ಬಂಕ್ ಮಾಲಕರೊಂದಿಗೆ ಸಭೆ ನಡೆಸಿದ ಅವರು ಮಾತನಾಡಿ ಸರ್ಕಾರಿ ನೌಕರರು, ರೈತರು ಹಾಗೂ ತುರ್ತು ಸಂದರ್ಭ ಇದ್ದರೆ ಮಾತ್ರ ಅಂಥವರಿಗೆ ಒಂದು ಲೀಟರ್ ಪೆಟ್ರೋಲ್ ಹಾಕಬಹುದು. ಬಂಕ್ ಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಬಂಕ್ ಗಳ ಮುಂದೆ ಬ್ಯಾರಿಕೇಡ್ ಹಾಕಿಕೊಳ್ಳಬೇಕು. ಸರ್ಕಾರದ ಆದೇಶದ ಪ್ರಕಾರ 2000 ಲೀಟರ್ ಪೆಟ್ರೋಲ್ ಹಾಗೂ 4000 ಲೀಟರ್ ಡೀಸೆಲ್ ಅನ್ನು ಕೋರೋನಾ ತುರ್ತು ಸೇವೆಗೆ ಸ್ಟಾಕ್ ಇಟ್ಟುಕೊಳ್ಳಬೇಕು ಎಂದರು.