ಹಾವೇರಿ
ಭ್ರಷ್ಟಾಚಾರ ನಿಗ್ರಹದಳ ಹಾವೇರಿ ಪೊಲೀಸ್ ಠಾಣೆ ವತಿಯಿಂದ ತಾಲೂಕಿನ ಕರ್ಜಗಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಕರ್ಜಗಿ ಹೋಬಳಿ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ಮಂಗಳವಾರ ಜರುಗಿತು.
ಡಿ.ವೈ.ಎಸ್.ಪಿ. ಎಸ್.ಕೆ.ಪ್ರಹ್ಲಾದ ಅವರು ಮಾತನಾಡಿ, ಯಾವುದೇ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಂದ ನ್ಯಾಯಯುತವವಾಗಿ ಮಾಡುವ ಕೆಲಸಕ್ಕೆ ಲಂಚ ಕೇಳಿದ್ದರೆ ಹಾಗೂ ಸರ್ಕಾರಿ ನೌಕರರು ಅಕ್ರಮ ಆಸ್ತಿಗಳಿಸಿದ ಬಗ್ಗೆ ಮಾಡಿದಲ್ಲಿ ಅಂತಹ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.
ಸರ್ಕಾರಿ ಅಧಿಕಾರಿಗಳು ಭಷ್ಟರಾಗಿದ್ದಲ್ಲಿ ಅವರ ವಿರುದ್ಧ ಕೇಸು ದಾಖಲು ಮಾಡಿಕೊಂಡು ಸಾರ್ವಜನಿಕರಿಗೆ ಉಚಿತವಾಗಿ ಕೆಲಸಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದರು. ಕರಪತ್ರ ಹಾಗೂ ಪಾಂಪಲೆಟ್ಸ್ ಹಂಚುವ ಮೂಲಕ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲಾಯಿತು. ಸಭೆಯಲ್ಲಿ ಗ್ರಾ.ಪಂ.ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.