ಮೂರನೇ ಮಹಡಿಯಿಂದ ಕೆಳಗೆಬಿದ್ದ ಛಾಯಗ್ರಾಹಕ!!!

ಬೆಂಗಳೂರು

        ನಟಿ ರಶ್ಮಿ ಮನೆಯ ಮೂರನೇ ಮಹಡಿಯಿಂದ ಕೆಳಗೆಬಿದ್ದು ಛಾಯಗ್ರಾಹಕ ಪ್ರತೀಕ್‍ನ ಸಂಶಾಯಾಸ್ಪದ ಸಾವಿನ ತನಿಖೆಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತೀವ್ರಗೊಳಿಸಿದ್ದಾರೆ.

       ಕಳೆದ ಅ.21 ರಂದು ರಾತ್ರಿ 11.30ರ ವೇಳೆ ಛಾಯಗ್ರಾಹಕ ಪ್ರತೀಕ್ ಮೂರನೇ ಮಹಡಿಯಿಂದ ಬಿದ್ದು ಕೆಳಗೆ ಬಿದ್ದು ಮೃತಪಟ್ಟಿದ್ದರು. ಆತ ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾನೆ ಎಂದು ರಶ್ಮಿ ಹೇಳಿಕೆ ನೀಡಿದ್ದರು. ಈ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

         ತನಿಖೆ ಚುರುಕುಗೊಳಿಸಿರುವ ಪೊಲೀಸರು, ಪ್ರತೀಕ್ ಹಾಗೂ ರಶ್ಮಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಇವರಿಬ್ಬರ ಮಧ್ಯೆ ಮನಸ್ತಾಪವಿದೆಯೇ ಎನ್ನುವ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ರಶ್ಮಿ ಮೊಬೈಲನ್ನು ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

          ಈ ನಡುವೆ ಪ್ರತೀಕ್ ಬಿದ್ದ ಕೂಡಲೇ ಎದುರು ಮನೆಯಲ್ಲಿದ್ದ ಚಂದನಾ ಎನ್ನುವ ಯುವತಿ ಕೂಡ ಮೊದಲ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಬಿಜಿಎಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಹೇಳಿಕೆಯನ್ನ ಪಡೆಯಲು ಪೊಲೀಸರಿಗೆ ಸಾರ್ಧಯವಾಗುತ್ತಿಲ್ಲ. ಅಂದು ರಾತ್ರಿ ಪ್ರತೀಕ್ ಬೀಳೋದನ್ನ ಯುವತಿ ನೋಡಿದಳಾ ಅಥವಾ ಆ ಯುವತಿ ಮತ್ತು ಪ್ರತೀಕ್ ಮಧ್ಯೆ ಏನಾದರೂ ಸಂಬಂಧ ಇದೆಯಾ ಇಲ್ಲವೇ ಪ್ರತೀಕ್ ಬಿದ್ದ ಕೂಡಲೇ ಚಂದನಾ ಯಾಕೆ ಬಿದ್ದಳು ಸೇರಿ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ