ಹಗರಿಬೊಮ್ಮನಹಳ್ಳಿ:
ನಮ್ಮ ಮುಸ್ಲಿಂ ಬಾಂಧವರು ಕೂಡ ಹಿಂದುಗಗಳ ಅನೇಕ ಹಬ್ಬಹರಿದಿನಗಳನ್ನು ಸಾಂಪ್ರದಾಯಕವಾಗಿ ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ಈದ್ ಮಿಲಾದ್ ಹಬ್ಬವನ್ನು ಕೂಡ ಆಚರಿಸಿಕೊಂಡು ಬಂದಿದ್ದಾರೆ ಎಂದು ಶಾಸಕ ಎಸ್.ಭೀಮಾನಾಯ್ಕ್ ಹೇಳಿದರು.
ಅವರು, ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಕೂಡ್ಲಿಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಿಂದ ಮುಸ್ಲಿಂ ಬಾಂಧವರು ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರಿಗೆ ಶುಭಕೋರಿ ನಂತರ ಮಾತನಾಡಿದರು. ಪ್ರವಾದಿ ಮೊಹಮದ್ ಫೈಗಂಬರ್‍ರ ಜನ್ಮ ದಿನಾಚರಣೆ ಮತ್ತು ಈ ದಿನವೇ ಅವರ ಪುಣ್ಯ ತಿಥಿಯು ಆಗಿರುವುದರಿಂದ ಈ ದಿನವನ್ನು ಜನ್ಮದಿನವಾಗಿ ಮುಸ್ಲಿಂ ಭಾಂಧವರು ಸಂಭ್ರಮಿಸುತ್ತಾರೆ. ಅವರ ಸಂದೇಶ ಜೀವನದಲ್ಲಿ ಧರ್ಮ ಪಾಲನೆ ಮತ್ತು ಅದನ್ನು ಪಾಲಿಸುವ ಬಗೆಯನ್ನು ತಿಳಿಸುವಾಗ ಈ ದಿನ ಹೆಚ್ಚುಮಹತ್ವ ಪಡೆದು ಕೊಳ್ಳುತ್ತದೆ. ಆದ್ದರಿಂದ ಈ ಆಚರಣೆ ಜಾರಿಗೊಂಡಿರುವುದು ವಿಶೇಷವಾಗಿದೆ. ಪ್ರವಾದಿಯವರ ಸಂದೇಶ ಪ್ರವಚನಗಳು ಸಮಾಜದಲ್ಲಿ ಸೌಹಾರ್ಧತೆಗಾಗಿಯೇ ಸಾರುತ್ತಿವೆ.
ಟಿಪ್ಪು ಸುಲ್ತಾನ್ ಅಭಿಮಾನಿ ಸಂಘದ ತಾಲೂಕು ಅಧ್ಯಕ್ಷ ಸೈಯದ್ ಮಹಮ್ಮದ್ ಇರ್ಫಾನ್ ಮಾತನಾಡಿ, ಮುಸ್ಲಿಮರಿಗೆ ಪವಿತ್ರವಾದ ಎರಡು ಹಬ್ಬಗಳೆಂದರೆ, ಈದ್ ಉಲ್ ಫಿತ್ರ್ ಮತ್ತು ಈದ್ ಉಲ್ ಅಧಾ ಬಳಿಕ ಪ್ರಮುಖ ದಿನವೆಂದರೆ ಮಿಲಾದುನ್ನಾಬೀ ಅಥವಾ ಈದ್ ಮಿಲಾದ್ ಆಗಿದೆ. ಇದು ಪ್ರವಾದಿಯವರ ಜನ್ಮ ದಿನ ಮತ್ತು ಪುಣ್ಯ ತಿಥಿಯ ದಿನದ ಸಂಕೇತವಾಗಿ ಆಚರಿಸಲಾಗುತ್ತದೆ. ಮೊಹಮ್ಮದ್‍ರಿಗಿಂತಲೂ ಮುನ್ನಾ ಹಲವಾರು ಪ್ರವಾದಿಗಳು ಈ ಜಗತ್ತಿನಲ್ಲಿ ಅಗಮಿಸಿ ಹೋಗಿದ್ದರೂ, ಮುಸ್ಲಿಂರ ಪವಿತ್ರವಾದ ಗ್ರಂಥ ಕುರಾನ್ ಪ್ರವಾದಿ ಮೊಹಮ್ಮದ್‍ರ ಮೂಲಕ ಈ ಜಗತ್ತಿಗೆ ಅರ್ಪಿತಗೊಂಡಿರುವ ಹಿನ್ನೆಲೆಯಲ್ಲಿ ಇವರಿಗೆ ವಿಶಿಷ್ಠವಾದ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ಈದ್ ಮಿಲಾದ್ ವಿಶೇಷವಾಗಿಯೇ ಆಚರಿಸಲಾಗುತ್ತದೆ ಎಂದರು.
ಇದಕ್ಕೂ ಮುನ್ನ ಮುಸ್ಲಿಂ ಬಾಂಧವರು ಸಂಭ್ರಮ ಸಡಗರದಿಂದ ಪಟ್ಟಣದ ನಾನಾ ಭಾಗಗಳಿಂದ ಮೆಕ್ಕಾ ಮದೀನಗಳ ಸ್ತಬ್ಧಚಿತ್ರಗಳ ಮೆರವಣಿಗೆಯು ಕೂಡ್ಲಿಗಿ ವೃತ್ತ, ಚಿತ್ರಮಂದಿರ ರಸ್ತೆಯ ಮೂಲಕ ಬಸವೇಶ್ವರ ಬಜಾರ್‍ದ ಬೈಪಾಸ್ ಸರ್ಕಲ್ ಮುಖಾಂತರ ವಿವಿಧ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಟಿ.ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಯು.ಬಾಬುವಲಿ, ಅಬುಬ್‍ಕರ್, ನೆಲ್ಲು ಇಸ್ಮಾಯಿಲ್, ಹಿಟ್ನಾಳ್ ಇಸ್ಮಾಯಿಲ್, ಕುಲ್ಮಿ ರಹಿಮಾನ್, ಜಿ.ಪಂ.ಮಾಜಿ ಸದಸ್ಯರಾದ ಹೆಗ್ಡಾಳ್ ರಾಮಣ್ಣ, ಅಕ್ಕಿ ತೋಟೇಶ್, ಹಂಪಾಪಟ್ಟಣ ಭೀಮಣ್ಣ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸೋಮಲಿಂಗಪ್ಪ, ಪುರಸಭೆ ಸದಸ್ಯರಾದ ಜೋಗಿ ಹನುಮಂತ, ಹುಡೇದ್ ಗುರುಬಸವರಾಜ್, ವಿ.ಹನುಮಂತಪ್ಪ, ಮುಖಂಡರಾದ ಅಜೀಜ್‍ಉಲ್ಲಾ, ಚಿಂತ್ರಪಳ್ಳಿ ದೇವೇಂದ್ರ, ಜಂದಿಸಾಬ್, ಫಕೃದ್ಧೀನ್, ಎಣ್ಣಿಭಾಷಾ, ಜಹಾಂಗೀರ್, ಕೆ.ಜಿ.ಎನ್.ದಾದಾಪೀರ್, ಇಕ್ಬಾಲ್ ಖಾಜ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ