ಅಂಗವಿಕಲರ ಕೇಂದ್ರ ಕಾರ್ಯಕರ್ತರ ಬದಲಾವಣೆಗೆ ಒತ್ತಾಯ

ಮಧುಗಿರಿ

      ತಾಲ್ಲೂಕಿನ ಅಂಗವಿಕಲರ ಪುನರ್ವಸತಿ ಕೇಂದ್ರದ ಕಾರ್ಯಕರ್ತರು ತಮ್ಮ ಕಾರ್ಯವನ್ನು ನಕಾರತ್ಮಕವಾಗಿ ನಿರ್ವಹಿಸುತ್ತಿದ್ದಾರೆ. ಅವರನ್ನು ಈ ಕಾರ್ಯದಿಂದ ವಜಾಗೊಳಿಸಿ ಅಂಗವಿಕಲರ ಶ್ರೇಯೋಭಿವೃದ್ದಿಗಾಗಿ ಬೇರೆಯವರನ್ನು ನೇಮಕ ಮಾಡಿ, ನಮಗೆ ನ್ಯಾಯ ಒದಗಿಸಬೇಕೆಂದು ತಾಲ್ಲೂಕು ಅಂಗವಿಕಲರ ಒಕ್ಕೂಟದ ಕಾರ್ಯಕರ್ತರು ಕಾರ್ಯನಿರ್ವಹಣಾಧಿಕಾರಿ ಮೋಹನ್‍ಕುಮಾರ್‍ಗೆ ಮನವಿ ಸಲ್ಲಿಸಿದರು.

         ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಧರಣಿ ನಡೆಸಿದ ಪದಾಧಿಕಾರಿಗಳು, ಕಳೆದ ಮೂರು ತಿಂಗಳಿನಿಂದ ತಾಲ್ಲೂಕಿನ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸದೆ ಲಂಚ, ದೌರ್ಜನ್ಯ, ದಬ್ಬಾಳಿಕೆ ಮತ್ತು ತಮ್ಮ ಅಧಿಕಾರದ ದರ್ಪ ತೋರುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಿ, ತಮ್ಮೊಂದಿಗೆ ಚರ್ಚಿಸಲಾಗಿದೆ. ಆದರೂ ತಾವು ಬರೀ ಶಾಂತಿಯುತವಾಗಿ ಮಾತುಗಳನ್ನಾಡಿ ಕಳುಹಿಸುತ್ತಿದ್ದೀರಿ ಅಷ್ಟೆ.

       ಅದು ಬಿಟ್ಟರೆ, ನಮಗೆ ಆಗುತ್ತಿರುವ ಮತ್ತು ಕಾಯ್ಧೆ 1995, 2006 ರ ಹಕ್ಕುಗಳನ್ವಯ ಸರ್ಕಾರದಲ್ಲಿ ದೊರೆಯುವ ಸವಲತ್ತುಗಳು, ಸಾಧನ ಸಲಕರಣೆಗಳನ್ನು ನಮಗೆ ತಲುಪಿಸುತ್ತಿಲ್ಲ. ಸಾಮಾಜಿಕ ಕಾರ್ಯಗಳು, ಶೈಕ್ಷಣಿಕ ಕಾರ್ಯಗಳು, ಆರ್ಥಿಕ ಹಾಗೂ ಅರಿವಿನ ಸಿಂಚನ ಕಾರ್ಯಕ್ರಮಕ್ಕಾಗಿ ಸರ್ಕಾರದಲ್ಲಿ ಅನುದಾನವಿದ್ದರೂ ಅದನ್ನು ಅರ್ಹರಿಗೆ ತಲುಪಿಸದೆ, ಅಂಗವಿಕಲರ ಕಾನೂನು ಕಾಯ್ದೆಗಳ ಉಲ್ಲಂಘನೆ ಆಗಿದೆ. ಈಗಲಾದರು ತಾವು ನಮ್ಮ ಸಮಸ್ಯೆಗೆ ಸ್ಪಂದಿಸಿ ಕಾರ್ಯನಿರ್ವಹಿಸದ ಇವರನ್ನು ವಜಾ ಗೊಳಿಸಿ ಆದಷ್ಟು ಶೀಘ್ರ ಬೇರೆಯವರನ್ನು ನೇಮಕ ಗೊಳಿಸಿ ಅಂಗವಿಕಲರ ಶ್ರೇಯೋಭಿವೃದಿಗೆ ಸಹಕರಿಸಬೇಕು. ಇಲ್ಲವಾದಲ್ಲಿ ಪ್ರತಿದಿನ ಕಚೇರಿಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

       ಅಧ್ಯಕ್ಷ ಹನುಮಂತರಾಯಪ್ಪ, ಕಾರ್ಯದರ್ಶಿ ನಾಗರಾಜು, ಖಜಾಂಚಿ ರಂಗನಾಥಪ್ಪ, ವೆಂಕಟೇಶ್, ದೊಡ್ಡವೀರಪ್ಪ ಮಹೇಶ್, ಮಾರುತಿ, ವೀರಭದ್ರಯ್ಯ, ವಾಸು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap