ಬೆಂಗಳೂರು:
ಶುಕ್ರವಾರ ವಿಧಾನಸೌಧ ವೆಸ್ಟ್ ಗೇಟ್ ಬಳಿ ಹಣ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಿಂದೆ ಹೆಚ್ಚುವರಿ ಪಿಎಯಾಗಿದ್ದ ಕೃಷ್ಣಪ್ಪನ ಕೈವಾಡವಿದ್ದು, ಮೋಹನ್ ಯಾರೆಂಬುದು ನನಗೇ ಗೊತ್ತಿರಲಿಲ್ಲ, ನಾನು ನೋಡಿಯೂ ಇರಲಿಲ್ಲ. ನಿನ್ನೆಯಷ್ಟೆ ಆತ ನನ್ನ ಟೈಪಿಸ್ಟ್ ಎಂದು ತಿಳಿಯಿತು ಎಂದಿರುವ ಸಚಿವರು, ನನ್ನ ತೇಜೋವಧೆ ಮಾಡಲು ಹೀಗೆಲ್ಲ ಮಾಡುತ್ತಿದ್ದು, ಯಾವುದೇ ತನಿಖೆಗೆ ಬೇಕಾದರೂ ನಾನು ಸಿದ್ಧನಿದ್ದೇನೆ. ಅಲ್ಲಿ ಸಿಕ್ಕಿರುವ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ಟೈಪಿಸ್ಟ್ ಮೋಹನ್ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಎಲ್ಲ ರೀತಿಯಿಂದಲೂ ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸರು ಇವತ್ತು ಕೂಡ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
