ನಿಷೇದಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

ತಿಪಟೂರು

      ನಗರದ ಎಲೆ ಆಸರ, ದೊಡ್ಡಪೇಟೆ ಮತ್ತು ಸಂತೆಪೇಟೆ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವುಗಳ ಮೇಲೆ ದಾಳಿ ನಡೆಸಿದ ನಗರಸಭಾ ಪೌರಾಯುಕ್ತೆ ಡಾ. ಮಧುಪಾಟೀಲ್ ತಂಡ ಸುಮಾರು 650 ಕೆ.ಜಿ.ಅಕ್ರಮ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಮಾರಾಟಗಾರರಿಗೆ ಮಾರಾಟಮಾಡದಂತೆ ಎಚ್ಚರಿಸಿದರು.

       ಕಳೆದ 15 ದಿನಗಳಿಂದ ಪ್ಲಾಸ್ಟಿಕ್ ನಿಷೇಧದ ಕುರಿತು ಪ್ರಕಟಣೆ ಹೊರಡಿಸಿದ್ದ ನಗರಸಭೆ ಅಧಿಕಾರಿಗಳು ಪತ್ರಿಕೆ ಮೂಲಕ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಬಾರದೆಂದು ಕಡ್ಡಾಯವಾಗಿ ಸೂಚಿಸಲಾಗಿದ್ದು ಕೆಲವು ವರ್ತಕರು ಗಡುವು ಮುಗಿದರೂ ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ತಟ್ಟೆ, ಲೋಟ, ಊಟದ ಹಾಳೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ದಿಢೀರ್ ದಾಳಿ ನಡೆಸಿದ ಪೌರಾಯುಕ್ತೆ ಡಾ.ಮಧುಪಾಟೀಲ್ ಮತ್ತು ನಗರಸಭೆಯ ಸಿಬ್ಬಂದಿಗಳು 650 ಕೆ.ಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಶಪಡಿಸಿಕೊಂಡಿರುವ ಪ್ಲಾಸ್ಟಿಕ್‍ನ್ನು ಪರಿಸರ ಮಾಲಿನ್ಯ ಇಲಾಖೆಗೆ ಕಳುಹಿಸಿ ನಂತರ ಅವರ ಆದೇಶದ ಮೇರೆಗೆ ವಿಲೇವಾರಿ ಮಾಡಲಾಗುವುದು.

      ಇದು ಯಾವುದೇ ಕಾರಣಕ್ಕೂ ಪಬ್ಲಿಕ್ ನಿಷೇಧದಿಂದ ಹಿಂದೆಸರಿಯುವುದಿಲ್ಲ, ನಗರದಲ್ಲಿ ಪ್ಲಾಸ್ಟಿಕ್‍ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಸಾರ್ವಜನಿಕರು, ವರ್ತಕರು ಸಹಕರಿಸಬೇಕೆಂದು ನಗರಸಭೆ ನೂತನ ಪರಿಸರ ಅಭಿಯಂತರರಾದ ಕುಮಾರು ಕಾವ್ಯಶ್ರೀ ತಿಳಿಸಿದರು.

 ಎಚ್ಚರಿಕೆ :

       ಪರವಾನಿಗೆ ನವೀಕರಿಸದೆ, ಉದ್ದಿಮೆ ಪರವಾನಿಗೆ ಪಡೆಯದೆ ಅಂಗಡಿ ನಡೆಸುತ್ತಿದ್ದವರಿಗೆ ನೊಟೀಸ್ ಜಾರಿ ಮಾಡುವಂತೆ ಸ್ಥಳದಲ್ಲೇ ಕಂದಾಯ ಅಧಿಕಾರಿಗಳಿಗೆ ಪೌರಾಯುಕ್ತರು ಆದೇಶ ನೀಡಿದರು.ಈ ಸಂದರ್ಭದಲ್ಲಿ ನಗರಸಭಾ ಎಂಜಿನಿಯರ್ ನಾಗೇಶ್, ಪರಿಸರ ಅಭಿಯಂತರ ಕಾವ್ಯಶ್ರೀ, ಆರೋಗ್ಯಾಧಿಕಾರಿ ತೀರ್ಥಪ್ರಸಾದ, ರೆವಿನ್ಯೂ ಇನ್ಸ್‍ಪೆಕ್ಟರ್ ನಂದೀಶ್ ಸೇರಿದಂತೆ ನಗರಠಾಣೆ ಪೊಲೀಸರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link