ಶಾಂತಯುತ ಹೋಳಿ ಆಚರಿಸಿ : ಆರ್.ರಾಜೇಶ್ ಕರೆ

ಹಗರಿಬೊಮ್ಮನಹಳ್ಳಿ

       ಪಟ್ಟಣದಲ್ಲಿ ಹೋಳಿ ಆಚರಣೆ ಪ್ರತಿವರ್ಷ ಗೊಂದಲದ ಗೂಡಾಗಿತ್ತು. ಕೆಲವರು ಸಾಂಪ್ರದಾಯಕ ಮಿತಿನೋಡಿ ಆಚರಿಸಿದರೆ, ಇನ್ನು ಕೆಲವರು ಅಕ್ಕಪಕ್ಕದ ತಾಲೂಕುಗಳಲ್ಲಿ ಆಚರಣೆಗೊಳ್ಳುವ ದಿನವನ್ನು ಅಲಂಭಿಸುತ್ತಿದ್ದರು. ಇದಕ್ಕಿಂತ ಮುಖ್ಯವಾಗಿ ಹಳೇ ಊರು, ಹೊಸ ಊರುಗಳೆಂದು ಎರಡುಕಡೆ ಒಂದೊಂದು ದಿನ ಪ್ರತ್ಯೇಕ ಆಚರಣೆಯಿಂದ ಸಾರ್ವಜನಿಕರಿಗೆ ಬಹುತೇಕ ಕಿರಿಕಿರಿ ಉಂಟಾಗುತಿತ್ತು. ಆದರೆ, ಈ ವರ್ಷ ಪಟ್ಟಣದಲ್ಲೆಡೆ ಒಂದೇ ದಿನ ಆಚರಿಸುವಂತೆ ಬದ್ಧತರಾಗಿ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾದ ಪ್ರಸಂಗ ಜರುಗಿತು.

         ಮಂಗಳವಾರ ಸಂಜೆ ಕರೆಯಲಾಗಿದ್ದ ಹೊಳಿ ಹಬ್ಬದ ಶಾಂತಿ ಸಭೆಯಲ್ಲಿ ಸಿಪಿಐ ಆರ್.ರಾಜೇಶ್ ಮಾತನಾಡಿ, ಹೋಳಿ ಹಬ್ಬ ಆಚರಣೆ ಎಂಬುದು ದ್ವೇಷ, ಅಸೂಯೆ, ಕಾಮ, ಕ್ರೋಧಗಳನ್ನು ಸುಟ್ಟು ನಂತರ ಬಣ್ಣದಲ್ಲಿ ಮಿಂದೇಳುವ ಕ್ಷಣವನ್ನು ಹೋಳಿ ಆಚರಣೆ ಎಂದು, ಅಲ್ಲದೆ ಸಾರ್ವಜನಿಕರು ಸಂಭ್ರಮದಿಂದ ಸಾಮೂಹಿಕವಾಗಿ ಆಚರಣೆಗೊಳಪಡುವ ಕ್ಷಣವನ್ನು ರಂಜನೀಯವಾಗಿರಲೆಂದು ಬಣ್ಣದೋಕುಳಿ ಯಾಗಿದೆ ಎಂದರು.

        ಇಲ್ಲೂ ಸೌಹಾರ್ಧಯುತವಾಗಿ ಹೋಳಿ ಆಚರಣೆ ಆಚರಿಸಿ ಎಂದು ಕರೆ ನೀಡಿದರು. ಯುವಕರು ಹೋಳಿ ಆಚರಣೆಯಲ್ಲಿ ಕಾನೂನು ಮೀರಿ ವರ್ತನೆಮಾಡದಂತೆ ಶಾಂತಯುತವಾಗಿ ಆಚರಣೆಯಲ್ಲಿ ಪಾಲ್ಗೊಳ್ಳಿ, ಅಷ್ಟೇ ಅಲ್ಲದೆ ಈಗ ಲೋಕಸಭಾ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕಟ್ಟುನಿಟ್ಟಿನ ಕ್ರಮ ಸಾಧ್ಯತೆ ಇರುತ್ತದೆ. ಒಂದು ವೇಳೆ ಅಹಿತಕರ ಘಟನೆಗಳು ಜರುಗಿದರೆ ನಾವು ಕಾನೂನು ಕ್ರಮ ಕೈಗೊಳ್ಳುವುದು ಸತ್ಯವೆಂದರು. ಅಲ್ಲದೆ, ಸಭೆಯಲ್ಲಿ ಸೇರಿದ ಎಲ್ಲಾ ಮುಖಂಡರ ಅಭಿಪ್ರಾಯಗಳನ್ನು ತೆಗೆದುಕೊಂಡು ಫೆ.22ರಂದು ಹೋಳಿ ಆಚರಣೆ ಮಾಡಿ ಎಂದು ಕರೆ ನೀಡಿದರು.

       ಇದಕ್ಕೂ ಮುನ್ನ ಮುಖಂಡ ಹಾಗೂ ಪುರಸಭೆಯ ಸದಸ್ಯ ಮಾತಾಗ್ಯಾಸ್ ಯರಿಸ್ವಾಮಿ ಮಾತನಾಡಿ, ಪ್ರತಿವರ್ಷ ನಮ್ಮ ಯುವಕರು ಸಂಭ್ರಮದಿಂದಲೇ ಹೋಳಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಯಾವುದೇ ಅಹಿತರಕರ ಘಟನೆಗಳು ಜರುಗದಂತೆ ಸಂತೋಷದಿಂದಲೇ ಪಾಲ್ಗೊಂಡಿದ್ದಾರೆ. ಪೇಂಟ್, ಕೋಳಿ ಮೊಟ್ಟೆ, ಕರಿ ಎಣ್ಣೆಯಂತ ಚರ್ಮಕ್ಕೆ ಬಾದೆಬರುವ ಬಣ್ಣಗಳನ್ನು ಬಳಸದೆ ಹೋಳಿಯಲ್ಲಿ ಪಾಲ್ಗೊಳ್ಳುತಿದ್ದಾರೆ. ಫೆ.21ರಂದು ರತಿಮನ್ಮಥರ ಪ್ರತಿಷ್ಠಾಪನೆ ರಾತ್ರಿ 12ಕ್ಕೆ ಕಾಮದಾಹನ ನಂತರ ನಿರ್ಧಾರದಂತೆ ಫೆ.22ರಂದು ಹೋಳಿ ಆಚರಣೆಗೊಳ್ಳುವುದು ಎಂದು ತಿಳಿಸಿದರು.

          ಪುರಸಭೆ ಮತ್ತೊಬ್ಬ ಸದಸ್ಯರಾದ ಜೋಗಿ ಹನುಮಂತ, ಅಲ್ಲಾಭಕ್ಷಿ, ನೇಕಾರ ಸಮುದಾಯದ ಮುಖಂಡ ಸೋಡ ನಿಂಬಣ್ಣ, ಯು.ಅಶೋಕ, ಎಚ್.ಪ್ರಕಾಶ ಮತ್ತಿತರರು ಮಾತನಾಡಿದರು.ಪಿಎಸ್‍ಐ ಮೌನೇಶ್ ರಾಥೋಡ್, ಪುರಸಭೆ ಸದಸ್ಯ ಬಾಬುವಲಿ, ಕನಕ ಯುವಸೇನೆಯ ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ, ಕುಬೇರಪ್ಪ, ನಿವೃತ್ತ ಶಿಕ್ಷಕ ಬಸಪ್ಪ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ್ ಶಿವಮೊಗ್ಗ, ಶ್ರೀವೆಂಕಟೇಶ್ವರ ಸ್ವಾಮಿ ಧರ್ಮಕರ್ತ ಕೃಷ್ಣಮೂರ್ತಿ, ಸೆರೆಗಾರ್ ಹುಚ್ಚಪ್ಪ, ಹೊನ್ನೂರಪ್ಪ, ಶಿವಶಂಕರಗೌಡ, ತಟ್ಟಿ ರಾಮಚಂದ್ರ, ಪ್ರಕಾಶ್, ಮಂಜುನಾಥ ಮತ್ತಿತರರು ಇದ್ದರು. ಪೇದೆ ದಶರಥ ಕುಮಾರ್ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link