ಪ್ಲೇ ಸ್ಟೋರ್ ನಿಂದ ಪೇಟಿಎಂಗೆ ಗೇಟ್ ಪಾಸ್..!

ಬೆಂಗಳೂರು:

    ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಅಪ್ಲಿಕೇಶನ್ ತೆಗೆದು ಹಾಕಿದ್ದು, ಇನ್ಮುಂದೆ ಈ ಅಪ್ಲಿಕೇಶನ್ ನಮ್ಮ ಪ್ಲೇ ಸ್ಟೋರ್‌ನಲ್ಲಿ ಸಿಗುವುದಿಲ್ಲ ಎಂದಿದೆ.ಈ ಬಗ್ಗೆ ಸ್ಟಷ್ಟನೆ ನೀಡಿರುವ ಗೂಗಲ್‌, ಪ್ರಮುಖವಾಗಿ ಪೇಟಿಎಂ ತನ್ನ ಗ್ರಾಹಕರಿಗೆ ಜೂಜು ಅಥ್ವಾ ಆನ್‌ಲೈನ್ ಪೇ ಗೇಮ್‌ಗಳನ್ನ ಆಡಲು ಅವಕಾಶ ನೀಡುತ್ತಿದೆ. ಹಾಗಾಗಿ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಡಿಜಿಟಲ್ ಪಾವತಿ ಬೆಹೆಮೊಥ್ ಪೇಟಿಎಂ ಅನ್ನು ತೆಗೆದು ಹಾಕಲಾಗಿದೆ ಎಂದಿದೆ.

     ಇನ್ನು ‘Paytmನ ಮುಖ್ಯ ಅಪ್ಲಿಕೇಶನ್‌ನ್ನ ಗೂಗಲ್‌ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ಆದ್ರೆ, ವೆಲ್ತ್‌ ಮ್ಯಾನೆಜ್ಮೆಂಟ್‌ ಅಪ್ಲಿಕೇಶನ್‌, ಪೇಟಿಎಂ ಮನಿ ಅಪ್ಲಿಕೇಶನ್, ಪೇಟಿಎಂ ಮಾರ್ಚಂಟ್‌ ಅಪ್ಲಿಕೇಶನ್‌, ಪೇಟಿಎಂ ಬ್ಯುಸಿನೆಸ್‌: ಮೂವಿ ಟಿಕೇಟಿಂಗ್‌ ಅಪ್ಲಿಕೇಶನ್‌, ಪೇಟಿಎಂ ಇನ್ಸಿಡರ್‌ ಅಪ್ಲಿಕೇಶನ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಮುಂದುವರೆಯಲಿವೆ’ ಎಂದಿದೆ.

     ಅಂದ್ಹಾಗೆ, ಇದಕ್ಕೂ ಮುಂಚೆಯೇ ಗೂಗಲ್ ಇಂಡಿಯಾ ತನ್ನ ಬ್ಲಾಗ್‌ನ ಭಾಗವಾಗಿ ದೇಶದಲ್ಲಿನ ಜೂಜಿನ ನೀತಿಗಳ ವಿರುದ್ಧ ತನ್ನ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು.’ಜೂಜಿನ ನೀತಿಗೆ ನಾವು ಒಂದೇ ಗುರಿಗಳನ್ನ ಹೊಂದಿದ್ದೇವೆ. ಹಾಗಾಗಿ ನಾವು ಆನ್‌ಲೈನ್ ಕ್ಯಾಸಿನೊಗಳನ್ನ ಅನುಮತಿಸುವುದಿಲ್ಲ ಅಥವಾ ಕ್ರೀಡಾ ಬೆಟ್ಟಿಂಗ್‌ಗೆ ಅನುಕೂಲವಾಗುವ ಯಾವುದೇ ಅನಿಯಂತ್ರಿತ ಜೂಜಿನ ಅಪ್ಲಿಕೇಶನ್‌ಗಳನ್ನು ಬೆಂಬಲಿಸುವುದಿಲ್ಲ.

     ನಿಜವಾದ ಹಣ ಅಥವಾ ನಗದು ಬಹುಮಾನಗಳನ್ನು ಗೆಲ್ಲಲು ಪಾವತಿಸಿದ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುಮತಿಸುವಂತಹ ಬಾಹ್ಯ ವೆಬ್‌ಸೈಟ್‌ಗೆ ಅಪ್ಲಿಕೇಶನ್ ಗ್ರಾಹಕರನ್ನು ಕರೆದೊಯ್ಯುತ್ತಿದ್ದರೆ, ಇದು ನಮ್ಮ ನೀತಿಗಳ ಉಲ್ಲಂಘನೆಯಾಗಿದೆ ‘ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ಹೇಳಿದೆ. ಇನ್ನು ಬಳಕೆದಾರರನ್ನ ಸಂಭಾವ್ಯ ಹಾನಿಯಿಂದ ರಕ್ಷಿಸಲು ಈ ಹೊಸ ನೀತಿಗಳನ್ನ ಸೇರಿಸಲಾಗಿದೆ ಎಂದು ಗೂಗಲ್ ತಿಳಿಸಿದೆ.

    ‘ಅಪ್ಲಿಕೇಶನ್ ಈ ನೀತಿಗಳನ್ನು ಉಲ್ಲಂಘಿಸಿದಾಗ, ನಾವು ಉಲ್ಲಂಘನೆಯ ಡೆವಲಪರ್‌ಗೆ ತಿಳಿಸುತ್ತೇವೆ ಮತ್ತು ಡೆವಲಪರ್ ಅಪ್ಲಿಕೇಶನ್ ಅನ್ನು ಅನುಸರಣೆಗೆ ತರುವವರೆಗೆ ನಾವು ಗೂಗಲ್‌ ಪ್ಲೇ ಸ್ಟೋರ್‌ನಿಂದ ಆ ಅಪ್ಲಿಕೇಶನ್ ಅನ್ನು ತೆಗೆದುಹಾಕುತ್ತೇವೆ. ಮತ್ತು ಪುನರಾವರ್ತಿತ ನೀತಿ ಉಲ್ಲಂಘನೆಗಳಿದ್ದಲ್ಲಿ, ನಾವು ಹೆಚ್ಚು ಗಂಭೀರವಾದ ಕ್ರಮವನ್ನು ತೆಗೆದುಕೊಳ್ಳಬಹುದು, ಇದರಲ್ಲಿ ಗೂಗಲ್‌ ಪ್ಲೇ ಡೆವಲಪರ್ ಖಾತೆಗಳನ್ನು ಕೊನೆಗೊಳಿಸಬಹುದು. ನಮ್ಮ ನೀತಿಗಳನ್ನು ಎಲ್ಲಾ ಡೆವಲಪರ್‌ಗಳಲ್ಲಿ ಸ್ಥಿರವಾಗಿ ಅನ್ವಯಿಸಲಾಗುತ್ತದೆ ಮತ್ತು ಜಾರಿಗೊಳಿಸಲಾಗುತ್ತದೆ ‘ಎಂದು ಗೂಗಲ್ ಇಂಡಿಯಾ ಹೇಳಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap