ಸಂಕಷ್ಟದಲ್ಲಿರುವವರಿಗೆ ನೆರವಾಗಲು ಸರ್ಕಾರಕ್ಕೆ ಮನವಿ

ಹಾವೇರಿ :

     ಕೂರೋನಾ ನಿಯಂತ್ರಿಸುವಲ್ಲಿಕೇಂದ್ರ ಮತ್ತುರಾಜ್ಯ ಬಿಜೆಪಿ ನೇತೃತ್ವದ ಸರ್ಕಾರಗಳು ವಿಫಲವಾಗಿದ್ದು,ಸುಮಾರು 4 ತಿಂಗಳಿಂದ ಬಡವರು, ಕೂಲಿ ಕಾರ್ಮಿಕರು,ಆಟೋಚಾಲಕರು,ಟ್ಯಾಕ್ಷಿಚಾಲಕರು,ಕಟ್ಟಡ ಕಾರ್ಮಿಕರು,ಮಾಧ್ಯಮವರ್ಗದವರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬದುಕು ನಡೆಸುವುದೇಕಷ್ಟಕರವಾಗಿದೆ.ಕೋಡಲೇ ಸರ್ಕಾರಗಳು ಅವರಿಗೆ ಅನುಕೂಲವಾಗಲು ದೊಡ್ಡ ಮೂತ್ತದ ಪ್ಯಾಕೇಜ್‍ಘೋಷಣೆ ಮಾಡಿ ನೇರವಾಗಿಅವರಖಾತೆಗೆ ಸೇರುವ ವ್ಯವಸ್ಥೆ ಮಾಡಬೇಕೆಂದು ಬಹುಜನ ಸಮಾಜ ಪಕ್ಷದಜಿಲ್ಲಾಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

     ಈವರಿಗೆ ಹಲವಾರು ವರ್ಗದವರಿಗೆಅಲ್ಪ ಪ್ರಮಾಣದಹಣವನ್ನುಘೋಷಣೆ ಮಾಡಿದರೂ ಅವುಗಳು ಇನ್ನೂ ಪಲಾನುಭವಿಗಳಿಗೆ ಮುಟ್ಟುತ್ತಿಲ್ಲ.ಕರೋನಾದಿಂದಕಷ್ಟದ ಮಧ್ಯದಲ್ಲಿಯೇ ಸರ್ಕಾರಗಳು ಪೆಟ್ರೋಲ್‍ಡಿಸೇಲ್ ಬೆಲೆ ಏರಿಕೆ ಮಾಡುತ್ತಿರುವುದುಜನವಿರೋಧಿ ನೀತಿಯಾಗಿದೆ.ಕಷ್ಟದಕಾಲದಲ್ಲಿಜನರ ನೆರವಿಗೆ ಬರಬೇಕಾದ ಸರ್ಕಾರಗಳು ಬಂಡವಾಳಶಾಹಿಗಳ ಕೈಗೊಂಬೆ ನೀತಿಯನ್ನುಅನುಸರಿಸುತ್ತಿವೆ. ಜನರಿಂದ ಹೆಚ್ಚಿನಕಂದಾಯ ವಸೂಲಿ ಮಾಡುವ ಹುನ್ನಾರದಲ್ಲಿದೆ.ಕೇಂದ್ರ ಸರ್ಕಾರ 20 ಲಕ್ಷಕೋಟಿ ಪ್ಯಾಕೇಜ್‍ಘೋಷಣೆಯಾಗಿಯೇ ಉಳುದಿದೆ.20 ಲಕ್ಷಕೋಟಿದೊಡ್ಡ ಪ್ರಮಾಣದ ಹಣ ಬಂಡವಾಳಶಾಹಿಗಳ ಕೈಗಾರಿಕೆಗಳ ಪಾಲಾಗುವ ಹುನ್ನಾರವಿದೆ.

     ಈ ಪ್ಯಾಕೇಜ್‍ಆಕಾಶದಲ್ಲಿನ ಚುಕ್ಕೆ ಏಣಿಸುವಂತೆಜನರನ್ನು ಭ್ರಮೆಯಲ್ಲಿತೆಲಿಸುವಂತಾಗಿದೆ.ಕೊರೋನಾ ರೋಗಿಗಳಿಗೆ ಸರ್ಕಾರಗಳು ಉಚಿತಚಿಕಿತ್ಸೆ ನೀಡಬೇಕು.ಎಲ್ಲ ವರ್ಗದ ಹಿಂದುಳಿದ ಜನರಿಗೆಆರ್ಥಿಕವಾಗಿ ನೆರವಾಗಬೇಕಾಗಿದೆ.ಸರ್ಕಾರಗಳುಜನರ ಪರವಾಗಿ ಆಡಳಿತ ನಡಸದೇಜನವಿರೋಧಿ ನೀತಿಯನ್ನು ಮುಂದುವರಿಸಿದರೆ ಉಗ್ರ ಹೋರಾಟಕ್ಕೆ ಬಿಎಸ್ಪಿ ಪಕ್ಷ ಮುಂದಾಗಲಿದೆಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ.ಎನ್.ಟಿ ಮಂಜುನಾಥ .ಶಂಭು ಲಿಂಗ ಅನಗೋಡಿಮಠ .ಅಬುಲ್‍ ಖಾದರ .ನಾಗರಾಜ ಅಂಗಡಿ. ಕಲಂದಾರ ಮಲ್ಲಿಗಾರ. ಸುಲೇಮಾನ ದೇವಿ ಹೊಸೂರ.ಹೊನ್ನಪ್ಪ ಕರೆಮ್ಮನವರ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap