ಹಾನಗಲ್ಲಿನಲ್ಲಿ ಔಷಧಿ ವ್ಯಾಪಾರಸ್ಥರ ಸಂಘದಿಂದ ರಾಜ್ಯಪಾಲರಿಗೆ ಮನವಿ

ಹಾನಗಲ್ಲ :

     ಆನ್‍ಲೈನ್ ಔಷಧಿ ವ್ಯಾಪಾರ ವ್ಯವಸ್ಥಿತವಾದ ರೀತಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಆಹ್ವಾನ ನೀಡುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದ್ದರೂ ಇದನ್ನು ಮುಂದುವರೆಸುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಇದನ್ನು ಖಂಡಿಸುತ್ತೇವೆ ಎಂದು ಔಷಧಿ ವ್ಯಾಪಾರಸ್ಥರ ಸಂಘದ ಎ.ಎಸ್.ಬಳ್ಳಾರಿ ತಿಳಿಸಿದರು.

     ಶುಕ್ರವಾರ ಹಾನಗಲ್ಲಿನಲ್ಲಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಹಾಗೂ ರಾಷ್ಟ್ರಪತಿಗಳಿಗೆ ಔಷಧಿ ವ್ಯಾಪಾರಸ್ಥರ ಸಂಘದಿಂದ ಮನವಿ ಅರ್ಪಿಸಿದ ನಂತರ ಮಾತನಾಡಿದ ಅವರು, ಆನ್‍ಲೈನ್ ಮೂಲಕ ಔಷಧಿ ವ್ಯಾಪಾರ ಒಟ್ಟು ಔಷಧಿ ವ್ಯಾಪಾರಸ್ಥರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

     ತಜ್ಞ ವ್ಯಾಪಾರಿಗಳು ಈ ಕೆಲಸ ಮಾಡದೆ ತಜ್ಞರ ಹೆಸರಿನಲ್ಲಿ ಯಾರುಯಾರೋ ಔಷಧಿ ಮಾರಾಟ ಮಾಡುತ್ತಿರುವುದು ಹಾಗೂ ಇದನ್ನು ಖರಿಧಿಸುವವರಿಗೂ ಅದರ ಗುಣಮಟ್ಟ ಹಾಗೂ ರೋಗಕ್ಕೆ ಹೊಂದುವ ಔಷಧಿ ಹೌದು-ಅಲ್ಲ ಎಂಬ ಅರಿವಿಲ್ಲದೆ ಖರಿಧಿಸಿ ಸೇವಿಸುತ್ತಿರುವುದು ಪ್ರಾಣಕ್ಕೆ ಅಪಾಯಕಾರಿಯಾದುದು. ಇಂಥ ಸ್ಥಿತಿಯಲ್ಲಿ ನಕಾರಾತ್ಮಕ ಪರಿಸ್ಥಿತಿ ಇದ್ದರೂ ಸರಕಾರ ಆನ್‍ಲೈನ್ ವ್ಯಾಪಾರಕ್ಕೆ ಕತ್ತರಿ ಹಾಕದೇ ಇರುವುದು ವಿಷಾದದ ಸಂಗತಿ ಎಂದರು.

     ಔಷಧಿ ವ್ಯಾಪಾರ ಆರಂಭಿಸಲು ಡಿಫಾರ್ಮ, ಬಿಫಾರ್ಮ ತರಬೇತಿ ಕಡ್ಡಾಯ ಎಂಬ ನಿಯಮವಿದೆ. ಆದರೆ ಈಗ ಆನ್‍ಲೈನ್ ಮೂಲಕ ಈ ವ್ಯಾಪಾರ ಮಾಡುತ್ತಿರುವವವರಲ್ಲಿ ತಜ್ಞ ಒಬ್ಬ ವ್ಯಕ್ತಿ ಹತ್ತಿಪ್ಪತ್ತು ಜನರು ತಜ್ಞರಲ್ಲದವರ ಮೂಲಕ ಔಷಧಿ ವ್ಯಾಪಾರ ಮಾಡುವುದು ಸರಿಯಲ್ಲ.

     ಅಲ್ಲದೆ ತಜ್ಞರ ಪ್ರಮಾಣಪತ್ರ ಇಟ್ಟುಕೊಂಡು ತಜ್ಞರಲ್ಲದವರು ಬೇಕಾಬಿಟ್ಟಿ ಔಷಧಿ ವ್ಯಾಪಾರ ಮಾಡುವುದು ಜೀವ ಹಾನಿಗೆ ಆಹ್ವಾನ ನೀಡಿದಂತೆ. ಈಗ ಡಿಫಾರ್ಮ ಹಾಗೂ ಬಿಫಾರ್ಮ ಸರ್ಟಿಫಿಕೇಟ್ ಇಲ್ಲದೆ ಆನ್‍ಲೈನ್ ಮೂಲಕ ಔಷಧಿ ವ್ಯಾಪಾ ಮುಂದುವರೆದರೆ ಬಿಎಡ್ ಡಿಎಡ್‍ನಂತೆ ಈ ಕೋರ್ಸುಗಳು ಸ್ಥಗಿತವಾಗುತ್ತವೆ. ಕೂಡಲೇ ಸರಕಾರ ಎಚ್ಚರಿಕೆಯಿಂದ ಆನ್‍ಲೈನ್ ಔಷಧಿ ವ್ಯಾಪಾರವನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

      ಈ ಸಂದರ್ಭದಲ್ಲಿ ಔಷಧಿ ವ್ಯಾಪಾರಸ್ಥರಾದ ವಿಜಯ ಕುಬಸದ, ಸುಧೀರ ತಮ್ಮಣ್ಣಶಾಸ್ತ್ರಿ, ಗುರು ಕುಲಕರ್ಣಿ, ವೆಂಕಣ್ಣ ಕಲಾಲ ಮೊದಲಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link