ರೈತರ ಸಂಕಷ್ಟಕ್ಕೆ ಸ್ಪಂದಿಸಿ : ಡಿಸಿ

ದಾವಣಗೆರೆ:

     ರೈಸ್‍ಮಿಲ್ ಮಾಲೀಕರುರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಹಾಗೂ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿರೈತರಿಂದ ಭತ್ತಖರೀದಿಗೆ ಮುಂದಾಗಬೇಕುಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

     ಮಂಗಳವಾರ ನಗರದಜಿಲ್ಲಾಡಳಿತ ಭವನದತುಂಗಭದ್ರಾ ಸಭಾಂಗಣದಲ್ಲಿರೈಸ್‍ಮಿಲ್ ಮಾಲೀಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದಅವರು, ರೈಸ್‍ಮಿಲ್ ಮಾಲೀಕರೊಂದಿಗೆ ಜಿಲ್ಲಾಡಳಿತವಿದೆ.ನಿಮಗೆ ಯಾವುದೇರೀತಿಯ ನಷ್ಟ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಬಗ್ಗೆ ಮುತುವರ್ಜಿ ವಹಿಸುತ್ತೇವೆ. ಈ ಹಿನ್ನೆಲೆಯಲ್ಲಿರೈತರಿಗೆ ನೀವುಗಳು ನೆರವಾಗಲು ಮುಂದೆ ಬರಬೇಕು.ರೈತರಿಗೆ ನೆರವಾಗಲುಇದೊಂದು ಒಳ್ಳೆಯ ಅವಕಾಶ ಎಂದರು.

     ಜಿಲ್ಲೆಯಲ್ಲಿ ರೈತರು ಸಾಕಷ್ಟು ಭತ್ತ ಬೆಳೆದಿದ್ದಾರೆ.ಜಿಲ್ಲೆಯ ನಾಲ್ಕೈದುಜನರೈಸ್‍ಮಿಲ್ಲರ್ಸ್‍ರೈತರಿಂದ ಭತ್ತ ಖರೀದಿಗೆ ಮುಂದಾಗಬೇಕು.ಉತ್ತಮವಾದ ನಂಬರ್‍ಒನ್ ಭತ್ತವನ್ನೇರೈತರಿಂದಖರೀದಿ ಮಾಡಿರಿ. ಕನಿಷ್ಟ ಬೆಂಬಲ ಬೆಲೆ ಯೋಜನೆಯುರೈತರ ಪರವಾಗಿಇರುವಯೋಜನೆಯಾಗಿದ್ದು, ನೀವು ಇದರಡಿಯಾವುದೇರೀತಿಯಲ್ಲಿ ನಷ್ಟ ಮಾಡಿಕೊಂಡು ಭತ್ತಖರೀದಿಸುವ ಅವಶ್ಯಕತೆಯಿಲ್ಲ. ಬದಲಾಗಿರೈತರು ಬೆಳೆದಿರುವು ಉತ್ತಮಗುಣಮಟ್ಟದ ಭತ್ತವನ್ನೇ ಖರೀದಿಸಿ. ಈ ರೀತಿಯ ಸಂಕಷ್ಟದ ಸಂದರ್ಭದಲ್ಲಿ ರೈಸ್‍ಮಿಲ್ಲರ್ಸ್‍ಗಳಲ್ಲೇ ಯಾರಾದರೂ ಭತ್ತಖರೀದಿಗೆ ಮುಂದಾದರೆಎಲ್ಲರೀತಿಯ ಸಹಕಾರ ನಾವು ನೀಡುತ್ತೇವೆಎಂದು ಭರವಸೆ ನೀಡಿದರು.

      ಅತ್ಯಂತ ಕಷ್ಟದ ಕಾಲವಾದ ಕೊರೊನಾ ಲಾಕ್‍ಡೌನ್ ವೇಳೆಯಲ್ಲಿ ರೈಸ್ ಮಿಲ್ಲರ್ಸ್ ಅನೇಕ ರೀತಿಯ ಪ್ರೋತ್ಸಾಹ, ಸಹಕಾರ ನೀಡಿರುವುದು ಹೆಮ್ಮೆಯ ಸಂಗತಿ.ಅದಕ್ಕಾಗಿ ನಿಮ್ಮೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರೂ ಸೇರಿಜಿಲ್ಲೆ ನಡೆಸಬೇಕು.ಒಬ್ಬೊಬ್ಬರು ಒಂದೊಂದು ಅಂಗವಾಗಿ ಕೆಲಸ ಮಾಡಿದಾಗಲೇ ಜಿಲ್ಲೆ ಅಭಿವೃದ್ಧಿಯತ್ತ ಮುನ್ನಡೆಯಲು ಸಾಧ್ಯಎಂದರು.

      ಆಹಾರ ಮತ್ತು ನಾಗರಿಕ ಸರಬರಾಜುಇಲಾಖೆಯಜಂಟಿ ನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿರೈತರ ಭತ್ತಖರೀದಿ ಮಾಡಲಾಗುತ್ತಿದೆ. ವಿವಿಧ ತಾಲ್ಲೂಕುಗಳಲ್ಲಿ ಭತ್ತ ಮಾರಾಟ ಮಾಡಲು 17 ಜನರೈತರು ನೋಂದಾಯಿಸಿ ಕೊಂಡಿದ್ದರು. ಆ ಸಂದರ್ಭದಲ್ಲಿಕೊರೊನಾ ಸೋಂಕು ಇದ್ದಕಾರಣಒಂದು ತಿಂಗಳು ಭತ್ತಖರೀದಿ ಮಾಡಲುಆಗಿರಲಿಲ್ಲ. ಆದರೆ ಇದೀಗ ಸರ್ಕಾರ ಭತ್ತಖರೀದಿಗೆಅನುಮತಿ ನೀಡಿದ್ದು, ರೈತರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆಎಂದರು.

      ಈಗಾಗಲೇ 3 ಜನರೈಸ್‍ಮಿಲ್‍ನವರು ನೋಂದಣಿ ಮಾಡಿಕೊಂಡಿದ್ದಾರೆ.ಹೊನ್ನಾಳಿಯ ನೀಲಕಂಠೇಶ್ವರ ಹಾಗೂ ಮಂಜುನಾಥ್‍ರೈಸ್‍ಮಿಲ್ ಮತ್ತು ಕುಂಬಳಗೋಡಿನ ಆಂಜನೇಯರೈಸಮಿಲ್‍ನ್ನು ಭತ್ತಖರೀದಿಗಾಗಿ ನೋಂದಾಯಿಸಿ ಕೊಂಡಿದ್ದಾರೆ.ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಭತ್ತತುಂಬಾ ಬೆಳೆಯಲಾಗಿದ್ದು, ಬೆಲೆ ಕೂಡಕಮ್ಮಿಯಾಗಿದೆ.ಈ ಹಿನ್ನೆಲೆಯಲ್ಲಿ ಭತ್ತಖರೀದಿಗೆ ಈ ಭಾಗದರೈತರ ಅನುಕೂಲಕ್ಕೆ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 5 ಜನರೈಸ್‍ಮಿಲ್‍ನವರು ಮುಂದಾಗಬೇಕಿದೆಎಂದು ಹೇಳಿದರು.

      ರೈಸಮಿಲ್ ಮಾಲೀಕರ ಸಂಘದಅಧ್ಯಕ್ಷರಾದ ಹೂಗುಂಟೆ ಬಕ್ಕೇಶ್ ಮಾತನಾಡಿ, ಸೋನಾ ಮಸೂರಿ, ಆರ್‍ಎನ್‍ಆರ್ ಭತ್ತದ ತಳಿಗಳ ಬೆಲೆ ಜಾಸ್ತಿ ಇರುತ್ತದೆ.ಮಳೆ ಇರುವುದರಿಂದ ಭತ್ತ ಹಸಿ ಇರುತ್ತವೆ. ಈ ರೀತಿಯ ಸಂದರ್ಭ ನಮಗೆ ಹೊಸದಾಗಿದೆ.ನಾವೆಲ್ಲರೂ ಮಾತನಾಡಿಕೊಂಡು ನಿಮಗೆ ಸಹಕಾರ ನೀಡುತ್ತೇವೆಎಂದು ಭರವಸೆ ನೀಡಿದರು.

       ಈ ಸಂದರ್ಭದಲ್ಲಿರೈತರಾದಕುಂದವಾಡ ಹನುಮಂತಪ್ಪ ಮಾತನಾಡಿ, ಮಳೆಗಾಲದಲ್ಲಿ ಭತ್ತಒಣಗಿಸಲು ರೈತರಿಗೆ ತುಂಬಾ ಕಷ್ಟವಾಗುತ್ತದೆ.ಜಿಲ್ಲಾಧಿಕಾರಿಗಳು ದಯಮಾಡಿ ಭತ್ತಕ್ಕೆರೂ.1,500 ಬೆಲೆ ನಿಗದಿ ಮಾಡಿರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

      ಸಭೆಯಲ್ಲಿ ಸಣ್ಣ ಕೈಗಾರಿಕೆಗಳ ಇಲಾಖೆಯಉಪನಿರ್ದೇಶಕ ಮುಂಜುನಾಥ್, ಎಪಿಎಂಸಿ ಕಾರ್ಯದರ್ಶಿ ಪ್ರಭು, ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‍ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap