ಆಸ್ತಿಗಾಗಿ ಕೊಲೆ ಮಾಡಿದವರನ್ನು ಬಂಧಿಸಿದ ಪೊಲೀಸರು..!!

ಬೆಂಗಳೂರು

     ಆಸ್ತಿಗಾಗಿ ಅಣ್ಣನನ್ನು ಕೊಲೆಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಆನೇಕಲ್ ಪೊಲೀಸರು ತಮ್ಮ ಸೇರಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಚೊಕ್ಕರಸನಹಳ್ಳಿಯ ಗೋವರ್ಧನ್ (21) ಹಾಗೂ ಸಿ.ಕೆ. ಪಾಳ್ಯದ ವಿನೋದ್ (21) ಬಂಧಿತ ಆರೋಪಿಗಳಾಗಿದ್ದಾರೆ.

     ಆನೇಕಲ್‍ನ ಗಿರಿಜಾ ಶಂಕರ್ ಲೇಔಟ್‍ನ ಪದ್ಮನಾಭ (27) ನನ್ನು ಆನೇಕಲ್‍ನ ಹೊರವಲಯದ ಬಿಎಂಟಿಸಿ ಡಿಪೋಗೆ ಸೇರಿದ ಜಮೀನಿನಲ್ಲಿ ಕೊಲೆಗೈದು ಪರಾರಿಯಾಗಿದ್ದ ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಗ್ರಾಮಾಂತರ ಎಸ್ಪಿ ಡಾ. ರಾಮ್ ನಿವಾಸ್ ತಿಳಿಸಿದ್ದಾರೆ

     ಟೆಂಟ್ ಹೌಸ್‍ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಗೋವರ್ಧನ್ ಅವರ ತಂದೆ ನಾಗರಾಜ್ ಇಬ್ಬರನ್ನು ವಿವಾಹವಾಗಿದ್ದರು ಮೊದಲ ಪತ್ನಿಯ ಮಗನಾಗಿದ್ದ, ಕೊಲೆಯಾದ ಪದ್ಮನಾಭ್‍ಗೆ ಅವರು ಆನೇಕಲ್‍ನಲ್ಲಿರುವ ಮನೆ ಬರೆದಿದ್ದು ಹೆಚ್ಚಿನ ಆಸ್ತಿಯನ್ನು ಆತನಿಗೆ ನೀಡಿದ್ದರು

     ಎರಡನೇ ಪತ್ನಿಯ ಮಗನಾದ ಗೋವರ್ಧನ್‍ನ ವಿದ್ಯಾಭ್ಯಾಸಕ್ಕೆ ಹಣ ಕೊಡದೆ ಆಸ್ತಿಯನ್ನು ಕೊಡದೇ ತನ್ನ ತಾಯಿಯ ಚಿನ್ನಾಭರಣಗಳನ್ನು ಅಜ್ಜಿ ಮನೆಯಿಂದ ತರುವಂತೆ ಹಿಂಸೆ ನೀಡಿದ್ದರು.ಇದೇ ದ್ವೇಷದಿಂದ ಆಕ್ರೋಶಗೊಂಡ ಗೋವರ್ಧನ್ ಕಳೆದ ಮೇ 28 ರಂದು ರಾತ್ರಿ ಮಲಸಹೋದರ ಪದ್ಮನಾಭ್‍ನನ್ನು ಕಾವಲಹೊಸಹಳ್ಳಿಗೆ ಕರೆದೊಯ್ದು, ಮದ್ಯಪಾನ ಮಾಡಿಸಿ, ವಿನೋದ್, ಶಿವು ಎಂಬುವವರ ಜೊತೆ ಸೇರಿ, ಕುತ್ತಿಗೆ, ಎದೆ, ಹೊಟ್ಟೆ ಭಾಗಗಳಿಗೆ ತಿವಿದು ಕೊಲೆಮಾಡಿದ್ದರು.

    ಮೃತದೇಹದ ಗುರುತು ಸಿಗದಂತೆ ತಲೆಮೇಲೆ ಇಟ್ಟಿಗೆ ಕಲ್ಲು ಹಾಕಿ ಬಿಎಂಟಿಸಿ ಡಿಪೋನ ಖಾಲಿಜಾಗದಲ್ಲಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link