ಬೆಂಗಳೂರು
ವಿಚಾರಣೆ ಹೆಸರಿನಲ್ಲಿ ಕೆ.ಪಿ.ಅಗ್ರಹಾರ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ.ಮಾನವ ಹಕ್ಕುಗಳನ್ನು ಗಾಳಿಗೆ ತೂರಿದ ಪೊಲೀಸರು ಆರೋಪಿ ಬದಲಿಗೆ ಆತನ ತಾಯಿ ಮೇಲೆ ಥರ್ಡ್ ಡಿಗ್ರಿ ಟ್ರಿಟ್ ಮೆಂಟ್ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ಪಶ್ಚಿಮ ವಿಭಾಗ ಮತ್ತು ದಕ್ಷಿಣ ಭಾಗದ ಕಳ್ಳ ಇರ್ಫಾನ್ ಅಲಿಯಾಸ್ ಕಾಲು(28)ನ ತಾಯಿ, ಜಬೀನ್ ತಾಜ್(56) ಹಲ್ಲೆಗೊಳಗಾದವರು.ಇರ್ಫಾನ್, ಕಳ್ಳತನದ ರಿಕವರಿ ವಿಚಾರವಾಗಿ ಆತನ ತಾಯಿ ಜಬೀನ್ ತಾಜ್ ಅವರನ್ನು ಕೆ.ಪಿ.ಅಗ್ರಹಾರ ಪೊಲೀಸರು ಠಾಣೆಗೆ ಕರೆಸಿದ್ದು, ಯಾವುದೇ ಎಫ್.ಐ.ಆರ್ ದಾಖಲಿಸದೆ, ಹತ್ತಕ್ಕೂ ಹೆಚ್ಚು ದಿನ ಕೂಡಿ ಹಾಕಿ ಗಂಭೀರ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, ಸಬ್ ಇನ್ನ್ಪೆಕ್ಟರ್, ಕ್ರೈಮ್ ಸ್ಟಾಫ್ ಮತ್ತು ಮಹಿಳಾ ಪೊಲೀಸರ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ.ಕೂರಲಾಗದೆ, ನಡೆಯಲಾಗದೆ ರೀತಿ,ಮೈಮೇಲೆ ಬಾಸುಂಡೆ ಬಂದು ರಕ್ತ ಸುರಿಯುವಂತೆ ಹಲ್ಲೆ ಮಾಡಿದ್ದಾರೆ. ಪೊಲೀಸರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ಜಭೀನ್ ತಾಜ್, ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








