ಬೆಂಗಳೂರು
ಗುಡಿಸಲುಗಳಲ್ಲಿ ವಾಸಿಸುಸುತ್ತಾ ಕೂಲಿಕೆಲಸ ಮಾಡಿದ್ದ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಾರ್ಮಿಕರನ್ನು ಬಾಂಗ್ಲಾ ವಲಸಿಗರೆಂದು ತೆರವುಗೊಳಿಸಿ ಅಧಿಕಾರಿಗಳು ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರ ಶೆಡ್ ತೆರವಿನ ಸ್ಥಳಕ್ಕೆ ಪಕ್ಷದ ಮುಖಂಡರ ನಿಯೋಗದೊಂದಿಗೆ ಮಹದೇವಪುರ ಕ್ಷೇತ್ರದ ಕರಿಯಮ್ಮನ ಅಗ್ರಹಾರದಲ್ಲಿ ಗುರುವಾರ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು ಅಕ್ರಮ ಬಾಂಗ್ಲಾ ದೇಶ ನಿವಾಸಿಗಳಿದ್ದರೆ ತೆರವುಗೊಳಿಸಲಿ ಆದರೆ ನಮ್ಮ ದೇಶದ ಅಸ್ಸಾಂ, ನಾಗಲ್ಯಾಂಡ್, ಗುಲ್ಬರ್ಗ ಸೇರಿದಂತೆ ದೇಶದ ಪ್ರಜೆಗಳಿಗೆ ಕಿರುಕುಳ ಸರಿಯಲ್ಲ ಎಂದು ಹೇಳಿದರು.
ದೇಶದ ನಿವಾಸಿಗಳಿಗೆ ತೊಂದರೆಯಾದರೆ ಅದನ್ನು ಖಂಡಿಸುತ್ತವೆ, ನಿವಾಸಿಗಳಿಗೆ ತೊಂದರೆ ಮಾಡಿದವರ ವಿರುದ್ಧ ಮುಖ್ಯಮಂತ್ರಿಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಮಾಜಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ ತಾವು ಭಾರತಿಯರೆಂದು ದಾಖಲೆ ತೋರಿಸಿದರು ಅವರನ್ನು ಇಲ್ಲಿಂದ ತೆರವು ಮಾಡಿದ್ದಾರೆ ಇದರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ ಅವರು ದೇಶದ ನಿವಾಸಿಗಳ ರಕ್ಷಣೆ ಎಲ್ಲರ ಕರ್ತವ್ಯ ಈ ನಿಟ್ಟಿನಲ್ಲಿ ಸರ್ಕಾರ ಗಮನ ವಹಿಸುವಂತೆ ತಿಳಿಸಿದರು.
ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಕುಮ್ಮಕ್ಕು ಎಂದು ದಿನೇಶ್ ಗುಂಡೂರಾವ್ ಆರೋಪಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಮಿಥುನ್ ರೆಡ್ಡಿ ಆರೋಪ ಅಲ್ಲಗೆಳೆದಿದ್ದು,ಬಾಂಗ್ಲಾದೇಶದ ನಿವಾಸಿಗಳನ್ನು ಗುರುತಿಸಿ ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಒಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ನೀಚ ರಾಜಕೀಯ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಶಾಸಕ ರಿಜ್ವಾನ್ ಹರ್ಷದ್, ಮುಖಂಡರಾದ ದ ಶ್ರೀನಿವಾಸ್ ರೆಡ್ಡಿ,ಜಯರಾಮರೆಡ್ಡಿ, ವರ್ತೂರು ಸುರೇಶ್, ದೊಡ್ಡ ಯಲ್ಲಪ್ಪ, ಪಣತ್ತೂರು ಬಾಬು, ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ