ಚಿತ್ರದುರ್ಗ
ಸಂಚಾರದಿಂದ ಆಗುವ ವಿವಿಧ ರೀತಿಯ ಅಪಘಾತವನ್ನು ತಡೆಯುವ ಸಲುವಾಗಿ ನಾಲ್ಕು ವಿವಿಧ ಅಂಶಗಳನ್ನು ಜಾರಿ ಮಾಡಿದ್ದಲ್ಲದೆ ಜನತೆಯಲ್ಲಿಯೂ ಸಹಾ ಸಂಚಾರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಪೂರ್ವ ವಲಯ ಪೆಲೀಸ್ ಮಹಾ ನಿರೀಕ್ಷಕ ದಯಾನಂದ ತಿಳಿಸಿದರು.
ಚಿತ್ರದುರ್ಗ ನಗರದ ಎಸ್.ಪಿ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಪೆಲೀಸ್ ಕ್ಯಾಂಟೀನ್ ಉದ್ಘಾಟನ್ ಉದ್ಘಾಟನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಕುಡಿದು ಚಾಲನೆ, ಅತಿಯಾದ ವೇಗ, ಹೆಲ್ಮೆಟ್ ಧರಿಸದೇ ಇರುವುದು ಮತ್ತು ಸೀಟ್ ಬೆಲ್ಟ್ ಧರಿಸದೇ ಇರುವುದರಿಂದ ಈ ರೀತಿಯಾದ ಅಪಘಾತ ಆಗುತ್ತಿದೆ ಇದರ ಬಗ್ಗೆ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು.
ಇಲಾಖೆಯಿಂದಲೂ ಸಹಾ ಅಧುನಿಕ ಯಂತ್ರಗಳನ್ನು ಖರೀದೀ ಮಾಡಲು ಅನುದಾನವನ್ನು ನೀಡಿದೆ ಇದರಿಂದ ಅವುಗಳನ್ನು ಖರೀದಿ ಮಾಡಿ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡಲಾಗುತ್ತದೆ ಆಧುನಿಕ ಯಂತ್ರಗಳನ್ನು ಖರೀದಿ ಮಾಡಿ ಇದರಿಂದ ಅಪಘಾತಗಳನ್ನು ಕಡಿಮೆ ಮಾಡಲು ಇಲಾಖೆ ನಿರ್ಧಾರ ಮಾಡಿದೆ, ಇತ್ತೀಚಿನ ದಿನದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಸಹಾ ವಾಹನಗಳ ಸಂಚಾರ ಹೆಚ್ಚಾಗಿದೆ ಇದರಿಂದಾಗಿ ಸಂಚಾರ ವ್ಯವಸ್ಥೆಯಲ್ಲಿ ತೊಂದರೆಯಾಗುತ್ತಿದೆ ಇದನ್ನು ಸರಿಪಡಿಸುವ ಸಲುವಾಗಿ ಸ್ಥಳಿಯ ಆಡಳಿತದೊಂದಿಗೆ ಮಾತನಾಡಲಾಗುವುದು ಎಂದರು.
ಇತ್ತೀಚಿನ ದಿನದಲ್ಲಿ ವಾಹನ ಓಡಿಸುವುದು ಎಂದರೆ ಒಂದು ರೀತಿಯ ಕ್ರೇಜ್ ಆಗಿದೆ ವಾಹನ ಓಡಿಸಲು ಸರ್ಕಾರ ನಿಗಧಿ ಮಾಡಿದ ವಯಸ್ಸು ಆಗದಿದ್ಧಾಗ ವಾಹನ ಓಡಿಸಲು ಪೋಷಕರು ಮಕ್ಕಳ ಕೈಗೆ ವಾಹನ ನೀಡಿ ಏನಾದರೂ ಅನಾಹುತವಾದರೆ ಅದಕ್ಕೆ ಪೋಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಇದರ ಬಗ್ಗೆಯೂ ಸಹಾ ಇಲಾಖೆ ನಿಗಾವಹಿಸಿ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದು ದಯಾನಂದ ತಿಳಿಸಿದರು.
ಯುವ ಜನತೆ ಸೇರಿದಂತೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದೆ ವಾಹನ ಓಡಿಸುತ್ತಾರೆ ಇದರಿಂದ ಏನಾದರೂ ಅಪಾಯವಾದರೆ ಅದಕ್ಕೆ ಹೊಣೆಗಾರರು ಅವರೇ ಆಗುತ್ತಾರೆ, ಇದರಿಂದ ಕಡ್ಡಾಯವಾಗಿ ಹೆಲ್ಮಟ್ ಧರಿಸಬೇಕು ಕಾನೂನು ಮತ್ತು ದಂಡಕ್ಕೆ ಹೆದರಿ ಧರಿಸದೆ ನಿಮ್ಮ ಪ್ರಾಣವನ್ನು ಉಳಿಸುವುದಕ್ಕಾಗಿ ಧರಿಸಬೇಕು ಎಂದು ತಿಳಿಸಿ ಇದರ ಬಗ್ಗೆ ಸಂಚಾರ ಪೋಲಿಸರು ಸದಾ ಜಾಗೃತಿಯನ್ನು ಮೂಡಿಸುತ್ತಿದ್ದರೂ ಸಹಾ ಜನತೆ ಇನ್ನು ತಯಾರಾಗಿಲ್ಲ ಎಂದು ತಿಳಿಸಿದ ದಯಾನಂದ ಕಡಿದು ವಾಹನ ಓಡಿಸುವುದರಿಂದ ಅವರು ಮಾತ್ರವಲ್ಲದೆ ಬೇರೆಯವರ ಪ್ರಾಣಕ್ಕೂ ಸಹಾ ಹಾನಿಯನ್ನು ಉಂಟು ಮಾಡುತ್ತಾರೆ ಆದ್ದರಿಂದ ಕುಡಿದು ವಾಹನ ಓಡಿಸುವವರ ವಿರುದ್ದವೂ ಸಹಾ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಚಿತ್ರದುರ್ಗ ಜಿಲ್ಲೆಯಿಂದ ನೂತನ ಪೋಲಿಸ್ ಠಾಣೆ ಸ್ಥಾಪನೆ, ನೂತನ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಶೀಘ್ರವಾಗಿ ಅನುಮತಿ ಸಿಕ್ಕ ಕೊಡಲೇ ಕಾಮಗಾರಿ ಪ್ರಾರಂಭವಾಗಲಿದೆ, ಅಲ್ಲದೆ ಕೆಲವೊಂದು ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಸಹಾ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಪೆಲೀಸ್ ಮಹಾ ನಿರೀಕ್ಷಕ ದಯಾನಂದ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ.ಅರುಣ್ ನೂತನವಾಗಿ ಸ್ಥಾಪನೆ ಮಾಡಲಾದ ಪೊಲೀಸ್ ಕ್ಯಾಂಟೀನ್ ಬಗ್ಗೆ ಮಾಹಿತಿ ನೀಡಿ ಪೊಲೀಸ್ ಕ್ಯಾಂಟೀನ್, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೂ ಸಹ ಕೈಗೆಟಕುವ ಬೆಲೆಯಲ್ಲಿ ಸಕಾಲದಲ್ಲಿ ಉತ್ತಮ ಗುಣಮಟ್ಟದ ಉಪಹಾರ ದೊರಕಿಸುವ ಉದ್ದೇಶದಿಂದ ಆರಂಭಿಸಲಾಗಿದೆ ಎಂದರು.
ಕ್ಯಾಂಟೀನ್ ಅನ್ನು ಲಾಭದಾಯಕ ದೃಷ್ಟಿಯಿಂದ ಪ್ರಾರಂಭಿಸಿಲ್ಲ. ಇಲ್ಲಿ ಬೆಳಗಿನ ಉಪಹಾರ ಹಾಗೂ ಸ್ನ್ಯಾಕ್ಸ್, ಕಾಫಿ., ಚಹಾ ದೊರೆಯುತ್ತದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆಯವರೆಗೆ ಕ್ಯಾಂಟೀನ್ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರ ಸ್ಪಂದನೆಯ ನಂತರ ಕ್ಯಾಂಟೀನಿನ ಸಮಯ ಮತ್ತು ತಿನಿಸುಗಳನ್ನು ಹಂತ ಹಂತವಾಗಿ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದರು.ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ