ಬೆಂಗಳೂರು
ಪಾದರಾಯನಪುರ ದಲ್ಲಿ ಭಾನುವಾರ ರಾತ್ರಿ ವೈದ್ಯಕೀಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಮೇಲೆ ಹಲ್ಲೆ ಪ್ರಕರಣದ ಸಂಬಂಧ ಇಲ್ಲಿ ಯವರೆಗೆ 54 ಮಂದಿಯನ್ನು ಬಂಧಿಸಿ 5 ಮಂದಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಲಾಗಿದೆ. ಪಾದರಾಯನಪುರ ದ ಮಹಿಳಾ ರೌಡಿ ಫರೀಜಾ ಅಲಿಯಾಜಮೀರ್,ಸಾಧಿಕ್,ಅಮ್ಜದ್ ,ಪಿರೋಜ್ ಸೇರಿದಂತೆ 54 ಮಂದಿಯನ್ನು ಬಂಧಿಸಿ 5 ಮಂದಿಯನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಲಾಗಿದೆ.
ಬಂಧಿತ ಆರೋಪಿ ಗಳ ವಿರುದ್ಧ ರಾಷ್ಟ್ರೀಯ ವಿಪತ್ತು ನಿವ್ರಹಣ ಕಾಯಿದೆ ಯಡಿ ಪ್ರಕರಣ ದಾಖಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಆರೋಗ್ಯ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಹಾಗೂ ಗಲಾಟೆ ವಿಡಿಯೊ ಆಧರಿಸಿ ಜೆ.ಜೆ.ನಗರ ಪೆÇಲೀಸರು ಆರೋಪಗಳನ್ನು ಬಂಧಿಸಿದ್ದಾರೆ
ಗಾಂಜಾ ನಶೆಯಲ್ಲಿ ಗಲಾಟೆ
ಬಂಧಿತ ರೌಡಿ ಫರೋಜಾ ತರಕಾರಿ ಮಾರಾಟ ಮಾಡುತ್ತಿದ್ದಳು. ಅಲ್ಲದೇ ಪುಂಡರಿಗೆ ಗಾಂಜಾ ನೀಡಿದ್ದಾಳೆ. ಜತೆಗೆ ಯುವಕರು ಜಮಾವಣೆಗೊಳ್ಳುವಂತೆ ಪ್ರಚೋದನೆ ಕೊಟ್ಟಿದ್ದಾಳೆ. ಈ ಮಹಿಳೆ ನೀಡಿದ ಮಾಹಿತಿಯ ಮೇರೆಗೆ ನಿರಾತ್ರಿ 20 ಮಂದಿಯನ್ನು ಬಂಧಿಸಲಾಗಿತ್ತು. ನಂತರ ವಿಡಿಯೊ ಆಧರಿಸಿ 34 ಮಂದಿಯನ್ನು ಬಂಧಿಸಿ 5 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಕೃತ್ಯದಲ್ಲಿ 150 ರಿಂದ 200 ಮಂದಿ ಆರೋಪಿಗಳು ಭಾಗಿಯಾಗಿದ್ದಾರೆ . ಇನ್ನುಳಿದ ಆರೋಪಿಗಳಿಗಾಗಿ ಪೆÇಲೀಸರು ಶೋಧ ನಡೆಸಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ ಎನ್ನುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿದ್ದು, ಈ ಸಂಬಂಧ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
ಮುಂಜಾಗ್ರತ ಕ್ರಮವಾಗಿ 10 ಕೆಎಸ್‍ಆರ್ ಪಿ ತುಕಡಿ ಮತ್ತು 220 ಪೆÇಲೀಸರನ್ನು ಪಾದರಾಯನಪುರದಲ್ಲಿ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದು ಮುಖರ್ಜಿ ಮೊಕ್ಕಾಂ ಹೂಡಿದ್ದಾರೆ.ಮಹಿಳಾ ರೌಡಿ ಆಕೆಯೇ ಸಂಚು ರೂಪಿಸಿ ಗಲಾಟೆ ಮಾಡಿಸಿದ್ದಾಳೆ. ಬಂಧಿತ ಆರೋಪಿಗಳ ಮೇಲೆ ಈ ಹಿಂದೆಯೇ ಹಲವು ಪ್ರಕರಣಗಳು ದಾಖಲಾಗಿವೆ. ಅವರೆಲ್ಲ ಅಪರಾಧ ಹಿನ್ನೆಲೆಯುಳ್ಳವರು. ಗಲಾಟೆ ವೇಳೆ ಬಹುತೇಕರು ಗಾಂಜಾ ಸೇವಿಸಿದ್ದರು ಎಂಬ ಅನುಮಾನವಿದೆ’ ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದ್ರ ಮುಖರ್ಜಿ ಹೇಳಿದ್ದಾರೆ.
ಆರೋಪಿಗಳ ಮೊಬೈಲ್ ವಶ
ಪಾದರಾಯನಪುರದಲ್ಲಿ ಗಲಾಟೆ ಪ್ರಕರಣದ ಸಂಬಂಧ 60 ಮಂದಿಯನ್ನು ಬಂಧಿಸಿರುವ ಪೊಲೀಸರು ಆರೋಪಿಗಳ ಬಳಿ ಇದ್ದ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಮೊಬೈಲ್ ಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಕೃತ್ಯದಲ್ಲಿ ಇರ್ಫಾನ್ ಎಂಬಾದ ಕೈವಾಡವಿದ್ದು, ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಗರುಡ ಭದ್ರತೆ
ನಗರದ ಪಾದರಾಯನಪುರದಲ್ಲಿ ಗರುಡ ತಂಡ ಭದ್ರತೆ ಕೈಗೊಂಡಿದ್ದು ಇನ್ನು ಮುಂದೆ ಯಾರೂ ಮಿಸುಕಾಡುವಂತಿಲ್ಲ .ರೈಫಲ್ ಹಿಡಿದುಕೊಂಡು ಗರುಡ ಕಮಾಂಡೋಗಳು ನಡು ರಸ್ತೆಯಲ್ಲಿ ನಿಂತು ನಿಗಾ ವಹಿಸಿದ್ದಾರೆ ಮಾಸ್ಕ್ ಹಾಕದೆ, ಹೊರಗಡೆ ಓಡಾಡುವ ಜನರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗರುಡ ಟೀಮ್ ನೋಡಿ ಜನ ಮನೆಯಿಂದ ಹೊರಬರಲು ಭಯಪಟ್ಟಿದ್ದಾರೆ.ಇತ್ತ ಪೊಲೀಸರು ಕೂಡ ಪ್ರತಿ ಏರಿಯಾದಲ್ಲೂ ಗಸ್ತು ತಿರುಗುತ್ತಿದ್ದಾರೆ. ಬೈಕ್‍ಗಳಲ್ಲಿ, ಜೀಪ್‍ನಲ್ಲಿ ಪೊಲೀಸರು ಸುತ್ತಾಡುತ್ತಿದ್ದಾರೆ. ಪ್ರತಿ ಗಲ್ಲಿ ಗಲ್ಲಿಗೂ ಪೊಲೀಸ್ ಸರ್ಪಗಾವಲು ಇರಿಸಲಾಗಿದ್ದು ಪಾದರಾಯನಪುರ ಸಂಪೂರ್ಣ ಖಾಕಿ ಮಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ