ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಹೆಲ್ಮೆಟ್‍ನಿಂದ ದಾಳಿ ಮಾಡಿದ ವಾಹನ ಸವಾರ

ಬೆಂಗಳೂರು

     ವಾಯುವಿಹಾರ ಮಾಡುತ್ತಿದ್ದ ಪೊಲೀಸ್ ಇನ್ಸ್‍ಪೆಕ್ಟರ್ ಹಿತೇಂದ್ರ ಎಂ.ಎಸ್ ಅವರ ಮೇಲೆ ವಾಹನ ಸವಾರನೊಬ್ಬ ಹೆಲ್ಮೆಟ್‍ನಿಂದ ಹಲ್ಲೆ ಮಾಡಿರುವ ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     ಕೋರಮಂಗಲ ಎನ್‍ಜಿವಿ ಬಳಿ ಹಿತೇಂದ್ರ ಅವರು ವಾಯುವಿಹಾರ ಮಾಡುತ್ತಿದ್ದ ವೇಳೆ ತನ್ನ ಸ್ನೇಹಿತೆಯ ಜೊತೆ ಬರುತ್ತಿದ್ದ ಬೈಕ್ ಸವಾರ ಜೋರಾಗಿ ಶಬ್ದಮಾಡುತ್ತಾ ಅಜಾಗರೂಕತೆಯಿಂದ ಚಲಾಯಿಸಿದ್ದು ಇದರಿಂದ ಗಾಬರಿಗೊಂಡ ಇನ್ಸ್‍ಪೆಕ್ಟರ್ ಬೈಕ್ ನಿಲ್ಲಿಸಿ ಪ್ರಶ್ನಿಸಿದ್ದಾರೆ.

     ಆಕ್ರೋಶಗೊಂಡ ಸವಾರ ಸಂಜಯ್ ಇನ್ಸ್‍ಪೆಕ್ಟರ್ ಹಿತೇಂದ್ರ ಅವರಿಗೆ ಹೆಲ್ಮೆಟ್ ನಿಂದ ಹಲ್ಲೆಗೈದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಕೂಡ ಹಾಕಿದ್ದಾನೆ. ಕೂಡಲೇ ಹಿತೇಂದ್ರ ಅವರು ಹಲ್ಲೆಕೋರ ಸಂಜಯ್ ಮತ್ತು ಆತನ ಸ್ನೇಹಿತೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ