ತಿಪಟೂರು :
ಜಗತ್ತಿನಾದ್ಯಂತ ಕರೋನಾ ಎಂಬ ಮಹಾಮಾರಿಗೆ ಬಲಿಯಾಗುತ್ತಿರುವ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇಂತಹ ಸಂದಿಗ್ಧ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸೂಚನೆಯಂತೆ ಇಡೀ ದೇಶ ಲಾಕ್ ಡೌನ್ ಆಗಿರುವಂತಹ ಸಂದರ್ಭದಲ್ಲಿ ಈ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ಪೊಲೀಸರು ಹಗಲು ರಾತ್ರಿಯೆನ್ನದೇ ಶ್ರಮಿಸುತ್ತಿದ್ದಾರೆ.
ಆದರೆ ಇದಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲವೆನ್ನುವಂತೆ ನಗರದಲ್ಲಿ ಕೆಲವು ಅಂಗಡಿ ಮುಂಗಟ್ಟು ತೆರೆದು ಲಾಕ್‍ಡೌನ್ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ ಈ ಸಮಯದಲ್ಲಿ ದಾಳಿಮಾಡಿದ ಆರಕ್ಷಕರು ಕೆಲವು ಅಂಗಡಿಗಳಿಗೆ ಮುಚ್ಚಿಸಿದ್ದರು ಪ್ರಕರಣ ದಾಖಲಿಸಿರುತ್ತಾರೆ.
ತಿಪಟೂರು ನಗರದ ಕೆಲವೊಂದು ಅಂಗಡಿ ಮುಂಗಟ್ಟುಗಳು ಲಾಕ್ ಡೌನ್ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರುವಂತಹ ಅಂಗಡಿಗಳ ಮೇಲೆ ತಿಪಟೂರು ನಗರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ದಾಳಿ ನಡೆದು ಅಂಗಡಿಗಳನ್ನು ಸೀಜ್ ಮಾಡಲಾಗಿದೆ.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಹೇಗೆಬೇಕೋ ಹಾಗೆ ವ್ಯಾಪಾರ ಮಾಡುತ್ತಿದ್ದಾರೆಂಬ ನಿಖರ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ ನಗರದ ಶ್ರೀನಿವಾಸ ಹಾಡ್ರ್ವೇರ್, ಬಾಲಾಜಿ ಟ್ರೇಡರ್ಸ್, ಶಶಿ ಎಲೆಕ್ಟ್ರಿಕಲ್, ಬಂಡಿಹಳ್ಳಿ ಬಳಿಯ ವಿಜಯಲಕ್ಷ್ಮಿ ಪೈಪ್ ಇಂಡಸ್ಟ್ರೀಸ್, ರೈಲ್ವೆ ಗೇಟ್ ಬಳಿಯ ಶ್ರೀನಿಧಿ ಹಾಡ್ರ್ವೇರ್, ವಿರೂಪಣ್ಣ ಇಡ್ಲಿ ಹೋಟೆಲ್, ದೀಪಕ್ ಬುಕ್ ಹೌಸ್, ಸಾಗರ್ ಟ್ರೇಡರ್ಸ್ ಹಾಗೂ ಒಂದು ಗುಜರಿ ಅಂಗಡಿಯನ್ನು ಕೂಡ ಸೀಜ್ ಮಾಡಲಾಗಿದೆ.
ಇದರ ಮದ್ಯೆ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಏನನ್ನು ಲೆಕ್ಕಿಸದೆ ಅಂಗಡಿಗಳ ಬಾಗಿಲನ್ನು ತೆರೆದು ವ್ಯಾಪಾರ ಮಾಡುತ್ತಿರುವುದು ವಿಪರ್ಯಾಸವೇ ಸರಿ ಜೊತೆಗೆ ಯಾವುದೇ ಸಾಮಾಜಿಕ ಅಂತರ ಕಳೆದುಕೊಳ್ಳದೇ ಇರುವುದು ಎದ್ದು ಕಾಣುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
