ಶುಭ ಶುಕ್ರವಾರ : ಏಸುವಿನ ಶಿಲುಬೇಗೇರಿಸುವ ರೂಪಕ ಪ್ರದರ್ಶನ

ಬಳ್ಳಾರಿ

      ಬಳ್ಳಾರಿಯು ಹಲವು ಧರ್ಮಗಳ, ಭಾಷೆಗಳ, ವೈವಿಧ್ಯಮ ಜನರು ವಾಸಿಸುವ ನಗರವಾಗಿದೆ. ಸ್ಥಳೀಯ ಕೌಲ್‍ಬಜಾರ್ ಪ್ರದೇಶದ ಕ್ಯಾಥೋಲಿಕ್ ಕ್ರೈಸ್ತ ಪಂಥದ ಸಂತ ಅಂತೋನಿಯವರ ಪ್ರಧಾನಾಲಯದ ಮುಂಭಾಗದಲ್ಲಿ ಪ್ರಭು ಏಸುಸ್ವಾಮಿಯವರನ್ನು ಶಿಲುಬೆಗೆ ಏರಿಸುವ ದೃಶ್ಯದ ರೂಪಕವನ್ನು ಪ್ರದರ್ಶಿಸಲಾಯಿತು.

       ಏಸು ಸ್ವಾಮಿಯವರಿಗೆ ಅಂದಿನ ದಿನದಲ್ಲಿ ಆಳ್ವಿಕೆ ಮಾಡುತ್ತಿದ್ದವರು ಇವರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ. ಇವರಿಗೆ ಸಿಲುಬೆಯನ್ನು ಹೊರಿಸಿ ಇವರನ್ನು ಚಾಟಿಯಿಂದ ಹೊಡೆಯುತ್ತಾರೆ. ಕೊನೆಗೆ ಸಿಲುಬೆಗೆ ಏರಿಸಿ ಅವರ ಕಾಲಿಗೆ ಮತ್ತು ಕೈಗಳಿಗೆ ಮೊಳೆಗಳನ್ನು ಹೊಡೆಯುತ್ತಾರೆ.

        ಕೊನೆಯಲ್ಲಿ ಅವರನ್ನು ಹತ್ಯೆ ಮಾಡಲಾಗುತ್ತದೆ. ಇಂತಹ ಒಂದು ದೃಶ್ಯದ ರೂಪಕವು ನೋಡುಗರನ್ನು ಮನ ಕರಗಿಸುವಂತಿತ್ತು. ಅಂದಿನ ದಿನಗಳಲ್ಲಿ ಏಸು ಸ್ವಾಮಿಯವರು ಪಟ್ಟ ಕಷ್ಟ ಅಷ್ಟಿಲ್ಲ ಎಂಬಂತೆ ನೋಡುಗರಲ್ಲಿ ಕಣ್ಣೀರಿಡುವಂತೆ ಮಾಡಿತು.

         ಪ್ರಭು ಏಸು ಮತ್ತು ಅವರ ಅನುಯಾಯಿಗಳನ್ನು ಶಿಲುಬೆ ಏರಿಸಿದ ಪ್ರಯುಕ್ತವಾಗಿ ಶುಕ್ರವಾರವನ್ನು ಶುಭಶುಕ್ರವಾರವೆಂದು ಭಾವಿಸಲಾಗಿದೆ. ಈ ದಿನದಂದು ವಿಶ್ವದಾದ್ಯಂತ ರಜೆ ಘೋಷಿಸಲಾಗಿದೆ. ಗುಡ್ ಪ್ರೈಡೇಯನ್ನು ಕಪ್ಪು ದಿನವೆಂದು ಅಥವಾ ದುಃಖದ ದಿನವೆಂದು ಭಾವಿಸಲಾಗುತ್ತದೆ. ನಂತರ ಪವಾಡದ ರೀತಿಯಲ್ಲಿ ಏಸು ಅವರು ಭಾನುವಾರದಂದು ಮತ್ತೆ ಹೊರ ಬರುತ್ತಾರೆ. ಈ ದಿನವನ್ನು ಈಸ್ಟರ್ ಸಂಡೇ ಎಂದು ಕರೆಯಲಾಗುತ್ತದೆ. ಈ ದಿನದಂದು ಕ್ರೈಸ್ತ ಬಾಂಧವರು ಉಪವಾಸ ವ್ರತವನ್ನು ಆಚರಿಸುತ್ತಾರೆ.ಈ ಸಂದರ್ಭದಲ್ಲಿ ಕೌಲ್‍ಬಜಾರ್, ರೇಡಿಯೋಪಾಕ್, ಬೆಳಗಲ್ಲು ಕ್ರಾಸ್, ಮೋರ್‍ಗಲ್ಲಿ, ಬಂಡಿಹಟ್ಟಿ, ಸೇರಿದಂತೆ ಅನೇಕ ಕ್ರೈಸ್ತ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಏಸು ಸ್ವಾಮಿಯವರ ಕುರಿತು ಪ್ರಾರ್ಥನೆ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap