ಹೊಸಪೇಟೆ:
ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ಪರಿಸರ ದಿನಾಚರಣೆ ನಿಮಿತ್ತ ಸಾರಿಗೆ ಕಚೇರಿ ಸುತ್ತಮುತ್ತ ಸಸಿಗಳನ್ನು ನೆಡಲಾಯಿತು.
ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ನೂರ್ ಅಹಮದ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತ ಗಿಡ ಮರಗಳನ್ನು ನೆಟ್ಟು, ಪರಿಸರವನ್ನು ಸಂರಕ್ಷಿಸಬೇಕು. ಪರಿಸರ ನಾಶದಿಂದ ಇಂದು ಮಳೆ ಬೆಳೆ ಇಲ್ಲದೇ ಸಕಲ ಜೀವಿಗಳೂ ತೊಂದರೆ ಅನುಭವಿಸುವಂತಾಗಿದೆ. ಶುದ್ದ ಗಾಳಿ, ಶುದ್ದ ನೀರು ಸಿಗದೇ ಮಾನವ ತನ್ನ ಅವನತಿಗೆ ತಾನೇ ಕಾರಣನಾಗುತ್ತಿದ್ದಾನೆ. ಅದಕ್ಕಾಗಿ ಎಲ್ಲರೂ ಪರಿಸರ ರಕ್ಷಣೆ ಮಾಡುವ ಬಗ್ಗೆ ಪಣ ತೊಡಬೇಕಿದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಮಾತನಾಡಿ, ಅರಣ್ಯ ನಾಶದಿಂದ ಮಳೆ ಹೋಗಿ ಬೆಳೆ ನಾಶವಾಗುತ್ತಿದೆ. ಅಂತರ್ಜಲ ಕುಸಿದಿದೆ. ಸಾವಿರಾರು ಅಡಿ ಬೋರ್ವೆಲ್ ಕೊರೆಸಿದರೂ ನೀರು ಬರುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನಲ್ಲಿ ಗಿಡ ಮರ ಬೆಳೆಸಬೇಕು ಎಂದು ಹೇಳಿದರು.
ಇದೇ ವೇಳೆ ಚಾಲನಾ ಪರವಾನಿಗೆ ಪಡೆಯಲು ಬಂದಿದ್ದ ನೂರಾರು ಜನರಿಗೆ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜೊತೆಗೆ ಸಸಿಗಳನ್ನು ವಿತರಿಸಲಾಯಿತು.ಈ ಸಂಧರ್ಭದಲ್ಲಿ ಸಹಾಯಕ ಸಾರಿಗೆ ಅಧಿಕಾರಿ ಎನ್.ಶೇಖರ್, ಅಧೀಕ್ಷಕ ಕೆ.ಎಸ್.ಗುಂಜೊಡ್ಡಿ, ಎಫ್ಡಿಎ ಬಿ.ಎಂ.ಜಯರಾಜ್, ಸಿಬ್ಬಂದಿಗಳಾದ ನಾಸೀರ್ ಹುಸೇನ್, ಬಿ.ವೆಂಕೋಬ, ಡಿ.ಶ್ರೀಧರ ಇದ್ದರು.