ದಾವಣಗೆರೆ
ನಗರದ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ ನಡೆಯುತ್ತಿರುವ ಉಚಿತ ಕೋರ್ಸ್ ಆದ ಫೀಲ್ಡ್ ಟೆಕ್ನೀಷಿಯನ್ ಕಂಪ್ಯೂಟಿಂಗ್ ಅಂಡ್ ಪೆರಿಫೆರಲ್ಸ್‍ನ (ಎಫ್‍ಟಿಸಿಪಿ) 5 ನೇ ಬ್ಯಾಚ್ ತರಬೇತಿಯು ಮುಕ್ತಾಯಗೊಂಡಿದ್ದು, ಈ ತಿಂಗಳ ಅಂತ್ಯಕ್ಕೆ ಅನೇಕ ಕೋರ್ಸ್‍ಗಳು ಮುಕ್ತಾಯಗೊಳ್ಳಲಿದೆ.
ಹೊಸ ಬ್ಯಾಚ್‍ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು ಮೊದಲು ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 18 ರಿಮದ 35 ವಯೋಮಿತಿಯೊಳಗಿನ ಕನಿಷ್ಟ ವಿದ್ಯಾರ್ಹತೆ ಹೊಂದಿದವರೂ ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಬಹುದೆಂದು ಕೇಂದ್ರದ ವ್ಯವಸ್ಥಾಪಕ ಆರ್.ನಾಗರಾಜ್ ತಿಳಿಸಿದ್ದಾರೆ.