ಹುಳಿಯಾರು:
ಪತ್ರಿಕಾ ವರದಿಯ ಫಲಶೃತಿಯಿಂದ ಮುರಿದು ಬಿದ್ದಿದ್ದ ಚರಂಡಿ ಸ್ಲ್ಯಾಬ್‌ಗಳನ್ನು ಬದಲಾಯಿಸಿ ಸುಗಮ ಸಂಚಾರಕ್ಕೆ ಪಟ್ಟಣ ಪಂಚಾಯ್ತಿ ಅನುವು ಮಾಡಿಕೊಟ್ಟಿದೆ.ಹುಳಿಯಾರಿನ ರಂಗನಾಥಸ್ವಾಮಿ ದೇವಸ್ಥಾನದ ರಸ್ತೆಗೆ ಅಡ್ಡಲಾಗಿ ದಶಕಗಳ ಹಿಂದೆ ಬಸ್ ನಿಲ್ದಾಣದಿಂದ ರಾಮಗೋಪಾಲ್ ಸರ್ಕಲ್ ವರೆವಿಗೆ ಚರಂಡಿ ನಿರ್ಮಾಣ ಮಾಡಲಾಗಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಮಣ್ಣಿನಿಂದ ಚರಂಡಿ ಮುಚ್ಚಿ ಹೋಗಿತ್ತು. ಹಾಗಾಗಿ ವಾಹನಗಳು ಯಾವುದೇ ಕಿರಿಕಿಯಿಲ್ಲದೆ ಸಂಚಾರ ಮಾಡುತ್ತಿದ್ದವು.
ಆದರೆ ಊರು ಕ್ಲೀನ್ ಮಾಡುವ ಕನಸು ಹೊತ್ತು ಇಲ್ಲಿನ ಪಪಂ ಅಧಿಕಾರಿಗಳು ಆರಂಭದಲ್ಲಿ ಈ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆಗೆದರು. ಹೂಳೆ ತೆಗೆದಾದ ಮೇಲೆ ಚರಂಡಿ ಮೇಲೆ ಹೈವೆ ರಸ್ತೆಯವರು ತೆರವುಗೊಳಿಸಿದ್ದ ಚರಂಡಿ ಸ್ಲ್ಯಾಬ್‌ಗಳನ್ನು ಹಾಕಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು.
ಆದರೆ ಈ ಸ್ಲ್ಯಾಬ್‌ಗಳು ಹಾಕಿದ ಒಂದೆರಡು ವಾರದಲ್ಲೇ ಮುರಿದು ಬಿದ್ದವು. ಪರಿಣಾಮ ಯಾವುದೇ ನಾಲ್ಕು ಚಕ್ರದ ವಾಹನಗಳು ಓಡಾಡಲು ಆಗದಂತಾಗಿದೆಯಲ್ಲದೆ ರಾತ್ರಿ ವೇಳೆಯಲ್ಲಿ ಸ್ಲ್ಯಾಬ್ ತುಂಡಾಗಿರುವ ಬಗ್ಗೆ ಅರಿವಿಲ್ಲದೆ ಬರುವ ವಾಹನಗಳು ಅದರಲ್ಲಿ ಸಿಲುಕುತ್ತಿವೆ. ಅಲ್ಲದೆ ವೃದ್ಧರು ಮಕ್ಕಳು ರಾತ್ರಿ ವೇಳೆಯಲ್ಲಿ ಬಿದ್ದ ನಿದರ್ಶನಗಳು ಸಾಕಷ್ಟಿದ್ದವು.
ಹಾಗಾಗಿ ತಕ್ಷಣ ಸ್ಲ್ಯಾಬ್ ಬದಲಾಯಿಸುವಂತೆ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ಪತ್ರಿಕಾ ವರದಿಗೆ ಸ್ಪಂಧಿಸಿದ ಪಪಂ ಅಧಿಕಾರಿಗಳು ವರದಿ ಬಂದ ದಿನವೇ ತಮ್ಮ ಪೌರಕಾರ್ಮಿಕರನ್ನು ಬಳಕೆ ಮಾಡಿಕೊಂಡು ಮುರಿದ ಸ್ಲ್ಯಾಬ್‌ಗಳನ್ನು ಬದಲಾಯಿಸಿ ವಾಹನಗಳ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
