ಹುಳಿಯಾರು:
ಪತ್ರಿಕೆಯ ವರದಿಯ ಫಲಶೃತಿಯಿಂದ ನೆನೆಗುದಿಗೆ ಬಿದಿದ್ದ ಸಿಸಿ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.
ಚಿಕ್ಕಬಿದರೆಯ 150 ಎ ನ್ಯಾಷನಲ್ ಹೈವೆ ರಸ್ತೆಯಿಂದ ಸಂಗೇನಹಳ್ಳಿ, ಅಣೇಪಾಳ್ಯ ಮೂಲಕ ಕಂದಿಕೆರೆಗೆ ಕಳೆದ 2 ವರ್ಷಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಈ ರಸ್ತೆಯನ್ನು ಚಿಕ್ಕಬಿದರೆಯ ಡೇರಿ ಬಳಿ ಸಿಸಿ ರಸ್ತೆ ಮಾಡುವ ಸಲುವಾಗಿ ಡಾಂಬರ್ ಹಾಕದೆ ಹಾಗೆಯೇ ಬಿಡಲಾಗಿತ್ತು.
ಡಾಂಬರ್ ಹಾಕದೆ ಹಾಗೆಯೇ ಬಿಟ್ಟಿರುವ ಸ್ಥಳಕ್ಕೆ ಚಿಕ್ಕಬಿದರೆ ಗ್ರಾಮದ ಮೇಲ್ಭಾಗದ ಮನೆಗಳ ಬಟ್ಟೆ, ಪಾತ್ರೆ, ಸ್ಥಾನದ ನೀರು ಸೇರಿದಂತೆ ಮಳೆಗಾಲದಲ್ಲಿ ಮಳೆ ನೀರು ಹರಿದು ಬಂದು ನಿಲ್ಲುತ್ತಿತ್ತು. ಪರಿಣಾಮ ಸೊಳ್ಳೆಗಳು ಆವಾಸ ಸ್ಥಳವಾಗಿ ಮಾರ್ಪಡುವುದಲ್ಲದೆ ಇಲ್ಲಿನ ನಿವಾಸಿಗಳಿಗೆ, ಈ ರಸ್ತೆಗೆ ಓಡಾಡುವವರಿಗೆ ಕಿರಿಕಿರಿ ತಂದೊಡ್ಡಿತ್ತು ಈ ಬಗ್ಗೆ ಇಲ್ಲಿನ ನಿವಾಸಿ ಸತೀಶ್ ಅವರು ಪತ್ರಿಕೆ ಮೂಲಕ ಜಿಪಂ ಎಇಇ ಅವರಿಗೆ ಸಿಸಿ ರಸ್ತೆ ಮಾಡಿ ಅಥವಾ ಸೇತುವೆ ಮಾಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದರು.
ಈಗ ಪತ್ರಿಕೆಯ ವರದಿಯ ಫಲಶೃತಿಯಿಂದ 2 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಿಸಿ ರಸ್ತೆಯನ್ನು ಮಾಡಲಾಗಿದ್ದು ಊರಿನ ಮೇಲ್ಭಾಗದಿಂದ ಹರಿದು ಬರುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಸಿಸಿ ರಸ್ತೆ ಮಧ್ಯೆ ಪುಟ್ಟ ಕಾಲುವೆ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ