ತುರುವೇಕೆರೆ:
ತಾಲೂಕಿನ ಅರೇಮಲ್ಲೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಪ್ರಜಾಪ್ರಗತಿ ಫಲಶ್ರುತಿಯಿಂದಾಗಿ ಹರಿದ ರಾಷ್ಟ್ರದ್ವಜ ಬದಲಾಯಿಸಿದ ಅಧಿಕಾರಿಗಳು ಶನಿವಾರ ಹೊಸ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಿದ್ದಾರೆ.
ಪಂಚಾಯ್ತಿ ಪಿಡಿಓ ಹಾಗೂ ಕಾರ್ಯದರ್ಶಿ ಗ್ರಾಮಪಂಚಾಯ್ತಿಯಲ್ಲಿ ಹರಿದ ರಾಷ್ಟ್ರ ಧ್ವಜ ಆರೋಹಣ ಮಾಡಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ಗ್ರಾಮಸ್ಥರು ಶುಕ್ರವಾರ ಆರೋಪ ಮಾಡಿದ ಹಿನ್ನಲೆಯಲ್ಲಿ ಪ್ರಜಾಪ್ರಗತಿ ಪತ್ರಿಕೆಯಲ್ಲಿ ರಾಷ್ಟ್ರಧ್ವಜಕ್ಕ ಅಪಮಾನ ಎಂಬ ಶಿರ್ಷಿಕೆ ಅಡಿಯಲ್ಲಿ ಶನಿವಾರ ಪ್ರಕಟಗೊಂಡಿತ್ತು. ಈ ಇದರಿಂದ ಎಚ್ಚತ್ತ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಕಾರ್ಯದರ್ಶಿಗಳು ಶನಿವಾರ ಹರಿದ ರಾಷ್ಟ್ರಧ್ವಜ ಬದಲಾಯಿಸಿ ಹೊಸ ರಾಷ್ಟ್ರ ಧ್ವಜವನ್ನು ಇಂದು ಗ್ರಾಮಪಂಚಾಯ್ತಿ ಆವರಣದಲ್ಲಿ ಆರೋಹಣ ಮಾಡಿದ್ದಾರೆ.
ಇ.ಓಯಿಂದ ಪಿಡಿಓಗೆ ನೋಟೀಸ್: ಶುಕ್ರವಾರ ಗ್ರಾಮ ಪಂಚಾಯ್ತಿಯಲ್ಲಿ ಹರಿದ ರಾಷ್ಟ್ರಧ್ವಜ ಆರೋಹಣ ನೆಡೆಸಿ ಆಗೌರವ ತೋರಿದ್ದು ಬೇಜವಬ್ದಾರಿಯಿಂದ ಕರ್ತವ್ಯ ನಿರ್ಲಕ್ಷತೆ ತೋರಿದ್ದೀರಿ. ಈ ಬಗ್ಗೆ ಪ್ರಜಾಪ್ರಗತಿ ಪತ್ರಿಕೆಯಲ್ಲಿ ವರದಿಯಾಗಿದ್ದು ನಿಮ್ಮ ವಿರುದ್ದ ಕೆ.ಸಿ.ಎನ್.ಆರ್ ನಿಯಮಗಳನ್ವಯ ಶಿಸ್ತು ಕ್ರಮ ವಹಿಸಬಾರದೇಕೆ ಎಂದು ಶನಿವಾರ ಅರೇಮಲ್ಲೇನಹಳ್ಳಿ ಪಿಡಿಓ ಕೃಷ್ಣೆಗೌಡರಿಗೆ ಈ ಬಗ್ಗೆ ಸೂಕ್ತ ವಿವರಣೆಯೊಂದಿಗೆ ಲಿಖಿತ ಮೂಲಕ ಕಾರಣವನ್ನು ತಿಳಿಸುವಂತೆ ಇ.ಒ.ಮಲ್ಲೇಶಪ್ಪ ನೋಟೀಸ್ ನೀಡಿದ್ದಾರೆ.