ಶಿರಾ
ನಗರದಲ್ಲಿ ಕನಕ ನೌಕರರ ಸಂಘದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಅಭಿನಂಧಿಸಲಾಯಿತು. ಶ್ರೀ ಈಶ್ವರಾನಂದಪುರಿಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಂ.ರೇವಣ್ಣ, ಶಾಸಕ ಬಿ.ಸತ್ಯನಾರಾಯಣ್, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಶಿರಾ
ನಗರದ ಪ್ರವಾಸಿ ಮಂದಿರದಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರನ್ನು ಗುತ್ತಿಗೆದಾರರ ಸಂಘದ ವತಿಯಿಂದ ಬರಗೂರು ಬೊಪ್ಪಣ್ಣ ಅಭಿನಂಧಿಸಿದರು. ಪ್ರಜಾಪ್ರಗತಿಯ ಸಂಪಾದಕ ಎಸ್.ನಾಗಣ್ಣ, ಉಪ ಸಂಪಾದಕ ಟಿ.ಎನ್.ಮಧುಕರ್, ಹಲ್ಕೂರು ಲಿಂಗಪ್ಪ, ಬಿ.ಪಿ.ಪಾಡುರಂಗಯ್ಯ, ಗುರುಸಿದ್ಧಪ್ಪ, ದೇವರಾಜು, ರಂಗನಾಥ್ ಎಸ್.ಕೆ.ದಾಸಪ್ಪ ಮುಂತಾದವರು ಹಾಜರಿದ್ದರು