ತಿಪಟೂರು :
ಯಾವುವುದೋ ಯೋಜನೆಗಳನ್ನು ಮಾಡಿ ಸೂಕ್ತ ಪರಿಹಾರಸಿಗದೇ, ಕಾಮಗಾರಿಯನ್ನು ಪೂರ್ಣಗೊಳಿಸದೇ ರೈತರನ್ನು ಪ್ರಜ್ಞಾವಂತರನ್ನಾಗಿ ಮಾಡಿದ್ದಕ್ಕೆ ಅಧಿಕಾರಿಗಳಿಗೆ ಧನ್ಯವಾದಗಳು ನಾವು ಇವುಗಳನ್ನು ಹೆದರಿಸಿ ಹೋರಾಟಮಾಡದೇ ಇದ್ದರೆ ವಿನಾಷ ನಿಶ್ಚಿತ ಎಂದು ಆರ್.ಕೆ.ಎಸ್.ನ ಸತೀಶ್ ತಿಳಿಸಿದರು.
ನಗರದಲ್ಲಿ ಇಂದು ಕರ್ನಾಟಕ ರಾಜ್ಯ ರೈತ ಸಂಘ, ದಕ್ಷಿಣ ಒಳನಾಡು ನೀರಾವರಿ ಹೋರಾಟ ಸಮಿತಿ, ಬೆಲೆಕಾವಲು ಸಮಿತಿ, ಭೂಸಂತ್ರಸ್ಥರ ಹೋರಾಟ ಸಮಿತಿ, ಸೌಹಾರ್ಧ ತಿಪಟೂರು, ಹಲವಾರು ಕನ್ನಡ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಎತ್ತಿನಹೊಳೆ ಯೋಜನೆಯಡಿ ತಿಪಟೂರು ತಾಲ್ಲೂಕಿಗೆ ನೀರು ಹಂಚಿಕೆ, ಭೂಸ್ವಾಧಿನ ಕಾಯ್ದೆ ತಿದ್ದುಪಡಿ ಮತ್ತು ಬರಗಾಲದ ಪರಿಹಾರ ಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಬಂದ್ಮಾಡಿ ಮಾತನಾಡಿದ ಅವರು ಇಂದು ಅದೇಷ್ಟೋ ಯೋಜನೆಗಳು ಅನುಷ್ಠಾನಗೊಂಡು ಅವುಗಳ ರೀಪೇರಿಗೆ ಬಂದು ಅವುಗಳು ರಿಪೇರಿಯ ಹಣಸಹ ಗುತ್ತಿಗೆದಾರರ ಕೈಸೇರುತ್ತಿದೆ ಆದರೆ ಅದಕ್ಕಾಗಿ ಭೂಮಿ, ಮನೆ ಕಳೆದುಕೊಂಡ ರೈತರಿಗೆ ನ್ಯಾಯದೊರೆತಿಲ್ಲ.
ಅಧಿಕಾರಿಗಳು, ರಾಜಕಾರಣಿಗಳು ಮತ್ತು ಗುತ್ತಿಗೆದಾರು ರೈತರಿಗೆ ನಿರಂತರವಾಗಿ ಮೋಸಮಾಡುತ್ತಲೇ ಬಂದಿದ್ದಾರೆ. ಪರಿಹಾರ ಕೊಡುವವರು ಎಂದಿಗೂ ರೈತರಿಕೆ ಕನಿಷ್ಠಬೆಲೆಯನ್ನೇ ಕೊಡುತ್ತಲೆ ಬಂದು ರೈತರನ್ನು ಬಲಿಪಶುಗಳನ್ನಾಗಿ ಮಾಡುತ್ತಲೆ ಬಂದಿದ್ದು ಇದರಲ್ಲಿ ಗುತ್ತಿಗೆದಾರರಿಗೆ ಹುಂಡಿಹಣ ಸಿಗುತ್ತಿದ್ದು ರೈತರಿಗೆ ಪುಡಿಗಾಸನ್ನೆಸೆಯುತ್ತಿದ್ದಾರೆ. ಇವರು ಯಾವ ಮಟ್ಟದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆಂದು ತಿಳಿಯಿರ.
ಹಳಿಯನರಿಗೆ ಕುಡಿಯು, ದನಕರುಗಳಿಗೆ ಕುಡಿಯಲು ನೀರು ಬೇಕು, ಕಲ್ಪತರು ನಾಡು ಹೋಗಿ ಇಂದು ಸುಡುಗಾಡಾಗುತ್ತಿದ್ದೆ ನೀವುಯಾರಾದು ಸಹ 4 ಪಥದ ರಸ್ತೆಬೇಕು ಎಂದು ಕೇಳಿದ್ದೀರಾ, 4 ಗಂಟೆಯಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗಲು ರಸ್ತೆಬೇಕಾ, ಹಳ್ಳಿಗಳಲ್ಲಿ ಕೆರೆಗಳಲ್ಲಿ ನೀರಿಲ್ಲದೇ ಅಂತರ್ಜಲ ಬತ್ತಿದೆ ಆದರೆ ನೀವು ನೀರುಕೊಡಿ ಎಂದು ಕೇಳದರೆ ರಸ್ತೆಮಾಡುಲು ಹೊರಟ್ಟಿದ್ದೀರ ಎತ್ತಿನಹೊಳಗೆ ಭೂಮಿಕಳೆದುಕೊಂಡು ನಿರ್ಗತಿಕರಾದ ಕುಟುಂಬಗಳು ಮನೆಮಠಗಳನ್ನು ತೊರೆದು ಇಂದು ಗುಳೆಹೋಗುತ್ತಿವೆ, ಇಂತಹ ಪರಿಸ್ಥಿತಿಯಲ್ಲಿ ನೋಟಿಸ್ಸಹ ಕೊಡದೇ ಭೂಮಿಯನ್ನು ಅಗೆಯುತ್ತಿದ್ದಾರೆ.
ಆದರೆ ಇಂದು ನಗರದ ಹತ್ತಿರ ಒಂದು ಹೊಸ ಕಾರ್ಖಾನೆ ಪ್ರಾರಂಭವಾಗುತ್ತಿದೆ ಎಂದರೆ ಇಲ್ಲಿ ಗಾರ್ಮೆಂಟ್ಸ್ ಬಂದಿದೆ ಇದು ಇಲ್ಲಗೆ ಬರುವ ಮೊದಲು ಕೊರಟಗೆರೆ ಮತ್ತು ಬೆಂಗಳೂರಿನಲ್ಲಿ ತನ್ನ ಕಾರ್ಖಾನೆಗಳನ್ನು ಮುಚ್ಚಿ ಅಲ್ಲಿನ ನೌಕರರಿಗೆ ಸಂಭಾವನೆ ಮತ್ತು ಪಿ.ಎಫ್ ಕೊಡದೇ ಲಾಸ್ ಎಂದು ಬಾಗಿಲುಹಾಕಿ ಬಂದಿವೆ ಇವುಗಳಿಗೆ ಯಾರು ಸಹ ಕೇಳುವುದಿಲ್ಲ
ಆದರೆ ಒಬ್ಬರೈತ ಸಾಲವನ್ನು ತೀರಿಸಲಿಲ್ಲ ಎಂದರೆ ಅವನಿಗೆ ನೋಟಿಸ್ ಕಳುಹಿಸುತ್ತಾರೆ ಆದರೆ ಇಂತಹ ಹಲವಾರು ಕಾರ್ಖಾನೆಗಳಿಗೆ ನಷ್ಟವಾಗಿದೆ ಎಂದು ಸಾಲವನ್ನು ಮನ್ನಮಾಡುತ್ತಾರೆ ಈಗಿರುವ ಸರ್ಕಾರಗಳು ಬಂಡವಾಳ ಷಾಹಿಯ ಪರವೇ ಹೊರತು ರೈತರಿಗಲ್ಲ. ಮುಂದಿನ ದಿನಗಳಲ್ಲಿ ಹೀಗೆಯೇ ಮುಂದುವರೆದರೆ ನಾವು ಆಹಾರವನ್ನು ಬೇರೆ ದೇಶಗಳಿಂದ ಆಮದುಮಾಡಿಕೊಳ್ಳಬೇಕೇ ಹೊರತು ನಮಗೆ ಉಳಿಗಾಲವಿಲ್ಲ ನಮ್ಮ ಹೋರಾಟವನ್ನು ನೀರುಕೊಡುವವರೆಗೂ ಮುಂದುವರೆಸಬೇಕೆಂದರು.
ಸಿ.ಐ.ಟಿ.ಯುನ ಚನ್ನಬಸವಣ್ಣ ಮಾತನಾಡಿ ಇಂದು ನೀರಿಗಾಗಿ ನಾವು ಹೋರಾಟ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ನಾವೆಲ್ಲ ಪಕ್ಷಬೇದವನ್ನು ಮರೆತು ಇಂತಹ ಹೋರಾಟಗಳಲ್ಲಿ ಭಾಗವಹಿಸಿ ಸರ್ಕಾರವನ್ನು ಎಚ್ಚರಿಸಬೇಕು. ಇಂದು ನಾವೇನಾದರು ಹೋರಾಟಮಾಡುತ್ತೇವೆ ಎಂದು ಹೊರಟರೆ ಆರಕ್ಷಕರಾದ ನೀವುಗಳು ತಡೆಯುತ್ತೀರ ಆದರೆ ನಿಮ್ಮ ಸಂಬಳದ ಸಮಸ್ಯೆಯನ್ನೇ ನೀವು ಪರಿಹರಿಸಿಕೊಳ್ಳಲು ಸಾಧ್ಯವಾಗಲಿಲ್ಲ ನೀವೇನು ನಮಗೆ ನ್ಯಾಯಕೊಡಿಸುತ್ತೀರ ಎಂದು ಪೋಲೀಸರಿಗೆ ಛೇಡಿಸಿದರು.
ಅಂದಿನ ದಿನದಲ್ಲಿ ಬಾರಿ ನೀರಾವರಿ ಸಚಿವರಾದ ಹೆಚ್.ಡಿ.ದೇವೇಗೌಡರು ಮತ್ತು ನಮ್ಮ ಪಕ್ಕದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎನ್.ಬಸವಯ್ಯನವರು ಸಣ್ಣ ನೀರಾವರಿ ಸಚಿವರಾಗಿದ್ದರು ಆಗ ಹೇಮಾವತಿ ನಾಲೆಯು ಹೊನ್ನವಳ್ಳಿ ಭಾಗವನ್ನು ಹಾಯ್ದು ಹೋಗುತ್ತಿತ್ತು ಆದರೆ ಆಗಿನ ರಾಜಕಾರಣಿಗಳು ನೀರು ಹೆಚ್ಚಾಗಿ ತೆಂಗು ಮತ್ತು ಅಡಕೆ ಬೆಳೆಗಳು ಹಾಳಾಗಿಹೊತ್ತವೆಂದು ಹೇಳಿ ನಾಲೆಯ ನಕ್ಷೆಯನ್ನೇ ಬದಲಾಯಿಸಿದ ಪರಿಣಾಮವಾಗಿ ನಾವಿಂದು ನೀರಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗ ನಮ್ಮ ಮಕ್ಕಳು ಬೆಂಗಳೂರಿನಲ್ಲಿ ಇದ್ದು ತಂದೆ-ತಾಯಿಗಳಿಗೆ ಸಾಯುವ ಸಂದರ್ಭದಲ್ಲಿ ನೀರುಬಿಡಲು ಸಾದ್ಯವಾಗುತ್ತಿಲ್ಲ ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ನಾವಿರುವಾಗ ನಮಗೆ ಎತ್ತಿನಹೊಳೆ ಯೋಜನೆಯಲ್ಲಿ ಭೂಮಿಕಳೆದುಕೊಂಡರು ಒಂದು ಹನಿ ನೀರುಸಿಗುತ್ತಿಲ್ಲ. ನಮಗೆ ನೀರು ಬಿಟ್ಟು ನೀರುತೆಗೆದುಕೊಂಡು ಹೋಗುವಂತೆ ನಾವು ಮಾಡಬೇಕೇಂದರು.
ಆರಕ್ಷಕರಿಂದ ಪ್ರತಿಭಟನಾಕಾರರ ಬಂಧನ : ಪ್ರತಿಭಟನಾ ಸ್ಥಳದಲ್ಲಿ ಸೂಕ್ತ ಬಂದೂಬಸ್ತ್ಮಾಡಿದ ಆರಕ್ಷಕರು ತಾವು ಕೊಟ್ಟಿದ ಸಮಯ ಮುಗಿದ ನಂತರ ಪ್ರತಿಭಟನಾಕಾರರನ್ನು ಬಂಧಿಸಿ ವಾಹನಕ್ಕೆ ಹತ್ತಿಸಿಕಳುಹಿಸಿಕೊಟ್ಟು ರಸ್ತೆಯನ್ನು ಬಿಡುಗಡೆಗೊಳಿಸಿ ಸಾರ್ವಜನಕರ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಪ್ರತಿಭಟನಾಕಾರರು ಇಂದು ಬೆಳಗ್ಗೆ ನಿದನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಗಿರೀಶ್ ಕಾರ್ನಾಡ್ರವರಿಗೆ ಮೌನಾಚರಣೆಯ ಮುಖಾಂತರ ಗೌರವಸಲ್ಲಿಸಿದ್ದಲ್ಲದೇ ರಸ್ತೆ ತಡೆನಡೆಸುವಾಗ ಮಧ್ಯದಲ್ಲಿ ಬಂದಂತಹ ಆಂಬುಲೆನ್ಸ್ಗೆ ದಾರಿಮಾಡಿಕೊಟ್ಟು ಮಾನವೀಯತೆಯನ್ನು ಮೆರೆದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ದಕ್ಷಿಣ ಒಳನಾಡು ನೀರಾವರಿ ಹೋರಾಟ ಸಮಿತಿ, ಬೆಲೆಕಾವಲು ಸಮಿತಿ, ಭೂಸಂತ್ರಸ್ಥರ ಹೋರಾಟ ಸಮಿತಿ, ಸೌಹಾರ್ಧ ತಿಪಟೂರು, ಜನಸ್ಪಂದನ ಟ್ರಸ್ಟ್, ಮುಸ್ಲಿಂ ಜಮಾತ್, ರೈತಕೃಷಿ ಕಾರ್ಮಿಕರ ಸಂಘ, ಸಾವಯವ ಕೃಷಿ ಪರಿವಾರ, ಕನ್ನಡ ರಕ್ಷಣಾ ವೇದಿಕೆ, ನವ ಕರ್ನಾಟಕ ಯುವಶಕ್ತಿ ಮತು ಹಲವಾರು ಸಂಘಟನೆಗಳು ಭಾಗವಹಿಸಿದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/06/10-TTR-1A.gif)