ಚಿತ್ರದುರ್ಗ
ಲಿಂಗಾಯಿತ ಪ್ರತ್ಯೇಕ ಧರ್ಮದ ಚಳುವಳಿ ಮುನ್ನಡೆಸಬೇಕಾದರೆ ರಾಜಕಾರಣಿಗಳನ್ನು ಜನತೆ ನಂಬುವುದಿಲ್ಲ. ಲಿಂಗಾಯುತರ ಚಳುವಳಿಯ ನೇತೃತ್ವವನ್ನು ಶ್ರೀ ಮುರುಘಾ ಶರಣರು ವಹಿಸಿಕೊಳ್ಳಬೇಕು. ಬಸವಣ್ಣನವರ ವೈಚಾರಿಕ ನೆಲೆಗಟ್ಟನ್ನು ಬೆಳೆಸುತ್ತಿರುವ ನೀವು ಮುಂದಾಳತ್ವ ವಹಿಸಿದಲ್ಲಿ ಜಯ ಸಿಗಲಿದೆ ಎಂದು ಬಸವ ಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದುರ್ಗದ ಶ್ರೀ ಮುರುಘಾಮಠ ಕೂಡ ಮಾಡುವ 2018ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕಾರ ಮಾಡಿ ಮಾತನಾಡಿದ ಅವರು, ಕಲಬುರ್ಗಿ ಒಬ್ಬ ವಿಚಾರವಾದಿಯಾಗಿದ್ದು, ಅವರ ಚಿಂತನೆಗಳು ಸಮಾಜಕ್ಕೆ ಪೂರಕವಾಗಿದ್ದವು. ಲಿಂಗಾಯಿತ ಪ್ರತ್ಯೇಕ ಧರ್ಮದ ರಾಜಕೀಯ ಕಿಚ್ಚನ್ನು ಹಚ್ಚಿದವರು ಕಲಬುರ್ಗಿ. ಅಂತಹವರನ್ನು ನಮ್ಮ ನಾಡು ಕಳೆದು ಕೊಂಡಿದೆ. ಎಂದು ವಿಷಾಧಿಸಿದರು.
ಬಸವಧರ್ಮ ಕರ್ನಾಟಕದ ಮೊದಲ ಸ್ವತಂತ್ರ ಧರ್ಮ. ಲಿಂಗಾಯಿತ ಪ್ರತ್ಯೇಕ ಧರ್ಮದ ಚಳುವಳಿ ಮುನ್ನಡೆಸಬೇಕಾದರೆ ರಾಜಕಾರಣಿಗಳನ್ನು ಜನತೆ ನಂಬುವುದಿಲ್ಲ. ಸಾಹಿತಿಗಳೂ ವಿಶ್ವಾಸ ಕಳೆದುಕೊಂಡಿದ್ದಾರೆ ಮುರುಘಾ ಶರಣರಂಥವರು ವಿಶ್ವಾಸ ಉಳಿಸಿಕೊಂಡಿದ್ದಾರೆ ಚಳುವಳಿಯನ್ನು ಶ್ರೀ ಮುರುಘಾ ಶರಣರು ವಹಿಸಿಕೊಳ್ಳಬೇಕು ಎಂದು ಹೇಳಿದರು
ನನಗೆ ಮತ್ತು ಬಂಡಾಯದವರಿಗೆ ಮುರುಘಾಮಠ ತವರುಮನೆ ಎಲ್ಲಾ ಮಠಗಳನ್ನೂ ನಾನು, ಒಪ್ಪುವುದಿಲ್ಲ ನಮ್ಮಂಥವರು ಮೆಚ್ಚುವುದಿಲ್ಲ ಮುರುಘಾಶ್ರೀಗಳು ಜಗದ್ಗುರು ಪದವಿ ತ್ಯಾಗ ಮಾಡಿ ಶರಣ ಎಂದು ಕರೆದುಕೊಂಡರು. ಮುರುಘಾಶರಣರ ಮೂಲಕ ಬಸವಣ್ಣ ನನಗೆ ನೀಡಿದ ಪ್ರಶಸ್ತಿ ಇದಾಗಿದ್ದು, ನಾನು ಪಡೆದುಕೊಂಡಿದ್ದಲ್ಲ ಎಂದು ಚಂಪಾ ನುಡಿದರು
ನಮ್ಮದು ವೈಚಾರಿಕ, ಬೌದ್ದಿಕ ಹಾಗೂ ಕ್ರಾಂತಿಕಾರಿ ಪರಂಪರೆ.ಬಸವ ಪರಂಪರೆಯ ಕೊಂಡಿಗೆ ನಮ್ಮ ಮನೆತನ ಸಿಕ್ಕಿದ್ದು, ಅವರ ಅಚಾರ ವಿಚಾರಗಳನ್ನು ಪಾಲಿಸುತ್ತಾ ಬಂದಿದ್ದೆವೆ.ಬಸವಣ್ಣ ಯಾರು ಅನ್ನುವುದಕ್ಕಿಂತ ಯಾರು ಅಂತಾ ತಿಳಿದುಕೊಳ್ಳುವುದು ಮುಖ್ಯ. ಯಾರು ಕಾಲದ ಚೌಕಟ್ಟನ್ನು ಮೀರಿ ಯಾರು ಬೆಳೆಯುತ್ತಾರೋ ಅವರು ದಂತಕಥೆ ಆಗುತ್ತಾರೆ. ಅದರಲ್ಲಿ ಬಸವಣ್ಣ ಕೂಡ ದಂತ ಕಥೆ ಆಗಿದ್ದಾರೆ ಎಂದು ಹೇಳಿದರು.
ಸಾಕ್ಷಿ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಬಸವಣ್ಣ ಇರುತ್ತಾನೆ. ಪ್ರಶ್ನೆ ಕೇಳುವುದು ಅವನ ಕೆಲಸ ಆಗಿದೆ. ಬಸವಣ್ಣ ವಚನಗಳಲ್ಲಿ ಪ್ರಶ್ನಾರ್ತಕ ಚಿಹ್ನೆಗಳೇ ಹೆಚ್ಚಾಗಿವೆ.ನಮ್ಮ ಎಲ್ಲಾ ಸಂಕಷ್ಟ, ದುಗುಡ ದುಮ್ಮನಗಳನ್ನು ಸರಿಪಡಿಸುವಲ್ಲಿ ಬಸವಣ್ಣನವರ ವಚನಗಳು ದಾರಿದೀಪ ಅಗಿವೆ. ನಾಡಿನಲ್ಲಿ ಸಾಕಷ್ಟು ಮಠಗಳು ಇವೆ ಆದರೆ ಎಲ್ಲಾ ಮಠಗಳ ಜೊತೆ ಉತ್ತಮ ಭಾಂದವ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ ಎಂದ ಚಂಪಾ ಪತ್ರಿಕೆ ಆರ್ಥಿಕ ಸಂಕಷ್ಟದಿಂದ ನಿಂತಿದ್ದು, ಅದನ್ನು ಪುನಃ ಪ್ರಾರಂಭಿಸಲು ಮುಂದಾಗಿದ್ದು. ಇಪತ್ತು ಲಕ್ಷಕ್ಕೆ ಶ್ರೀ ಮಠ ನೀಡಿರುವ ಐದು ಲಕ್ಷ ಸಹಾಯವಾಗಲಿದ್ದು. ನಿಮ್ಮೆಲ್ಲರ ಸಹಕಾರದಿಂದ ಬೆಳೆಸಬೇಕು ಎಂದರು.
ಮೈಸೂರು ಮಹಾರಾಜ ವಂಶದ ಯಧುವೀರ ಓಡೆಯರ್ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಬಸವಣ್ಣ ಅವರ ಕೊಡುಗೆ ಅಪಾರವಾದದ್ದು.12 ನೇ ಶತಮಾನದಲ್ಲಿ ಸಮಾಜವನ್ನುಯಾವ ರೀತಿ ರೂಪಗೊಳಿಸಬೇಕು ಎಂಬುದನ್ನು ಅಂದೇ ತಿಳಿಸಿಕೊಟ್ಟಿದ್ದರು. ಕಲಿಯುಗದಲ್ಲಿ ನಮ್ಮ ಮನಸ್ಸಿನಲ್ಲೆ ಒಳ್ಳೆಯ ಹಾಗೂ ದುಷ್ಟ ಎರಡು ಪ್ರಭಾವಗಳು ಇರುತ್ತದೆ ಅದರಲ್ಲಿ ಒಳ್ಳೆಯ ಗುಣಗಳನ್ನು ನಾವುಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕೃಷ್ಣರಾಜ ಮಹಾರಾಜ ಒಡೆಯರ್ ಅಂದು ಇಲ್ಲಿನ ಶರಣರಿಗೆ ಪಾದ ಪೂಜೆ ಮಾಡುವ ಮೂಲಕ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಅದೇ ರೀತಿ ಇಂದು ಸಹ ಉತ್ತಮ ಭಾಂದವ್ಯ ಬೆಳೆದಿದೆ.ಹಿಂದಿನ ತಲೆ ಮಾರಿನವರು ಕಟ್ಟಿರುವ ಮೈಸೂರು ಅರಮನೆಯನ್ನು ತಮ್ಮ ಆಸ್ತಿಯಂತೆ ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕು ಆಗ ಮಾತ್ರ ಐತಿಹಾಸಿಕ ಪ್ರಾಚೀನ ವಸ್ತಗಳು ಉಳಿಯಲು ಸಾಧ್ಯ ಎಂದ ಅವರು ಆರಮನೆ ಪರವಾಗಿ ಇಲ್ಲಿ ಮೊದಲ ಭಾರಿಗೆ ಬಂದಿದ್ದು, ಬಸವ ಜಯಂತಿ ಶುಭಾಶಯಗಳನ್ನು ಕೋರಿದರು.
ಡಾ. ಶಿವಮೂರ್ತಿ ಮುರುಘಾ ಶರಣರು ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು. ಸಂದರ್ಭದಲ್ಲಿ ಮಾತೆ ಗಂಗಾದೇವಿ, ಫಾದರ್ ಥಾಮಸ್, ವೆಂಕಟೇಶ್ ಲಾಡ್, ಜಯ್ಯಣ್ಣ ಲವಕುಮಾರ್, ಶಿವಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
