ಎಲ್ಲಾ ಧರ್ಮಗಳಲ್ಲೂ ಪ್ರವಚನಕ್ಕೆ ಅವಕಾಶ;ಶಿಮೂಶ

ಚಿತ್ರದುರ್ಗ :

    ವಿದ್ಯೆ, ಬುದ್ಧಿ ಮತ್ತು ಹೃದಯವಂತಿಕೆ ಈ ಎಲ್ಲವನ್ನು ಪ್ರವಚನಮಾಲೆ ನಮಗೆ ಕಲಿಸುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.ಶ್ರೀಮುರುಘಾಮಠದಲ್ಲಿ ನಡೆಯುವ ಶರಣಸಂಸ್ಕೃತಿ ಉತ್ಸವ-2019ರ ಅಂಗವಾಗಿ 24-9-19ರಿಂದ 1-10-19ರವರೆಗೆ ನಡೆಯಲಿರುವ ವಿಶೇಷ ಪ್ರವಚನಮಾಲೆಯ ಉದ್ಘಾಟನಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

   ಭಾರತೀಯ ಪರಂಪರೆಯನ್ನು ಭಾಷಣ ಮತ್ತು ಪ್ರವಚನದ ಮೂಲಕ ಕಟ್ಟಿಕೊಡುವುದನ್ನು ನಾವು ಕಾಣುತ್ತೇವೆ. ಎಲ್ಲ ಧರ್ಮಗಳಲ್ಲಿ ಪ್ರವಚನಕ್ಕೆ ಅವಕಾಶವಿದೆ. ಪ್ರವಚನ ಮತ್ತು ಧರ್ಮ ಇವುಗಳ ಆಶಯ ಬೆಳವಣಿಗೆ. ಮಾನವರಲ್ಲಿ ಬಹುತೇಕರು ಭೌತಿಕ ಬೆಳವಣಿಗೆಗೆ ಆದ್ಯತೆ ನೀಡುತ್ತಾರೆ. ಆದರೆ ಬದುಕಿನಲ್ಲಿ ಇಷ್ಟಕ್ಕೆ ಮಾತ್ರ ಸೀಮಿತವಾಗಬಾರದು. ಆ ಹಿನ್ನೆಲೆಯಲ್ಲಿ ಮಾನವನ ಬೌದ್ಧಿಕ ಮಾನಸಿಕ ಬೆಳವಣಿಗೆಗಾಗಿ ಈ ಪ್ರವಚನಮಾಲೆಯನ್ನು ಶ್ರೀಮಠವು ಆಯೋಜಿಸಿದೆ ಎಂದರು  ಬಸವ ತತ್ತ್ವದ ನೆಲೆಯಲ್ಲಿ ಬೆಳೆದವರಿಗೆ ಬುದ್ಧಿಯ ಬೆಳೆ, ಹೃದಯವಂತಿಕೆಯ ಬೆಲೆ ಫಲವತ್ತಾಗಿರುತ್ತದೆ. ಹಾಗಾಗಿ ಜನರು ಬಸವತತ್ತ್ವದ ವಿಚಾರಗಳನ್ನು ಅರಿಯಬೇಕು. ಆಗ ಬುದ್ಧಿ, ಹೃದಯವಂತಿಕೆ ಅವರಿಗೆ ಲಭಿಸುತ್ತದೆ ಎಂದು ಶರಣರು ನುಡಿದರು.

   ಈ ಬಾರಿಯ ಪ್ರವಚನಕಾರರಾಗಿ ಆಗಮಿಸಿದ್ದ ಅತ್ತಿವೇರಿಯ ಬಸವಧಾಮ ಆಶ್ರಮದ ಪೂಜ್ಯಶ್ರೀ ಮಾತೆ ಬಸವೇಶ್ವರಿ ಪ್ರವಚನ ನೀಡುತ್ತ, ಮಾನವ ಜನ್ಮ ದೊಡ್ಡದು. ಅದು ಒಳ್ಳೆಯ ವಿಚಾರಗಳಿಂದ ಕಾರ್ಯಗಳಿಂದ ಸದ್ಬಳಕೆ ಮಾಡಿಕೊಳ್ಳಿರಿ. ಈ ದೇಹಕ್ಕೆ ಸದಾ ಒಳ್ಳೆಯ ವಿಚಾರಗಳನ್ನು ತುಂಬಬೇಕು. ಆಗ ದೇಹ ಸುಂದರವಾಗಿ ಕಾಣುತ್ತದೆ. ಮಾನವ ತನ್ನದೆ ಗುರಿಯನ್ನು ಹೊಂದಿರಬೇಕು. ಆ ಗುರಿ ತಲುಪಬೇಕಾದರೆ ಗುರುವಿನ ಸಾನ್ನಿಧ್ಯ ಅಗತ್ಯ. ಆ ಹಿನ್ನೆಲೆಯಲ್ಲಿ ಶ್ರೀಮಠದ ಶರಣಸಂಸ್ಕೃತಿ ಉತ್ಸವ ಮನದ ಮೈಲಿಗೆ ತೊಳೆಯುವ ಉತ್ಸವವಾಗಿದೆ ಎಂದು ಹೇಳಿದರು

   ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ ಮಾತನಾಡುತ್ತ, ಮಧ್ಯಕರ್ನಾಟಕದ ನಾಡಹಬ್ಬ ಶರಣಸಂಸ್ಕೃತಿ ಉತ್ಸವ ಆರಂಭವಾಗುವ ಮುನ್ನ ಈ ಪ್ರವಚನಮಾಲೆ ಆಯೋಜಿಸಲಾಗಿದೆ. ಉತ್ಸವವು ರೈತರ ಪರವಾದ, ಮಹಿಳೆಯರ ಪರವಾದ, ಸಮಾಜದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

   ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಎಸ್.ಜೆ.ಎಂ. ಬ್ಯಾಂಕ್ ವ್ಯವಸ್ಥಾಪಕ ಟಿ.ರಾಜಶೇಖರ್, ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ ಪ್ರಾಚಾರ್ಯರಾದ ಶ್ರೀಮತಿ ಪರಂಜ್ಯೋತಿ ಮತ್ತು ಸಿಬ್ಬಂದಿವರ್ಗದವರು ಮುಂತಾದವರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ನೇತ್ರಾವತಿ ನಿರೂಪಿಸಿದರು. ಹಾಲಪ್ಪನಾಯಕ ಸ್ವಾಗತಿಸಿದರು. ಶಿಲ್ಪಾ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap