ಸುಗ್ಗಿ ಹಬ್ಬ ಸಂಕ್ರಾಂತಿಗೆ ಸಡಗರದ ಸಿದ್ದತೆ

ತಿಪಟೂರು :

       ಸುಗ್ಗಿಯ ಹಬ್ಬ ಸಂಕ್ರಾಂತಿಗೆ ಕಬ್ಬು, ಎಳ್ಳು, ಕಡಲೆ, ಗೆಣಸು ಖರೀದಿಗೆ ಜನತೆ ಮುಗಿಬಿದ್ದಿದ್ದು ನಗರದ ಸಂಚಾರಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದರು ತಲೆ ಕೆಡಿಸಿಕೊಳ್ಳದ ಆರಕ್ಷಕರು.

       ಎಲ್ಲಾ ಹಬ್ಬಗಳನ್ನು ಮಾಡುವುದು ಕಲ್ಪತರು ನಾಡಿನ ಜನತೆಯು ಎತ್ತಿದ ಕೈ. ಬರಗಾಲದ ನಡುವೆ, ಬರಸಿಡಿಲಿನಂತೆ ಬಂದ ಬೆಲೆ ಏರಿಕೆಯನಡುವೆ ಜನತೆಯು ಸಂಕ್ರಾಂತಿಗೆ ಬೇಕಾದ ಕಬ್ಬು, ಎಳ್ಳು, ಕಡಲೆ, ಗೆಣಸು ಬಾಳೆಹಣ್ಣು ಮುಂತಾದವುಗಳನ್ನು ರಸ್ತೆ ಬದಿಯಲ್ಲಿ ಹಾಕಿ ಮಾರಾಟಮಾಡುವುದು ಸಾಮಾನ್ಯವಾಗಿದ್ದು ಜನತೆಯು ಖುಷಿಯಿಂದ ಖರಿದಿಸುತ್ತಿದ್ದರು.

        ಇದರ ರಸ್ತೆ ಸಂಚಾರ ಸಂಪೂರ್ಣಹಾಳಾಗಿದ್ದು ಸಂಕ್ರಾಂತಿಗೆ ಹಾಕಿದ್ದ ಅಂಗಡಿಗಳಲ್ಲಿ ಖರೀದಿಸಲು ಆಗಮಿಸಿದ್ದ ಜನತೆಯು ರಸ್ತೆಗೆ ಗಾಡಿಗಳನ್ನುನಿಲ್ಲಿಸಿ ರಸ್ತೆಯನ್ನು ಮುಚ್ಚಿದಂತಹ ಪರಿಸ್ಥಿತಿಯನ್ನು ನಿರ್ಮಿಸಿ ಸಂಚಾರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳಾಗಿದ್ದು ಆಂಬುಲೆನ್ಸ್ ಸಹ ಇದರಮದ್ಯೆ ಸಿಲುಕಿಕೊಂಡಿತ್ತು. ಎಲ್ಲಾ ತಿಳಿದಿದ್ದರು ನಗರ ಪೋಲೀಸ್ ಠಾಣೆಯವರು ಸಿಬ್ಬಂದಿಯನ್ನು ನಿಯೋಜಿಸದಿರುವುದು ಆರಕ್ಷಕ ಇಲಾಖೆಯ ದಿವ್ಯನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.

          ಇದರಂತೆ ಸರ್ಕಾರಿ ಬಸ್‍ನಿಲ್ದಾಣ, ಪ್ರವಾಸಿ ಮಂದಿರ ವೃತ್ತದಲ್ಲಿ ಜನಸಂದಣಿ ಹೆಚ್ಚಾಗಿದ್ದು ಇಂತಹ ಸ್ಥಳಗಳಲ್ಲಿ ಸರಗಳ್ಳತನ, ಪಿಕ್‍ಪಾಕೆಟ್‍ಗಳು ಹೆಚ್ಚಾಗುತ್ತದೆ ಆದರೆ ಹಬ್ಬಗಳಲ್ಲಿ ಮುಂದೆಯಾದರು ಆರಕ್ಷರ ಇಲಾಖೆಯ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಆರಕ್ಷಕ ಇಲಾಖೆಯು ಮಾದರಿಯಾಗಬೇಕಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link