ಐತಿಹಾಸಿಕ ಪರಂಪರೆಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ- ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ

ಜಗಳೂರು:

     ಧಾರ್ಮಿಕ, ಆಚಾರ. ವಿಚಾರ, ಐತಿಹಾಸಿಕ ಪರಂಪರೆಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ ಎಂದು ರಾಮಘಟ್ಟ ಉಚ್ಚಂಗಿದುರ್ಗದ ಕಟ್ಟೀಮನೆ ರಾಜಗುರು ಪುರವರ್ಗ ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಕೊಡದಗುಡ್ಡದಲ್ಲಿ ಶುಕ್ರವಾರ ವೀರಭದ್ರಸ್ವಾಮಿಯ ನೂತನ ರಥವನ್ನು ಲೋಕಾರ್ಪಣೆ ಮಾಡಿ ಧರ್ಮ ಸಭೆಯನ್ನುದ್ದೇಶಿಸಿ ಸ್ವಾಮೀಜಿ ಮಾತನಾಡಿದರು.

     ತಮ್ಮ ಮಕ್ಕಳಿಗೆ ಸಂಸ್ಕಾರಂವತರನ್ನಾಗಿ ಮಾಡಬೇಕು. ಧಾನ, ಧರ್ಮಗಳನ್ನು ಮಾಡಿ ಪಾಪ ಪರಿಹಾರವನ್ನು ಮಾಡಿಕೊಳ್ಳಬೇಕು ಎಂದರು. ಕೊಡದ ಗುಡ್ಡದ ವೀರಭದ್ರಸ್ವಾಮಿ ದೊಡ್ಡ ಇತಿಹಾಸವನ್ನು ಹೊಂದಿದೆ. ಕೊಟ್ಟೂರಿನಲ್ಲಿದ್ದ ಸ್ವಾಮಿ ಕೊಡದಗಡ್ಡ ಬಂದು ನೆಲಸಿ ಭಕ್ತರನ್ನು ಕಾಪಾಡಿದ್ದಾನೆ ಎಂದರು.

       ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಜೀ ಮಾತನಾಡಿ, ಭೂಮಿಗೆ ಬರುವಾಗ ಯಾರು ಸಂಪತ್ತು ತರುವುದಿಲ್ಲ, ಪುನಃ ಮಣ್ಣಿಗೆ ಸೇರುವಾಗ ಗಳಿಸಿದ ಯಾವ ಅಧಿಕಾರ ಅಂತಸ್ತು ತೆಗೆದುಕೊಂಡು ಹೋಗುವುದಿಲ್ಲ, ಆದರೆ ತಾನೂ ಗಳಿಸಿದ ಸಂಪಾದನೆಯಲ್ಲಿ ಒಂದು ಭಾಗವನ್ನು ಧಾನ,ಧರ್ಮದ ಕಾರ್ಯಗಳಿಗೆ ಉಪಯೋಗಿಸಬೇಕು ಎಂದರು.

      ಜಿ.ಪಂ ಪ್ರಬಾರ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ ಮಾತನಾಡಿ, ಕೊಡದಗುಡ್ಡ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ನಡೆದಿವೆ. ಈ ಪುಣ್ಯ ಕ್ಷೇತ್ರಕ್ಕೆ ಕೈಲಾದ ಸಹಾಯ ಮಾಡುತ್ತೇನೆ. ಶ್ರೀಗಳ ಆಶೀರ್ವಾದ ನಮ್ಮ ಮೇಲಿರಲಿ ಎಂದರು.

        ಶುಕ್ರವಾರ ಬೆಳಗ್ಗೆ 6ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ನೂತನ ರಥೋತ್ಸವ ಲೋಕಾರ್ಪಣೆಯ ಅಂಗವಾಗಿ ಗಣಪತಿ ಹೋಮ, ಚಂಡಿಕಾ ಹೋಮ, ಮಹಾರುದ್ರ ಹೋಮ, ಮಹಾ ರುದ್ರಾಭಿಷೇಕ, ಕಾಳಿಕಾಂಬದೇವಿ ಕುಂಕುಮಾರ್ಚನೆ ಸೇರಿದಂತೆ ಪೂಜಾ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಮಾರ್ಚ್ 22ಕ್ಕೆ ಮಹಾರಥೋತ್ವ ಜರುಗಲಿದೆ.

         ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಉಮಾ ವೆಂಕಟೇಶ್, ಶಾಂತಕುಮಾರಿ, ತಾ.ಪಂ ಅಧ್ಯಕ್ಷೆ ಮಂಜುಳಾ, ಜಿ.ಸ. ಬ್ಯಾ. ನಿ ಮಾಜಿ ಉಪಾಧ್ಯಕ್ಷ ಪಿ.ಎಸ್ ಸುರೇಶ್ ಗೌಡ್ರು, ವಿಎಸ್‍ಎಸ್‍ಎನ್ ಅಧ್ಯಕ್ಷ ಬಸವಾಪರು ರವಿಚಂದ್ರ, ಮಾಜಿ. ಗ್ರಾ.ಪಂ ಅಧ್ಯಕ್ಷ ಗುರುಸ್ವಾಮಿ, ಸಮಿತಿ ಅಧ್ಯಕ್ಷ ಉಮೇಶ್ ಸಿಪಿಐ ಬಿಕೆ ಲತಾ, ಬೆಂಗಳೂರು ಜಿ. ಕಲ್ಲಪ್ಪ ಎಲೆಮನೆ, ಸಮಿತಿ ಕಾರ್ಯದರ್ಶಿ ಗೌಡ್ರು ರುದ್ರಸ್ವಾಮಿ, ಎಂ.ಪಿ ಶಿವಕುಮಾರಸ್ವಾಮಿ, ಮುಖಂಡ ವೆಂಕಟೇಶ್ ಸೇರಿದಂತೆ ಮತ್ತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap