65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ

ಹರಪನಹಳ್ಳಿ:

        ಗ್ರಾಮೀಣರ ಬದುಕು ಸಮೃದ್ಧಿಗೊಳಿಸುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿದೆ. ಒಂದೇ ವೇದಿಕೆಯಡಿ ರೈತರ ಎಲ್ಲ ಸೌಲಭ್ಯ ಕಲ್ಪಿಸಿದರೆ ಬದುಕು ಹಸನಾಗುತ್ತದೆ ಎಂದು ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ.ಪ್ರಕಾಶ ಹೇಳಿದರು.
ಪಟ್ಟಣದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಳಗಳ ವಿವಿಧ ಸಂಘಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

          ಎಲ್ಲ ರಂಗದಲ್ಲೂ ಸಹಕಾರಿ ಕ್ಷೇತ್ರ ಛಾಪು ಮೂಡಿಸಿದೆ. ಹಳ್ಳಿಗಳ ಅಭಿವೃದ್ಧಿ, ಗುಡಿ ಕೈಗಾರಿಕೆಗೆ ಮಾರುಕಟ್ಟೆಯ ಮುಖ್ಯ ಧೈಯವಾಗಿಟ್ಟುಕೊಂಡು ಸಹಕಾರಿ ಸಂಘ ಪ್ರೇರಣೆ ನೀಡುತ್ತಿದೆ. ದೇಶದ ಆರ್ಥಿಕ ಸ್ಥಿತಿ ಸುಧಾರಿಸುವಲ್ಲಿ ಸರ್ಕಾರ ಹಾಗೂ ಸಹಕಾರಿ ಕ್ಷೇತ್ರಗಳ ಸೇವೆ ಪ್ರಮುಖವಾಗಿದೆ ಎಂದರು.

          ಮೌಲ್ಯವರ್ಧನೆ ಮತ್ತು ಬ್ರ್ಯಾಂಡ್ ನಿರ್ಮಾಣ ವಿಷಯ ಕುರಿತು ಅವರು ಉಪನ್ಯಾಸ ನೀಡಿದ ರಾಜ್ಯ ಪತ್ರಿಕಾ ವ್ಯಂಗ್ಯ ಚಿತ್ರಕಾರರ ಸಂಘದ ಪ್ರಧಾನ ಪೋಷಕ ಎಚ್.ಬಿ.ಮಂಜುನಾಥ್, ಸಹಕಾರಿ ಕ್ಷೇತ್ರದಡಿ ತಯಾರಾಗುವ ಗುಡಿಕೈಗಾರಿಕೆ ವಸ್ತುಗಳಿಗೆ ಜಾಗತಿಕ ಮನ್ನಣೆ ದೊರೆಯಬೇಕಾದರೆ ಮಾಹಿತಿ ತಂತ್ರಜ್ಞಾನದ ಸಕಾರಾತ್ಮಕ ಬಳಕೆ ಮಾಡುವುದು ಅನಿವಾರ್ಯ ಆಗಿದೆ ಎಂದರು.

            ಸೇವೆಯಲ್ಲಿ ಕೌಶಲ್ಯ ಅಳವಡಿಸಿಕೊಂಡರೆ ಸಾಮಾನ್ಯ ಕೃಷಿಕನೂ ಜಾಗತಿಕ ಮಾರುಕಟ್ಟೆಯಲ್ಲಿ ಹೆಸರು ಮಾಡಬಹುದು. ಹಳೆಯ ಸಂಪ್ರದಾಯಕ್ಕೆ ಜೋತು ಬೀಳದೇ ಹೊಸ ಆವಿಷ್ಕಾರಗಳಿಗೆ ಹೊಂದಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಇವುಗಳ ಮೌಲ್ಯವರ್ಧನೆಗೆ ಪ್ರಚಾರ ಹಾಗೂ ಶಿಕ್ಷಣ ಅಗತ್ಯವಾಗಿದೆ ಎಂದರು.

           ಉದ್ಘಾಟಿಸಿ ಮಾತನಾಡಿದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಜಿ.ಆರ್. ಷಣ್ಮುಖಪ್ಪ, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಆರಂಭಗೊಂಡ ಸಹಕಾರಿ ಕ್ಷೇತ್ರ ಇಂದು ಬೃಹತ್ತಾಕಾರದಲ್ಲಿ ಬೆಳೆದು ನಿಂತಿದೆ. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ರೈತನಿಗೆ ಏನೂ ಸೌಲಭ್ಯ ಕೊಡಬೇಕಿತ್ತು ಅದನ್ನು ಸರ್ಕಾರಗಳು ಮಾಡುತ್ತಿಲ್ಲ. ಬೆಳೆಗಳಿಗೆ ಬೆಂಬಲ ಬೆಲೆ ಘೋಷನೆ ಹಾಗೂ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಿದರೆ ಸಾಲಮನ್ನಾ ಮಾಡುವ ಅವಶ್ಯಕತೆ ಸರ್ಕಾರಕ್ಕೆ ಬರಲ್ಲ ಎಂದರು.

         ಬೆಂಗಳೂರು ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಜಿ.ನಂಜನಗೌಡ್ರ ಮಾತನಾಡಿ, ಮತಬ್ಯಾಂಕ್ ಗಾಗಿ ಸಾಲಮನ್ನಾದಂತ ಯೋಜನೆ ತಂದು, ಅದಕ್ಕೆ ಕಠಿಣ ನಿಯಮ, ಹಲವು ನಿರ್ಬಂಧ ಹೇರಲಾಗುತ್ತಿದೆ. ಇದರಿಂದ ಸಹಕಾರಿ ಸಿಬ್ಬಂದಿಗೆ ಪುನಃ ಹೆಚ್ಚು ಕೆಲಸದ ಭಾರ ಬಿಳುತ್ತದೆ. ಸರ್ಕಾರ ಕಾಳಜಿ ಇದ್ದರೆ ನೇರವಾಗಿ ರೈತರ ಮೇಲೆ ಸಾಲಮನ್ನಾ ಮಾಡಲಿ ಎಂದರು.

          ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಆರ್.ಹನುಮಂತಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ಬಿ.ರಾಮಪ್ಪ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಪೋಮ್ಯಾನಾಯ್ಕ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುವರ್ಣ ಆರುಂಡಿ ಮಾತನಾಡಿದರು.

         ಟಿಎಪಿಸಿಎಂಎಸ್ ಅಧ್ಯಕ್ಷ ಕುಲುಮಿ ಅಬ್ದುಲಸಾಬ್, ಅಟಲ್ ಸೌಹಾರ್ದ ಸಹಕಾರಿ ಅಧ್ಯಕ್ಷ ಜೆ.ಓಂಕಾರಗೌಡ, ಉಚ್ಚಂಗಿದುರ್ಗದ ಹೊಸಹಳ್ಳಿ ಬಸವೇಶ್ವರ ಸಂಘದ ಅಧ್ಯಕ್ಷ ಕೆ.ಎಂ.ಶಿವಕುಮಾರಯ್ಯ, ಸಂಸ್ಕಾರ ಸಂಘದ ಅಧ್ಯಕ್ಷ ರಾಣಮಲ್ ಜೈನ್, ಡಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪಿ.ರಾಜಣ್ಣ, ಡಿಸಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿಗಳಾದ ಪಿ.ಲಿಂಗನಗೌಡ್ರ, ಎಚ್.ಅಂಜಿನಪ್ಪ ಸೇರಿದಂತೆ ಇತರರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link