ಬೆಂಗಳೂರು
ಹಾಸನ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಕುತಂತ್ರ ರಾಜಕಾರಣ ಮಾಡುತ್ತಿದ್ದರೆನ್ನಲಾದ ವಿಡಿಯೋವೊಂದು ಬಯಲಾಗಿದೆ. ಜೆಡಿಎಸ್‍ಗೆ ಮತ ಹಾಕುತ್ತೇವೆ ಎಂದು ಹೇಳಿ ಹಣ ತೆಗೆದುಕೊಂಡು ಕೊನೆಗೆ ಬಿಜೆಪಿಗೆ ಮತ ಹಾಕಿ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಅವನಿಗೆ ಮೋಸದಿಂದಲೇ ಸೋಲಿಸಿ. ಈಗ ಬೂತ್‍ಗೆ 1 ಲಕ್ಷ ನೀಡುತ್ತಿದ್ದಾರೆ. ಸೋತರೆ ಮುಂದಿನ ಚುನಾವಣೆಯಲ್ಲಿ 5 ಲಕ್ಷ ನೀಡುತ್ತಾರೆ. ಸೋತಾಗಲೇ ಅವರು ಕಾರ್ಯಕರ್ತರನ್ನ ಕರೆದು ಕೆಲಸ ಕೊಡೋದು ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗ್ತಿದೆ.
ಪ್ರೀತಂ ಗೌಡ ವಿಡಿಯೋ ಎಲ್ಲೆಡೆ ವೈರಲ್‍ಈಗ ನೀವು ಪ್ರಜ್ವಲ್ ಗೆಲ್ಲಿಸಿದರೆ ಅವನಿಗೆ ದುರಹಂಕಾರ ಹೆಚ್ಚಾಗುತ್ತೆ. ಮುಂದೆ ಅವ್ನು ಯಾರನ್ನೂ ಸರಿಯಾಗಿ ಮಾತನಾಡಿಸಲ್ಲ. ಈ ಚುನಾವಣೆಯಲ್ಲಿ ಅವನನ್ನು ಸೋಲಿಸಿ ಎಂದು ಕರೆ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








