ದಿನಸಿಗೆ ಹೆಚ್ಚು ಬೆಲೆ ಪಡೆದರೆ ಕಠಿಣ ಕ್ರಮ

ಪಾವಗಡ

     ದಿನಸಿ ವಸ್ತುಗಳಿಗೆ ಹೆಚ್ಚಿಗೆ ಹಣ ಪಡೆದರೆ ಅಂತಹ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಂದು ಡಿವೈಎಸ್‍ಪಿ ಪ್ರವೀಣ್ ಡಿ. ಎಚ್ಚರಿಕೆ ನೀಡಿದ್ದಾರೆ.

     ಅವರು ಶನಿವಾರ ತಾಲ್ಲೂಕು ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಪತ್ರಿಯೊಬ್ಬ ಅಂಗಡಿ ಮಾಲೀಕರು ಅಂಗಡಿಗೆ ಗ್ರಾಹಕರು ಬಂದರೆ 4 ಅಡಿ ದೂರದಲ್ಲಿ ನಿಂತು ವ್ಯಾಪಾರ ಮಾಡಲು ಅರಿವು ಮೂಡಿಸಬೇಕೆಂದು ತಿಳಿವಳಿಕೆ ನೀಡಿದರು.
ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 11 ಗಂಟೆ ತನಕ ವ್ಯಾಪಾರ ವಹಿವಾಟು ಮಾಡಬೇಕು. ಪ್ರತಿಯೊಬ್ಬ ಗ್ರಾಹಕನಿಗೆ ದಿನಸಿ ವಸ್ತುಗಳು ಬೇಕಾಗಿರುವುದರಿಂದ ಇದನ್ನು ಮನಗಂಡು ಮಾರುಕಟ್ಟೆ ಬೆಲೆಗಿಂತ ಹೆಚ್ಚಿಗೆ ಮಾರಾಟ ಮಾಡುವಂತಿಲ್ಲ. ಅಂತಹ ದೂರು ಬಂದರೆ ಅಂತವರ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಅವರು ಮನವರಿಕೆ ಮಾಡಿಕೊಟ್ಟರು.

     ಪಾವಗಡ ತಾಲ್ಲೂಕಿನ ಆಂಧ್ರ ಗಡಿಭಾಗದ ಗ್ರಾಮಗಳಲ್ಲಿ ಮದ್ಯ ಮಾರಾಟ ವಾಗುತ್ತಿರುವುದಾಗಿ ಮಾಹಿತಿ ಬಂದಿದೆ. ತಕ್ಷಣವೆ ಅಂತಹ ಅಂಗಡಿ ಮಾಲೀಕರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಅಬಕಾರಿ ಇಲಾಖೆಯ ಸಿಬ್ಬಂದಿಗೆ ಸೂಚಿಸಿದರು.

     ಪಾವಗಡ ತಾಲ್ಲೂಕಿನಲ್ಲಿ ಜೂಜಾಟ ಹೆಚ್ಚಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ತಕ್ಷಣವೆ ಮಾಹಿತಿ ಪಡೆದು ಅಂತಹವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಆದೇಶಿಸಿದರು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗುಂಪು ಗುಂಪಾಗಿ ಜನ ಸೇರಿದರೆ ಅಂತಹವರ ಮೇಲೆ ಯಾರದೂ ಮುಲಾಜಿಲ್ಲದೆ ಗುಂಪನ್ನು ಚದುರಿಸಲು ಲಾಠಿಗೆ ಕೆಲಸ ಕೊಡಿ ಎಂದರು.

     ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ಮಾತನಾಡಿ, ಭಾನುವಾರದಿಂದ ಹೊಸ ಬಸ್‍ನಿಲ್ದಾಣದಲ್ಲಿ ತರಿಕಾರಿ ಮಾರಾಟ ಮಾಡಲು ಸೂಚಿಸಲಾಗಿದೆ. ಗ್ರಾಹಕರು ಬೆಳಗ್ಗೆ 6 ಗಂಟೆಯಿಂದ 11 ಗಂಟೆಯ ತನಕ ತರಕಾರಿ ಪಡೆಯಬಹುದು. ಪಟ್ಟಣದ ರಸ್ತೆಗಳಲ್ಲಿ ಮಾರಾಟ ಮಾಡಬಾರದು. ಯಾರಾದರು ಮಾರಾಟ ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ವರದರಾಜು, ಸಿ.ಪಿ.ಐ ಡಿ.ನಾಗರಾಜು, ಪಿ.ಎಸ್.ಐ ಜೆ.ಆರ್.ನಾಗರಾಜು, ಆರ್.ಐ.ರಾಜಗೋಪಾಲ್, ಗಿರೀಶ್ ಮತ್ತು ದಿನಸಿ ಅಂಗಡಿ ಮಾಲೀಕರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link